100 ಕನ್ನಡ ಒಗಟುಗಳು ಮತ್ತು ಉತ್ತರಗಳು – ಕನ್ನಡ ಒಗಟುಗಳು ಹಳ್ಳಿಯ ಜನರಿಂದ ಬಂದವು . ಇವು ಒಬ್ಬರು ಇನ್ನೊಬ್ಬರಿಗೆ ಸವಾಲನ್ನುಅಥವಾ ಸಮಸ್ಯೆಯನ್ನು ಹಾಕಿ ಅದಕ್ಕೆ ಉತ್ತರವನ್ನು ಪಡೆಯುವ ಕ್ರಮವಾಗಿದೆ .
50 ಒಗಟುಗಳು ಮತ್ತು ಉತ್ತರಗಳು, ಹೊಸ ಒಗಟುಗಳು ಕನ್ನಡ, Kannada Ogatugalu in kannada, kannada language kannada ogatugalu
100 ಒಗಟುಗಳು – Kannada Ogatugalu
1.ಜುಟ್ಟು ಇದೆ ಮುನಿಯಲ್ಲ,ಮೂರೂ ಕಣ್ಣಿದ್ದರೂ ಈಶ್ವರನಲ್ಲ,ಹಾಲಿದ್ದರು ಆಕಳಲ್ಲ,ದೇಹ ಇಬ್ಬಾಗವಾದರೂ,ತಿರುಳು ನೀಡುವ ದೇವಪ್ರಿಯನಿತ.- ತೆಂಗಿನಕಾಯಿ .
2.ನೀರಲ್ಲೇ ಹುಟ್ಟುತ್ತದೆ,ನೀರಲ್ಲೇ ಬೆಳೆಯುತ್ತದೆ,ನೀರಲ್ಲೇ ಸಾಯುತ್ತದೆ ?- ಉಪ್ಪು
3.ಗಿರಗಿರ ತಿರಗುತ್ತದೆ , ಸುಸ್ತಾಗಿ ಬೀಳುತ್ತದೆ –ಬುಗುರಿ
4. ಅಪ್ಪನ ಹಾಸಿಗೆ ಹಾಸಲಾರೆ,ಅವ್ವನ ಕಡುಬು ಎಣಿಸಲಾರೆ,ನಾನು ಯಾರು? – ಆಕಾಶ, ನಕ್ಷತ್ರ
5.ಅಕ್ಕಾತಂಗೆರು ಮೂವರು ಕೆರಿಯಾಗ ಬಿದ್ರು ಒಬ್ಬಾಗಿ ಮುಳಗಿದಳು, ಒಬ್ಬಾಕಿ ತೇಲಿದಳು,ಮತ್ತೊಬ್ಬಾಕಿ ಕರಗಿ ಹೋದಳು,ಯಾರಿವರು? – ಎಲಿ,ಅಡಕಿ,ಸುಣ್ಣ.
6.ಕೊಂಡಿ ತಟ್ಟಿದರೆ ಸಾಕು ಕುಂಡಿಯೆಲ್ಲ ಉರಿ ಯಾರಿದು?- ಚೇಳು
7.ಕೈಯಿಲ್ಲ ಕಾಲಿಲ್ಲ ,ಹೆಸರಿಲ್ಲ ದೆಸೆಯಿಲ್ಲ ಆದ್ರೂ ಮನೆಬಿಟ್ಟು ಓಡುತ್ತಾನೆ ,ಹಿಡಿಲಿಕ್ಕೆ ಮಾತ್ರ ಆಗೋದಿಲ್ಲ,? – ಸಾವು ದೇಹ ಅಥವಾ ಆತ್ಮ.
8.ಸಂತ್ಯಾಗಿಂದ ತರೋದು ಮುಂದಿಟ್ಟುಕೊಂಡು ಅಳೋದು ಏನಿದು ? – ಉಳ್ಳಾಗಡ್ಡಿ ಅಥವಾ ಈರುಳ್ಳಿ.
9. ಹೊಲದಲ್ಲೇ ಹುಟ್ಟೋದು ,ಹೊಲದಲ್ಲೇ ಬೆಳೆಯೋದು, ಉಳುವಾಗ ಕಂಡು ನಗುವುದು- ಗರಿಕೆ ಹುಲ್ಲು .
10. ಬಿಂಕದ ಸಿಂಗರಿಗೆ ಮೈಯೆಲ್ಲಾ ಉರಿ ,ಯಾರಿದು? – ಮೆಣಸಿನಕಾಯಿ
11. ಅರಮನೆಯೇ ಇಲ್ಲದ ಮಹಾರಾಜ ಸೆರೆಮನೆಯೊಳಿರುವನು , ಯಾರಿವನು? – ಸಿಂಹರಾಜ.
12. ಉದ್ದಾನಯನ್ನ ಸುಟ್ಟರೆ ಇದ್ದಿಲಾಗೋದಿಲ್ಲ,ಬುಡೀನು ಆಗೋದಿಲ್ಲ,ಏನಿದು? – ಕೂದಲು.
13.ಜೋತದೋ ಹಾವನ್ನು ಜಂ ಅಂತ ತಿಂತಾರ, ಏನಿದು?- ಪಡವಲಕಾಯಿ.
14.ಮುಳ್ಳಮ್ಮನ ಹೊಟ್ಯಾಗ ಮುನ್ನೂರು ಮಕ್ಕಳು,ಯಾರಿವಳು? – ಹಲಸಿನಕಾಯಿ .
15. ರೆಕ್ಕೆ ಇಲ್ಲ,ಪುಕ್ಕ ಇಲ್ಲ , ಎಲ್ಲೆಂದರಲ್ಲಿ ಹಾರಾಡುತ್ತದೆ ,ಏನಿದು? – ಮನಸ್ಸು.
16. ಆರು ಗೆರೆಯಿದ್ದರೂ ಹೀರೆಕಾಯಲ್ಲ, ಹುಲಿಯಿದ್ದರೂ ಲಿಂಬೆಕಾಯಲ್ಲ,ಹಸಿರಿದ್ದರು ನಿಂಬೆಕಾಯಲ್ಲ,ಏನಿದು?- ನೆಲ್ಲಿಕಾಯಿ .
17. ದುಂಡಾಗಿರುವ ನನಗೆ ಕೈಯಿಲ್ಲ ಕಾಲಿಲ್ಲ ಮಯಿ ಮಾತ್ರ ಇದೆ, ಸುಟ್ಟರೆ ಸಾಯಲಾರೆ, ಬಡಿದರೆ ಬದುಕಲಾರೆ ನಾನು ಯಾರು? – ಮಡಿಕೆ.
18.ಕರಿ ಹೊಲದ ಮದ್ಯದಲ್ಲಿ ಬಿಳಿದಾರ .- ಬೈತಲೆ .
19.ಸೂಜಿಗಿಂತು ಸಣ್ಣ,ಕಾಗೆಗಿಂತು ಕಪ್ಪು, ಏನಿದು? – ಕೂದಲು .
20.ಅಲ್ಲಿ ಬುಳು ಬುಳು ,ಇಲ್ಲಿ ಬುಳು ಬುಳು ,ಕಲ್ಯಾಣದಲ್ಲಿ ಬುಳು ಬುಳು – ಬಿಸುವಕಲ್ಲು.
21.ಮುಲ್ಲಿದ್ದರು ಮರವಲ್ಲ, ಅಂಕೆಯಿದ್ದರೂ ಪುಸ್ತಕವಲ್ಲ,ಚಕ್ರವಿದ್ದರೂ ಗಾಡಿಯಲ್ಲ, ಗಂಟೆಯಿದ್ದರೂ ಗುಡಿಯಲ್ಲ, ಯಾರು ನಾನು? – ಗಡಿಯಾರ.
22.ಕಂಠದಲ್ಲಿ ಕಪ್ಪಿದ್ದರು ಕರಿಕಂಠನಲ್ಲ, ಶಿರದೊಳಗೆ ಜುಟ್ಟಿದ್ದರು ವಿಪ್ರ ತಾನಲ್ಲ ಮೈಯೊಳು ಕಣ್ಣಿದ್ದರೂ ದೇವೇಂದ್ರನಲ್ಲ.ಯಾರು ನಾನು? –ನವಿಲು.
23. ಅಂಕು ಡೊಂಕಿನ ಬಾವಿ,ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರು ಇಲ್ಲ.- ಕಿವಿ.
24.ಬಂಗಾರದ ಗುಬ್ಬಿ, ಬಲದಿಂದ ನೀರು ಕುಡಿಯುತ್ತದೆ ಏನದು?- ದೀಪ.
25. ಸುತ್ತಲೂ ಸುಣ್ಣದ ಗೋಡೆ , ಯಾವ ಕಡೆ ನೋಡಿದರು ಬಾಗಿಲಿಲ್ಲ ? – ಕೋಳಿತತ್ತಿ .
26.ಚೋಟುದ್ದ ಹುಡುಗಿ ಮಾರುದ್ದ ಜಡೆ – ಜೂಜಿ ದಾರ
27.ಎರಡು ಮನೆ, ಒಂದೇ ಕಂಬ- ಮೂಗು
28. ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ – ತುರುಬು.
29.ನಾಡು ಸಣ್ಣ ನಗರ ಬಣ್ಣ ಹಿಡಿಯಲಿಕ್ಕೆ ಹೋದರೆ ಕಡಿಯಲಿಕ್ಕೆ ಬರುತ್ತದೆ.- ಕಂಜರಗಿ ಹುಳ.
30.ಗಿಡಗಿಡಕ್ಕೆ ಕುಡುಗೋಲು ಕಟ್ಟಿದೆ- ಹುಣಸೆಕಾಯಿ
31.ಮೇಲೆ ಬೆಂಕಿ,ಕೆಳಗೆ ಬೇರು, ಬೇರಿನ ಕೆಳಗೆ ನೀರು – ಚಿಮಣಿ
32. ಗಿಡಗಿಡಕ್ಕೆ ಮೊಸರು ಉಗ್ಗಿದೆ.-ಮಲ್ಲಿಗೆ ಹೂವು
33.ನೆತ್ತಿಯಲಿ ತಿಂದು ಪಕ್ಕದಲ್ಲಿ ಸುರಿಸುವುದು, ಸುದತಿಯರ ಕರದಲ್ಲಿ ತಿರುಗುವುದು, ಒತ್ತಿದರೆ ಅದರೊಳಗೆ ದವಸ , ಬಿತ್ತಿರಿಸಿ ಹೇಳಿ ನಿಮ್ಮ ಮನೆಯಲಿಹುದು.- ಬಿಸುವಕಲ್ಲು.
34.ಮುಂದೆ ಬಾಯೊಳಗಿಕ್ಕೂ,ಚಂಡಿಯೇಗ ಹೊರಗಿಕ್ಕು,ಹೆಂಡತಿಯ ಬರುತಿಕ್ಕುಕಡೆಯೊಂದು ಉಡೆಯೆಕ್ಕು ಸರ್ವಜ್ಞ- ಕಡಗೋಲು .
35.ಕಾಲಿದ್ದರು ನಡೆಯದು, ಮೂಲೆಯಲಿ ಕಟ್ಟಿಹುದು,ಬಾಲಕನನ್ನು ಹೊರುವುದು, ಯಾವುದು?- ತೊಟ್ಟಿಲು .
36.ಹೋದರು ಇರುತ್ತೆ ಬಂದರು ಕಾಡುತ್ತೆ,ಏನು ಇದು ? – ನೆನಪು.
37.ನೀಲಿ ಸಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು ? – ತಾರೆಗಳು.
38.ಬಿಡಿಸಿದರೆ ಹೂವು, ಮಡಿಚಿದರೆ ಮೊಗ್ಗು- ಛತ್ರಿ
39. ಅರೆಯುವ ಕಲ್ಲು,ಕಲ್ಲಿನ ಮೇಲೆ ಕೊರಡು,ಕೊರಡನ ಮೈಮೇಲೆರಡು ಕೈ,ಸುಗಂಧ ಸೂಸಿ ಬರುವುದು.- ಗಂಧದ ಕೊರಡನ್ನು ತೇಯುವುದು.
40.ನಾಲ್ಕು ಕಾಲುಗಳಿದ್ದರು ಪ್ರಾಣಿ ನಾನಲ್ಲ,ಬೆನ್ನು ತೋಳುಗಲುಂಟು ಮನುಷ್ಯ ನಾನಲ್ಲ, ಹಾಗಾದರೆ ನಾನು ಯಾರು ಹೇಳಬಲ್ಲಿರಾ ? – ಕುರ್ಚಿ
41.ಹಸಿರು ಕೋಟೆಯೊಳಗೊಂದು ಬಿಳಿಯ ಕೋಟೆ, ಬಿಳಿಯ ಕೋಟೆಯೊಳಗೊಂದು ಕೆಂಪು ಕೋಟೆ, ಕೆಂಪು ಕೋಟೆಯೊಳಗೆ ಕರಿಯ ಸೈನಿಕರು – ಕಲ್ಲಂಗಡಿ ಹಣ್ಣು
42.ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು –ತಾರೆ
43.ಹಸಿರು ಕೋಲಿಗೆ ಮುತ್ತಿನ ತುರಾಯಿ – ಜೋಳದ ತೆನೆ
44.ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ –ಕಣ್ಣು
45.ಬಾಯಲ್ಲಿ ಹಲ್ಲಿಲ್ಲ ,ಮೈಯಲ್ಲಿ ಶಕ್ತಿ ಇಲ್ಲ, ತಲೆಯಲ್ಲಿ ಕೂದಲಿಲ್ಲ,ಆದ್ರೂ ಎಲ್ಲರನ್ನು ಕಾಡುತ್ತೀನಿ – ಸೊಳ್ಳೆ
46.ಅಕ್ಷರಗಳಿದ್ದರೂ ಪುಸ್ತಕವಲ್ಲ ,ಸಿಂಹವಿದ್ದರೂ ಅರಣ್ಯವಲ್ಲ ,ದುಂಡಾಗಿದ್ದರು ಚಕ್ರವಲ್ಲ , ನಾನ್ಯಾರು?- ನಾಣ್ಯ
47. ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆತುಂಬ – ದೀಪದ ಬೆಳಕು.
48.ಗಂಟೆ ಹೊಡೆಯುತ್ತಾನೆ ಪೂಜಾರಿಯಲ್ಲ,ಪೇಪರ್ ಹರಿಯುತ್ತಾನೆ ಆದರೆ ಹುಚ್ಚನಲ್ಲ,ಹಣ ಕೇಳುತ್ತಾನೆ ಭಿಕ್ಷುಕನಲ್ಲ ನಾನ್ಯಾರು ?- ಕಂಡಕ್ಟರ್
49.ಕಾಲಿಲ್ಲದೆ ನಡೆಯುವುದು ,ಬಾಯಿಲ್ಲದೆ ನುಡಿಯುವುದು ,ಇದರೆ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು ,- ನದಿ
50 ಒಗಟುಗಳು ಮತ್ತು ಉತ್ತರಗಳು
50.ಬಲಗೈಯಲ್ಲಿ ಗೀತೆ ,ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು?- ಗಾಂಧೀಜಿ
51.ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ – ಕಣ್ಣು
52.ಮಣ್ಣ ಬಣ್ಣ ನೀಲಿ ಕಣ್ಣು ಸಣ್ಣ ಜೀವಿ ನಾನು ಸಂಜೆ ಹೊತ್ತು ಕೆರೆಯ ಸುತ್ತು ಗೊಟರ್ ಗೊಟರ್ ನೋಡಿರುವೆಯ ನೀನು?- ಕಪ್ಪೆ
53.ಉಣ್ಣೆಯಂತೆ ನುಣ್ಣಗಾರ ರೋಮವಿರುವ ಬೆನ್ನ ಮೇಲೆ ಬಿಳಿಯ ಮೂರೂ ಗೆರೆಗಳಿಹುವು ನಾನು ಯಾರು?- ಅಳಿಲು
54.ಇಬ್ಬರು ಸಹೋದರರು ನೆರೆಕೆರೆಯವರಾದರು ಒಬ್ಬರನ್ನೊಬ್ಬರು ನೋಡಲಾರರು –ಕಣ್ಣುಗಳು
55.ಒಂಟೆ ಕಾಲು ಕೊಕ್ಕರೆಗೆ ಸಾವಿರಾರು ರೆಕ್ಕೆ- ದಾರಿ
56.ಚೋಟುದ್ದ ರಾಜ ಮೇಟುದ್ದ ಟೋಪಿ ಹಾಕ್ಕೊದು ಜಟ್ಪಟ್ ಅಂತ ಓಡಾಡಿದರೆ ಒಂದು ನಿಮಿಷದಲ್ಲಿ ಬೂದಿ – ಬೆಂಕಿ ಕಡ್ಡಿ
57.ಸಂಜೆ ತನಕ ಬಡಿದ್ರು ಸದ್ದಾಗಲ್ಲ – ಕಣ್ಣಿನ ರೆಪ್ಪೆ
58-ಒಂದು ಹಸ್ತಕ್ಕೆ ನೂರೆಂಟು ಬೆರಳು-ಬಾಳೆ ಗೊನೆ
59.ಅಗಲವಾದ ಮಾಳಿಗೆಗೆ ಒಂದೇ ಕಂಬ – ಛತ್ರಿ
60.ಅಪ್ಪನಿಗಿಂತ ಮಗನೆ ಮೊದಲು ಹುಟ್ಟುತ್ತಾನೆ- ಹೋಗೆ
61.ಐದು ಮನೆಗೆ ಒಂದೇ ಅಂಗಳ – ಅಂಗೈ
62.ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ
63.ಬಿಳಿ ಕುದುರೆ ಹಸಿರು ಬಾಲ – ಮೂಲಂಗಿ
64.ಹಗ್ಗ ಹಾಸಿದೆ ಹಸು ಮಲಗಿದೆ- ಕುಂಬಳಕಾಯಿ
65.ಬಣ್ಣದ ಸೀರೆ ಉಟ್ಕೊಂಡು ಮಣ್ಣಾಗ ಕುಂತಾಳ – ಕ್ಯಾರೆಟ್
66.ನಾನು ತುಳಿದೆ ಅದನ್ನ, ಅದು ತುಳಿತು ನನ್ನನ್ನ –ನೀರು
67.ಒಂದೇ ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು –ಬದನೇಕಾಯಿ
68.ಮೇಲೆ ನೋಡಿದರೆ ನಾನಾ ಬಣ್ಣ,ಉಜ್ಜಿದರೆ ಒಂದೇ ಬಣ್ಣ-ಸಾಬೂನು
69.ಒಬ್ಬರನ್ನು ಹಿಡಿದರೆ ಎಲ್ಲರ ದರ್ಜೆಯು ಗೊತ್ತಾಗುತ್ತದೆ –ಅನ್ನದ ಅಗಳು
70.ನೀರಿಲ್ಲದ ಸಮುದ್ರ ,ಜನರಿಲ್ಲದ ಪಟ್ಟಣ,ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?- ನಕ್ಷೆಗಳು
ಇದನ್ನು ಕೂಡ ಓದಿ – kannada letter Writing in Kannada । ಕನ್ನಡ ಪತ್ರ ಲೇಖನ ವಿಧಗಳು
71.ಗಿಡ ಕೊಡಲಾರದು ಮರ ಬೆಳೆಸಲಾರದು,ಅದಿಲ್ಲದೆ ಊಟ ಸೇರಲಾರದು –ಉಪ್ಪು
72.ಹಾರಿದರೆ ಹನುಮಂತ ಕೂತರೆ ಮುನಿ ,ಕೂಗಿದರೆ ಕಾಡಿನ ಒಡೆಯ –ಕಪ್ಪೆ
73.ಮಣ್ಣು ಆಗಿದೆ ಕಲ್ಲು ಸಿಕ್ಕಿತು ,ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು,ಬೆಳ್ಳಿ ಒಡೆದೆ ನೀರು ಸಿಕ್ಕಿತು- ತೆಂಗಿನಕಾಯಿ
74.ಹೊಕ್ಕಿದ್ದು ಒಂದಾಗಿ,ಅದು ಹೋರಾಡಿದ್ದು ನೂರಾಗಿ- ಶಾವಿಗೆ
75.ಹೊಂಚು ಹಾಕಿದ ದೆವ್ವ ಬೇಡ ಬೇಡ ಎಂದರು ಜೊತೆಯೇ ಬರುತ್ತೆ –ನೆರಳು
76.ಮೋಟು ಗೋಡೆ ಮೇಲೆ ದೀಪ ಉರಿಯುತ್ತಿದೆ – ಮೂಗುಬೊಟ್ಟು
77.ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬಾ ಮರಿಗಳು –ಕೋಳಿ
78.ಗುಡುಗು ಗುಡುಗಿದರೆ ಸಾವಿರ ನಯನಗಳು ಅರಳುವುದು –ನವಿಲು
79.ಸಾವಿರಾರು ಹಕ್ಕಿಗಳು ಒಂದೇ ಬಾರಿಗೆ ನೀರಿಗಿಳಿತಿವೆ- ಅಕ್ಕಿ
80.ಸಾಗರ ಪುತ್ರ ,ಸಾರಿನ ಮಿತ್ರ-ಉಪ್ಪು
81.ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ- ಬದನೇಕಾಯಿ
82.ಅಬ್ಬಬ್ಬಾ ಹಬ್ಬ ಬಂತು ಸಿಹಿ ಕಹಿ ಎರಡು ತಂತು -ಯುಗಾದಿ
83.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ- ದಾರಿ
84.ಕಾಡಿದರೆ ಕಟ್ಟೋಕೆ ಆಗಲ್ಲ,ಹಿಡಿದ್ರೆ ಮುಟ್ಟೋಕೆ ಸಿಗಲ್ಲ-ನೀರು
85.ಊಟಕ್ಕೆ ಕುಳಿತವರು ಹನ್ನೆರಡು ಜನರು ,ಬಡಿಸುವವರು ಇಬ್ಬರು ಒಬ್ಬನು ಒಬ್ಬರಿಗೆ ಬಡಿಸುವಷ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸುತ್ತಾನೆ-ಗಡಿಯಾರ
86-ಇದ್ದಲು ನುಂಗುತ್ತ,ಗದ್ದಲ ಮಾಡುತ್ತಾ,ಉದ್ದಕ್ಕೂ ಒಡುತ್ತಾ ಮುಂದಕ್ಕೆ ಸಾಗುವ ನಾನು ಯಾರು?- ರೈಲು
87.ಎಲೆ ಇಲ್ಲ ಸುಣ್ಣ ಇಲ್ಲ ಬಣ್ಣವಿಲ್ಲ ತುಟಿ ಕೆಂಪವಾಗಿದೆ.ಮಳೆ ಇಲ್ಲ ಬೆಲೆ ಇಲ್ಲ ಮೈ ಹಸಿರಾಗಿದೆ.- ಗಿಳಿ
88.ಮನೆ, ಮನೆಗೆರಡು ಬಾಗಿಲು,ಬಾಗಿಲ ಮುಂದೆ,ಮುಚ್ಚಿದರೆ ಹಾನಿ ಇದೇನು ?- ಮೂಗು ಬಾಯಿ
89.ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ.- ಕಣ್ಣು
90.ಹುಲಿಯ ಚಿಕ್ಕಮ್ಮ,ಇಲಿಯ ಮುಕ್ಕಮ್ಮ-ಬೆಕ್ಕು
91.ಕಲ್ಲು ತುಳಿಯುತ್ತೆ ಮುಳ್ಳು ಮೇಯುತ್ತೆ ನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
92.ಅಣ್ಣ ಅತ್ತರೆ ತಮ್ಮನು ಅಳುತ್ತಾನೆ –ಕಣ್ಣು
93.ಗೋಡೆ ಗುಡ್ಡಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ-ತಿಗಣಿ
94. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು- ಸೀತಾಫಲ
95-ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ ,ದಡಾ ಇದೆ ಕಾಲಿಲ್ಲ-ಅಂಗಿ
96.ಬಡ ಬಡ ಅಂಗಿ ಕಳಚಿದ ಬಾವಿಯೊಳಗೆ ಬಿದ್ದ –ಬಾಳೆಹಣ್ಣು
97.ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು-ಕನ್ನಡಿ
98.ಸುಟ್ಟ ಹೆಣ ಮತ್ತೆ ಸುಡುತ್ತಾರೆ –ಇದ್ದಿಲು
99.ಒಂದು ಹಪ್ಪಳ ಊರಿಗೆಲ್ಲ ಊಟ – ಚಂದ್ರ
100.ನೀಲಿ ಕೆರೇಲಿ ಬಿಳಿ ಮೀನು –ನಕ್ಷತ್ರ
Riddle in kannada with answer |ಒಗಟುಗಳು ಮತ್ತು ಉತ್ತರಗಳು
Kannada Ogatugalu – ಕನ್ನಡದಲ್ಲಿ ಕಂಡು ಬರುವಂತಹ ಹಲವಾರು ರೀತಿಯ ಒಗಟುಗಳನ್ನು ನಾವು ಮೇಲ್ಕಂಡ ಅಂಶಗಳಲ್ಲಿ ಕಾಣುತ್ತೇವೆ .ಒಗಟುಗಳನ್ನು ಬಿಡಿಸಲು ನಾವು ನಮ್ಮ ಚತುರತೆಯನ್ನು ಮತ್ತು ಬುದ್ದಿ ಸಾಮರ್ಥ್ಯವನ್ನು ಬಳಸುತ್ತೇವೆ ಅದರಿಂದ ನಮ್ಮ ಬುದ್ದಿ ಮಟ್ಟ ಹೆಚ್ಚುತ್ತದೆ ಮತ್ತು ನಮ್ಮ ಮಾನಸಿಕ ಸಾಮರ್ಥ್ಯ ಚುರುಕಾಗುತ್ತದೆ.