kannada letter Writing in Kannada । ಕನ್ನಡ ಪತ್ರ ಲೇಖನ ವಿಧಗಳು

Kannada letter writing in Kannada : ಪತ್ರ ಲೇಖನ ಇದರಲ್ಲಿ ನಾವು ಪತ್ರಲೇಖನದ ವಿಧಗಳನ್ನು ಮತ್ತು ಪತ್ರಗಳನ್ನು ಬರೆಯುವ ವಿಧಾನಗಳನ್ನು ತಿಳಿದುಕೊಳ್ಳಬಹುದಾಗಿದೆ .

Types of Kannada letter writing in Kannada

ಪತ್ರ ಲೇಖನ – ಕನ್ನಡ ಪತ್ರಲೇಖನದಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಪತ್ರಲೇಖನ ಎಂದು ವಿಧಗಳನ್ನು ನಾವು ಕಾಣಬಹುದಾಗಿದೆ . ಈ ಔಪಚಾರಿಕ ಪತ್ರಗಳು ಮತ್ತು ಅನೌಪಚಾರಿಕ ಪತ್ರಗಳಲ್ಲಿಯೂ ಸಹ ನಾವು ಹಲವಾರು ವಿಧಗಳನ್ನು ಕಾಣಬಹುದಾಗಿದೆ.

kannada letter writing format, ಪತ್ರ ಲೇಖನ ಬರೆಯುವ ವಿಧಾನ, ತಂದೆಗೆ ವೈಯಕ್ತಿಕ ಪತ್ರ ಲೇಖನ, kannada letter writing for father, kannada letter writing to friend,

ಔಪಚಾರಿಕ ಪತ್ರಲೇಖನ

ಔಪಚಾರಿಕ ಪತ್ರಲೇಖನಗಳು ನಿರ್ದಿಷ್ಟ ಮತ್ತು ನಿಖರವಾದ ಮಾಹಿತಿಹಳನ್ನು ಹೊಂದಿರಬೇಕಾಗುತ್ತದೆ ಇದರಲ್ಲಿ ಯಾವುದರ ಕುರಿತು ಪಾತ್ರ ಬರೆಯುತ್ತೇವೆ ಎಂದು ಮೊದಲೇ ವಿಷಯ ಎಂಬ ಶೀರ್ಷಿಕೆಯ ಮೂಲಕ ತಿಳಿಸುವುದು ಅವಶ್ಯಕವಾಗಿರುತ್ತದೆ . ಇದರಲ್ಲಿ ಯಾರಿಂದ ಯಾರಿಗೆ ಮತ್ತು ವಿಷಯ ಇವುಗಳೊಂದಿಗೆ ದಿನಾಂಕವನ್ನು ನಮೂದಿಸುವುದು ಮುಖ್ಯವಾಗಿರುತ್ತದೆ.ಇಂತಹ ಪತ್ರಲೇಖನಗಳನ್ನು ಔಪಚಾರಿಕ ಪತ್ರಲೇಖನಗಳು ಎಂದು ಕರೆಯಲಾಗುತ್ತದೆ

ಔಪಚಾರಿಕ ಪತ್ರಲೇಖನಗಳಲ್ಲಿ ಹಲವಾರು ವಿಧಗಳು ಕಂಡು ಬರುತ್ತವೆ ಅವುಗಳಲ್ಲಿ ಕೆಲವುಗಳನ್ನು ಕೆಳಗೆ ವಿವರವಾಗಿ ನೀಡಲಾಗಿದೆ. ಉದಾಹರಣೆಗೆವ್ಯವಹಾರಿಕ ಪತ್ರ ,ವರ್ಗಾವಣೆ ಪತ್ರ (೨), ರಜೆ ಕೋರಿ ಪತ್ರ ಇತ್ಯಾದಿ .

Kannada ವ್ಯವಹಾರಿಕ ಪತ್ರ ಲೇಖನ

ಇವರಿಂದ
ಕಪಿಲ್. ಎಮ್ .ಎಸ್
೧೦ ನೇ ತರಗತಿ
ಸರ್ಕಾರಿ ಪ್ರೌಢಶಾಲೆ
ಗುಬ್ಬಿಹಳ್ಳಿ , ಕಡೂರು ತಾಲ್ಲೂಕು
ಚಿಕ್ಕಮಗಳೂರು ಜಿಲ್ಲೆ.

ಇವರಿಗೆ
ಅಧ್ಯಕ್ಷರು
ಗ್ರಾಮ ಪಂಚಾಯತಿ ,ಗುಬ್ಬಿಹಳ್ಳಿ
ಕಡೂರ ತಾಲ್ಲೂಕು , ಚಿಕ್ಕಮಗಳೂರು ಜಿಲ್ಲೆ.

ಮಾನ್ಯರೆ ,

ವಿಷಯ – ನಮ್ಮ ಬೀದಿಯ ಬೀದಿದೀಪಗಳು ಮತ್ತು ಚರಂಡಿಗಳನ್ನು ಸರಿಪಡಿಸುವ ಕುರಿತು .

ಮೇಲ್ಕಂಡ ವಿಷಯದಲ್ಲಿ ಇರುವಂತೆ ನಾನು ಅಂದರೆ ಕಪಿಲ್.ಎಮ್ .ಎಸ್, (ಗುಬ್ಬಿಹಳ್ಳಿ). ಗುಬ್ಬಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ , ನಮ್ಮ ಊರಿನ ಬೀದಿ ದೀಪಗಳು ಮತ್ತು ಚರಂಡಿಗಳನ್ನು ಕೆಲವು ದಿನಗಳಿಂದ ಕೆಟ್ಟುಹೋಗಿವೆ . ಇದರಿಂದ ಬಿಡಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಚರಂಡಿಗಳು ಒಡೆದು ಹೋಗಿವೆ.ಇದರಿಂದ ಬೆಳಕು ಇಲ್ಲದ ಕಾರಣ ಮುದುಕರು, ಹೆಣ್ಣುಮಕ್ಕಳು ಏಕಾಂಗಿಯಾಗಿ ಸಂಚರಿಸಲು ಭಯಪಡುವಂತಾಗಿದೆ . ಬೆಳಕಿಲ್ಲದೆ ಯಾವ ಕೆಲಸ ಕಾರ್ಯಗಳು ನಡೆಸಲು ಕಷ್ಟಸಾಧ್ಯವಾಗಿದೆ.

ಚರಂಡಿಗಳು ಹದಗೆಟ್ಟಿರುವುದರಿಂದ ನೀರು ಬೀದಿಯಲ್ಲಿ ಎಲ್ಲ ಕಡೆಗೂ ಹರಿಯಲು ಪ್ರಾರಂಭಿಸಿವೆ .ಇದರಿಂದ ಕೆಟ್ಟ ವಾಸನೆ ಬರುತ್ತಿದೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಸೊಳ್ಳೆಗಳ ಕಾಟದಿಂದ ಹಲವಾರು ರೋಗಗಳಿಗೆ ತುತ್ತಾಗುವಂತಾಗಿದೆ.

ಹೀಗಾಗಿ ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿದೀಪಗಳು ಮತ್ತು ಚರಂಡಿಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.

ವಂದನೆಗಳೊಂದಿಗೆ ,

ತಮ್ಮ ವಿಶ್ವಾಸಿ
ಕಪಿಲ್.ಎಮ್ .ಎಸ್

ಶಾಲೆಗೆ ರಜೆ ಪತ್ರ

ಇಂದ
ರಾಜು .ಆರ್
೧೨ ನೇ ತರಗತಿ
ವಿವೇಕಾನಂದ ವಿಜ್ಞಾನ ಶಾಲೆ
ಬೈರನಹಟ್ಟಿ .

ಗೆ
ತರಗತಿ ಶಿಕ್ಷಕರು
೧೨ ನೇ ತರಗತಿ
ವಿವೇಕಾನಂದ ವಿಜ್ಞಾನ ಶಾಲೆ
ಬೈರನಹಟ್ಟಿ.

ಮಾನ್ಯರೆ ..

ವಿಷಯ – ಒಂದು ವಾರದ ರಜೆ ನೀಡುವ ಕೋರಿ .

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜು. ಆರ್ ಆದ ನಾನು ಒಂದು ವಾರದ ವರೆಗೆ ಶಾಲೆಗೆ ಹಾಜರಾಗಲು ಆಗದ ಕಾರಣ ತರಗತಿಯ ಶಿಕ್ಷಕರಿಗೆ ಕೇಳಿಕೊಳ್ಳುವುದೇನೆಂದರೆ, ನನಗೆ (ರಾಜು.ಆರ್ ) ಆರೋಗ್ಯದಲ್ಲಿ ತೊಂದರೆ ಉಂಟಾಗಿದ್ದು , ಮಲೇರಿಯಾದಿಂದ ಬಳಲುತ್ತಿದ್ದೇನೆ. ಆದ ಕಾರಣ ನಾನು ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ . ಅನಾರೋಗ್ಯದ ನಿಮಿತ್ಯ ವೈದ್ಯರು ನನಗೆ ಒಂದು ವರದ ಮಟ್ಟಿಗೆ ವಿಶ್ರಾಂತಿಯನ್ನು ಮಾಡಬೇಕು ಎಂದು ತಿಳಿಸಿದ್ದಾರೆ.

ಆದ ಕಾರಣ ಒಂದು ವಾರದ ಮಟ್ಟಿಗೆ ನನಗೆ ರಜೆಯನ್ನು ನೀಡಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ .

ಧನ್ಯವಾದಗಳೊಂದಿಗೆ ..

ಇಂತಿ ನಿಮ್ಮ ವಿದ್ಯಾರ್ಥಿ
ರಾಜು.ಆರ್

ವರ್ಗಾವಣೆ ಪತ್ರ (೧)

ಗೆ,
ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಕರ್ನಾಟಕ ಸರ್ಕಾರ , ಬಹುಮಹಡಿ ಕಟ್ಟಡ
ಬೆಂಗಳೂರು .

ಮಾನ್ಯರೇ ,

ವಿಷಯ -ತಾತ್ಕಾಲಿಕವಾಗಿ ಮುಂದೂಡಿರುವ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಕರ
ವರ್ಗಾವಣೆ ಪಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸುವ ಬಗ್ಗೆ.

ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಮನವಿ ಮಾಡುವುದೇನೆಂದರೆ ,ಕರ್ನಾಟಕ ರಾಜ್ಯ ಸರ್ಕಾರವು ಪ್ರಾಥಮಿಕ ಹಾಗು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿ ಕೌನ್ಸಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಂಡು ಭಾಗಷಃ ಪೂರ್ಣಗೊಳಿಸಿರುವುದು ಸರಿಯಷ್ಟೆ.ಆದರೆ ಮುಂದುವರೆದ ವರ್ಗಾವಣೆ ಪ್ರಕ್ರಿಯೆಗಳು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗುವುದನ್ನು ಗಮನಿಸಲಾಗಿದ್ದು ಇದರಿಂದ ಶಿಕ್ಷಕರಲ್ಲಿ ಆತಂಕ ಹಾಗು ಗಿಂಡಲದ ವಾತಾವರಣ ಮೂಡಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ.

ಕಳೆದ ಮೂರೂ ವರ್ಷಗಳಿಂದ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳದಿರುವುದನ್ನು ತಾವು ಅವಲೋಕಿಸಿ ಶಿಕ್ಷಕರಲ್ಲಿ ಮೂಡಿರುವ ಗೊಂದಲ ಹಾಗು ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ಬಾಕಿ ಇರುವ ವರ್ಗಾವಣೆ ಪ್ರಕ್ರಿಯೆಗಳನ್ನು ಪ್ರಥಮ ಆದ್ಯತೆ ಮೇರೆಗೆ ಕೂಡಲೇ ಪ್ರಾರಂಭಿಸಿ ಇನ್ನೊಂದು ವಾರದೊಳಗಾಗಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲು ತಮ್ಮಲ್ಲಿ ಕೋರಿಕೆಯನ್ನು ಮಾಡುತ್ತೇನೆ.

ವಂದನೆಗಳೊಂದಿಗೆ ..

ತಮ್ಮ ವಿಶ್ವಾಸಿ ,

ವರ್ಗಾವಣೆ ಪತ್ರಕ್ಕೆ ಅರ್ಜಿ

ಗೆ,
ಮುಖ್ಯೋಪಾಧ್ಯಾಯರು
ಸರಕಾರಿ ಪ್ರೌಢ ಶಾಲೆ
ಬಾಗಲಕೋಟ.

ಮಾನ್ಯರೇ,

ವಿಷಯ – ವರ್ಗಾವಣೆ ಪತ್ರಕ್ಕೆ ಅರ್ಜಿ

ಭಾಗ್ಯ.ಎಂ.ಆರ್ , D/O ಎಂ. ಸುರಜಕುಮಾರ್, ಆದ ನಾನು ತಮ್ಮ ಸಂಸ್ಥೆಯಲ್ಲಿ ೨೦೨೧-೨೨ ನೇ ಸಾಲಿನಲ್ಲಿ ಎಸ್ .ಎಸ್ .ಎಲ್ .ಸಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತೇನೆ. ನನ್ನ ನೊಂದಣಿ ಸಂಖ್ಯೆ ೩೪೫೧೨ ಆಗಿದ್ದು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಸಂಸ್ಥೆಗೆ ದಾಖಲಾಗಲು ತಮ್ಮ ಸಂಸ್ಥೆಯಿಂದ ವರ್ಗಾವಣೆ ಪತ್ರವನ್ನು ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ

ವಂದನೆಗಳೊಂದಿಗೆ ,

ಇಂತಿ ನಿಮ್ಮ ವಿಶ್ವಾಸಿ
ಭಾಗ್ಯ.ಎಂ.ಆರ್

ಸ್ಥಳ-ಬಾಗಲಕೋಟ
ದಿನಾಂಕ-೨೪-೮-೨೦೨೩

ಇದನ್ನು ಕೂಡ ಓದಿ – Republic day in kannada speech | ಗಣರಾಜ್ಯೋತ್ಸವ ಭಾಷಣ ಕನ್ನಡ

ಅನೌಪಚಾರಿಕ ಪತ್ರಲೇಖನ

ಅನೌಪಚಾರಿಕ ಪತ್ರಲೇಖನಗಳು ವೈಯಕ್ತಿಕ ಪತ್ರಗಳಂತೆ ಕಾರ್ಯನಿರ್ವಹಿಸುತ್ತವೆ , ಇಂತಹ ಪತ್ರಗಳನ್ನು ಬರೆಯಲು ಯಾವುದೇ ನಿರ್ದಿಷ್ಟ ವಿಷಯದ ಅವಶ್ಯಕೆತೆ ಇರುವುದಿಲ್ಲ .

ಅನೌಪಚಾರಿಕ ಪತ್ರಗಳಲ್ಲಿ ನಾವು ಹಲವಾರು ವಿಧಗಳನ್ನು ಕಾಣದಬಹುದಾಗಿದೆ ಅವುಗಳಲ್ಲಿ ಕೆಲವೊಂದನ್ನು ನಾವು ಕೆಳಗೆ ವಿವರಿಸಿದ್ದೇವೆ.

ಉದಾಹರಣೆಗೆ – ತಂದೆಗೊಂದು ಪತ್ರ , ಗೆಳೆಯರಿಗೆ ಪತ್ರ ಇತ್ಯಾದಿ . ಇದೆ ರೀತಿಯಾಗಿ ಪೋಷಕರಿಂದ ಮಕ್ಕಳಿಗೆ, ಅಕ್ಕನಿಂದ ತಂಗಿಗೆ ಹಲವಾರು ವಿಧದ ಪತ್ರಗಳನ್ನು ನಾವು ಕಾಣಬಹುದಾಗಿದೆ.

ತಂದೆಗೆ ವೈಯಕ್ತಿಕ ಪತ್ರ ಲೇಖನ Kannada letter Writing For Father

ಇವರಿಂದ
ವಂದಿತಾ.ಕೆ
ಜಯನಗರ
ಬೆಂಗಳೂರು

ನನ್ನ ಪ್ರೀತಿಯ ತಂದೆಯವರಿಗೆ ನಿಮ್ಮ ಮಗಳಾದ ವಂದಿತಾ ಮಾಡುವ ವಂದನೆಗಳು , ನಿಮ್ಮ ಆಶೀರ್ವಾದದಿಂದ ನಾನು ಇಲ್ಲಿ ಕ್ಷೇಮವಾಗಿದ್ದೇನೆ . ಆರೋಗ್ಯವು ಚೆನ್ನಾಗಿದೆ .

ಇಲ್ಲಿ ನನ್ನ ಶಿಕ್ಷಣವು ಸಹ ಅತ್ಯಂತ ಒಳ್ಳೆಯ ರೀತಿಯಲ್ಲಿ ಚನ್ನಾಗಿ ನಡೆಯುತ್ತಿದೆ . ನಾನು ಇಲ್ಲಿ ನನ್ನ ಗೆಳತಿಯರೊಂದಿಗೆ ಖುಷಿಯಾಗಿದ್ದೇನೆ ಆದರೆ ನನಗೆ ನಿಮ್ಮ ಮತ್ತು ಮನೆಯವರೆಲ್ಲರ ನೆನಪು ಸದಾ ಕಾಡುತ್ತಲೇ ಇರುತ್ತದೆ. ಓದಿನಲ್ಲಿ ನನಗೆ ಶಿಕ್ಷಕರು ಹಾಗೂ ನನ್ನ ಗೆಳೆಯ ಗೆಳತಿಯರು ಸಹಕರಿಸುತ್ತಿದ್ದಾರೆ .ಓದುವುದು ಕುದ್ದ ಬಹಳ ಚನ್ನಾಗಿ ನಡೆಯುತ್ತಿದೆ .ಬರುವ ವಾರ್ಷಿಕ ಪರೀಕ್ಷೆಗೆ ನಾನು ಸಿದ್ಧವಾಗುತ್ತಿದ್ದೇನೆ.ಶ್ರಮಪಟ್ಟು ಓದಿ ,ಪರೀಕ್ಷೆಯಲ್ಲಿ ಅತ್ಯಂತ ಉತ್ತಮ ಮಟ್ಟದ ಅಂಕಗಳನ್ನು ಪಡೆದು ಕೊಂಡು ನೀವು ಹೆಮ್ಮೆ ಪಡುವಂತೆ ಮಾಡುತ್ತೇನೆ .

ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ಕೊನೆಯದಾಗಿ ನೀವೆಲ್ಲರೂ ಕೂಡಾ ಆರೋಗ್ಯವಾಗಿದ್ದಿರಿ ಮತ್ತು ಕ್ಷೇಮವಾಗಿ ಇದ್ದೀರಿ ಎಂದು ಭಾವಿಸುತ್ತೇನೆ.ಮನೆಯವರನೆಲ್ಲರನ್ನು ಕೇಳಿದೆ ಎಂದು ಹೇಳಿ ಮತ್ತು ಎಲ್ಲರಿಗು ನನ್ನ ವಂದನೆಗಳನ್ನು ತಿಳಿಸಿಬಿಡಿ . ನಿಮ್ಮ ಯೋಗಕ್ಷೇಮದ ಕುರಿತು ನನಗೆ ತಿಳಿಸಲು ಪತ್ರವನ್ನು ಬರೆಯಿರಿ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿರುತ್ತೇನೆ .

ವಂದನೆಗಳೊಂದಿಗೆ..

ಇಂತಿ ನಿಮ್ಮ ಪ್ರೀತಿಯ ಮಗಳು
ವಂದಿತಾ. ಕೆ

ಇವರಿಗೆ
ಸುಬ್ಬರಾವ್.ಎಸ್
ರಾಜಾಜಿನಗರ . ಮೈಸೂರ.

ಗೆಳೆಯ।ಗೆಳತಿಗೆ ಪತ್ರKannada letter Writing to Friend

ಜೀವಾ,ಓ
ಗುಲ್ಬರ್ಗ
೧೦/೧೧/೨೦೨೩

ಪ್ರೀತಿಯ ಗೆಳೆಯ । ಗೆಳತಿಗೆ

ನಾನು ಇಲ್ಲಿ ಕ್ಷೇಮವಾಗಿರುವೆ ನೀನು ಕುದ್ದ ಕ್ಷೇಮವಾಗಿದ್ದಿಯ ಎಂದು ತಿಳಿದಿದ್ದೇನೆ. ನಿನ್ನ ಪತ್ರ ಬಂದು ನನಗೆ ತಲುಪಿತು. ಆ ಪತ್ರವನ್ನು ಓದಿ ಬಹಳ ಸಂತೋಷವಾಯಿತು.

ಕಳೆದ ವಾರ ನಾವೆಲ್ಲ ವಿದ್ಯಾರ್ಥಿಗಳು ಸೇರಿ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡಿದ್ದೆವು ಇತಿಹಾಸ ಪ್ರಸಿದ್ದವಾದ ಬೇಲೂರು ,ಹಳೇಬೀಡು, ಮೈಸೂರು,ಅರಮನೆ ಶೃಂಗೇರಿ ಹಲವಾರು ಪ್ರವಾಸೋದ್ಯಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದೆವು. ಅಲ್ಲಿಯ ಶಿಲ್ಪಕಲೆ ಸೌಂಧರ್ಯಭರಿತವಾದ ಪರಿಸರವನ್ನು ಕಣ್ಣುತುಂಬಿಕೊಂಡೆವು ಮತ್ತು ಯಾವ ಯಾವ ಕ್ಷೇತ್ರಕ್ಕೆ ಭೇಟಿ ನೀಡಿದೆವೋ ಆ ಎಲ್ಲ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂದೇವು . ಮಾಹಿತಿ ತಿಳಿದುಕೊಳ್ಳಲು ಅಲ್ಲಿಯ ಗೈಡುಗಳು ಸಹಾಯ ಮಾಡಿದರು. ಅವರಿಂದ ಸವಿವರವಾಗಿ ತಿಳಿಯಲು ಸಹಾಯಕಾರಿಯಾಯಿತು ಮತ್ತು ಹಲವಾರು ಮನರಂಜನಾ ಕಾರ್ಯಕ್ರಮಗಳಲ್ಲಿಯೂ ಸಹ ಭಾಗವಹಿಸಿದೆವು.

ಈ ಪ್ರವಾಸದಿಂದ ನನಗೆ ತುಂಬಾ ಖುಷಿಯಾಯಿತು ಮತ್ತು ಈ ಪ್ರವಾಸದಿಂದ ನನಗೆ ಹಲವಾರು ಹೊಸ ಹೊಸ ವಿಷಯಗಳ ಕುರಿತು ತಿಳಿದುಕೊಂಡು ನನ್ನ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯಕವಾಯಿತು. ನೀನು ಕೂಡಾ ನಮ್ಮ ಜೊತೆ ಬಂದಿದ್ದಾರೆ ಚೆನ್ನಾಗಿರುತಿತ್ತು ಆದರೂ ಪರವಾಗಿಲ್ಲ ಮತ್ತೊಮ್ಮೆ ನಿನ್ನೊಂದಿಗೆ ಬರುತ್ತೇನೆ ಮತ್ತು ಇಲ್ಲಿ ನಾನು ಚನ್ನಾಗಿ ಅಭ್ಯಾಸ ಮಾಡುತ್ತಿದ್ದೇನೆ ನಿನ್ನ ಓದಿನ ಕಡೆಗೆ ನೀನು ಸಹ ಗಮನವಿದು.

ಇಂತಿ ನಿನ್ನ ಪ್ರೀತಿಯ ಗೆಳೆಯ ।ಗೆಳತಿ
ಜೀವಾ.ಓ

ಇವರಿಗೆ
ರಂಜು.ಕೆ.ಎಲ್
ಗಾಂಧಿನಗರ
ರಾಯಚೂರ.

Letter writing in Kannada

ಈ ಮೇಲಿನ ಎಲ್ಲ ಪತ್ರಲೇಖನದಿಂದ ತಮಗೆಲ್ಲ ಔಪಚಾರಿಕ ಪತ್ರಗಳು ಯಾವವು ಅನೌಪಚಾರಿಕ ಪತ್ರಲೇಖನಗಳು ಯಾವವು ಎಂದು ಮಾಹಿತಿಯನ್ನು ಸವಿವರವಾಗಿ ನೀಡಿದ್ದೇವೆ . ಯಾವ ಪತ್ರಗಳನ್ನು ಹೇಗೆ ಬರೆಯಬೇಕು ಎಂದು ಕೂಡ ನಾವು ಮಾಹಿತಿಯನ್ನು ನೀಡಿದ್ದೇವೆ ನಿಮಗೆ ಇವೆಲ್ಲವೂ ಉಪಯುಕ್ತವಾಗಿವೆ ಎಂದು ಭಾವಿಸುತ್ತೇನೆ .

Leave a Comment