ಒಂದು ಸೇಬಿನಲ್ಲಿರುವ ಕ್ಯಾಲೊರಿಗಳೆಷ್ಟು ಮತ್ತು ಉಪಯೋಗಗಳು

ಒಂದು ಸೇಬಿನಲ್ಲಿರುವ ಕ್ಯಾಲೊರಿಗಳೆಷ್ಟು ( How Many Calories In Apple ) – “ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ” ಎಂಬ ಇಂಗ್ಲಿಷ್ ಗಾದೆಯಂತೆ ಸೇಬಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು ,ಅವು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಇದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆ್ಯಪಲ್ ನ ಹಣ್ಣಿನಲ್ಲಿರುವ ಕ್ಯಾಲೊರಿಗಳೆಷ್ಟು

ಒಂದು ಸೇಬು ಹಣ್ಣಿನಲ್ಲಿ ಇರುವ ಕ್ಯಾಲರಿಗಳೆಂದರೆ- ೨೫ ಗ್ರಾಂ ಕಾರ್ಬೋಹೈಡ್ರೇಟ್ ,೧ ಗ್ರಾಂ ಪ್ರೊಟಿನ್ , ಮತ್ತು ಇದಲ್ಲದೆ ಇದರಲ್ಲಿ ಯಾವುದೇ ತರನಾದ ಕೊಬ್ಬು ಅಂಶ ಇರುವುದಿಲ್ಲ ಸೇಬು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಅಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್, ಪ್ಲೋವನಾಯ್ಡ, ಮತ್ತು ಪೋಷಕಾಂಶಗಳಿದ್ದು ,ಕ್ಯಾನ್ಸರ ಕಡಿಮೆ ಮಾಡುವ ,ಹೃದಯ ಕಾಯಿಲೆ ಹಾಗೂ ಮಧುಮೇಹ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ, ಇದನ್ನು ಹಲವಾರು ವೈದ್ಯರು ಮ್ಯಾಜಿಕ್ ಹಣ್ಣು ಎಂದು ಕರೆದಿದ್ದಾರೆ

ಒಂದು ಸೇಬಿನಲ್ಲಿರುವ ಕ್ಯಾಲೊರಿಗಳೆಷ್ಟು

ಪ್ರತಿ ನೂರು ಗ್ರಾಂ ಸೇಬುಹಣ್ಣಿನಲ್ಲಿ 54 ಕ್ಯಾಲೋರಿ ಶಕ್ತಿ ಇದೆ ಮತ್ತು ಇದರಲ್ಲಿ ಕಂಡು ಬರುವ ಪೋಷಕಾಂಶಗಳೆಂದರೆ

 • 0.41 ಗ್ರಾಂ ಪ್ರೋಟಿನ್
 • 14.05ಗ್ರಾಂ ಕಾರ್ಬೊಹೈಡ್ರೆಟ್
 • 2.1ಗ್ರಾಂ ಕರಗುವ ನಾರು
 • 10.33 ಗ್ರಾಂ ಸಕ್ಕರೆ
 • 8 ಮಿಲಿಗ್ರಾಮ್ ಸಕ್ಕರೆ
 • 0.15ಮಿಲಿಗ್ರಾಮ್ ಕಬ್ಬಿಣ
 • 107ಮಿಲಿಗ್ರಾಮ್ ಪೊಟ್ಯಾಸಿಯಂ
 • 2.0 ಮಿಲಿಗ್ರಾಮ್ ವಿಟಮಿನ್ ಸಿ

ಸೇಬು ಬೆಳೆಯುವ ವಿಧಾನ

ಸೇಬು ಮೂಲತಃ ಸಮಶೀತೋಷ್ಣ ವಲಯದ ಬೆಳೆ. ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ ನಡುವಿನ ಭೂಭಾಗವು ಇದರ ಮೂಲ ಪ್ರದೇಶವೆಂದು ತಿಳಿಯಲಾಗಿದ್ದು,ನಂತರ ಈ ಬೆಳೆ ಸಮಶೀತೋಷ್ಣ ವಲಯದ ಎಲ್ಲ ದೇಶಗಳಿಗೂ ಪ್ರಸರಣ ಹೊಂದಿದೆ. ಭಾರತದಲ್ಲಿ ಸುಮಾರು ೦.೨೮ ದಶ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೨.೯ ದಶ ಲಕ್ಷ ಟನ್ ಸೇಬನ್ನು ಉತ್ಪಾದಿಸಲಾಗುತ್ತದೆ.

ದೇಶದಲ್ಲಿ ಹಣ್ಣಿನ ಉತ್ಪಾದನೆಗೆ ಒಳ ಪಟ್ಟಿರುವ ಒಟ್ಟು ಕ್ಷೇತ್ರದ ೬.೧ರಷ್ಟು ಪ್ರದೇಶದಲ್ಲಿ ಸೇಬನ್ನು ಬೆಳೆಯಲಾಗುತ್ತದೆ. ಇದರ ಬೆಳವಣಿಗೆಗೆ 4-21 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಅತಿ ಸೂಕ್ತ. ಅಲ್ಲದೆ ಸುಮಾರು 100-125 ಸೆ.ಮೀ.ನಷ್ಟು ಮಳೆ ಬೇಕಾಗುತ್ತದೆ.ಮೋಡ ಮುಸುಕಿದ,ಕಡಿಮೆ ಉಷ್ಣಾಂಶದ,ಆರ್ದ್ರ ವಲಯಗಾಲ್ಲಿ ಚೆನ್ನಾಗಿ ಸೇಬು ಬೆಳೆಯುತ್ತದೆ.ಸೇಬು ಸಮಶೀತೋಷ್ಣ ಬೆಳೆಯಾಗಿದ್ದು ಅದು 21 ರಿಂದ 24 ಸಿ ನಡುವಿನ ತಾಪಮಾನದಲ್ಲಿ ಬೆಳೆಯುತ್ತದೆ.

ಅವುಗಳನ್ನು ಹೆಚ್ಚಿನ ಎತ್ತರದಲ್ಲಿ (ಸಮುದ್ರ ಮಟ್ಟದಿಂದ 1500-2700 ಮೀ) ಕೂಡ ಬೆಳೆಯಬಹುದು. ಬೆಳೆಯುವ ಋತುವಿನ ಉದ್ದಕ್ಕೂ ಸಮವಾಗಿ ಹಂಚಿಕೆಯಾಗುವ ಮಳೆ, ಸೇಬಿನ ಬೆಳವಣಿಗೆಗೆ ಉತ್ತಮವಾಗಿದೆ. ಜೋರಾದ ಗಾಳಿ ಬೀಸುವ ಪರಿಸ್ಥಿತಿಗಳು ಸೇಬು ಮರಗಳಿಗೆ ಹಾನಿಕಾರಕ.

ಸೇಬು ಬೀಜದ ಮಾಹಿತಿ

ಹಣ್ಣುಗಳು ಹಾಗೂ ತರಕಾರಿಗಳ ಬೀಜಗಳಲ್ಲಿ ಇರುವಂತಹ ಅಮಿಗ್ಡಾಲಿನ್ ಎನ್ನುವ ವಿಷಕಾರಿ ಅಂಶದಿಂದಾಗಿ ನಾವು ಇವುಗಳನ್ನು ಸೇವನೆ ಮಾಡುವುದಿಲ್ಲ. ಅಮಿಗ್ಡಾಲಿನ್ ಅನ್ನುವ ಅಂಶವು ನಮ್ಮ ಜೀರ್ಣ ವ್ಯವಸ್ಥೆ ತಲುಪಿದ ವೇಳೆ ಇದು ಸೈನೇಡ್ ಆಗಿ ಪರಿವರ್ತನೆ ಆಗುವುದು ಮತ್ತು ಇದು ತುಂಬಾ ಮಾರಕ ವಿಷವಾಗಿರುವುದು.

ಒಂದು ಸೇಬಿನಲ್ಲಿರುವ ಕ್ಯಾಲೊರಿಗಳೆಷ್ಟು
ಒಂದು ಸೇಬಿನಲ್ಲಿರುವ ಕ್ಯಾಲೊರಿಗಳೆಷ್ಟು

ಸೇಬಿನ ಬೀಜಗಳಲ್ಲಿ ಇರುವಂತಹ ಅಮಿಗ್ಡಾಲಿನ್ ಅಂಶವು ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದಕ್ಕೆ ಹೊಂದಾಣಿಕೆ ಆಗಲ್ಲ. ಸುಮಾರು 200 ಸೇಬಿನ ಬೀಜಗಳನ್ನು ತಿಂದರೆ ಆಗ ಮಾತ್ರ ದೇಹದಲ್ಲಿ ಈ ಪ್ರಮಾಣದ ವಿಷ ತಯಾರಾಗಬಹುದು

ಸೇಬು ಹಣ್ಣಿನ ಉಪಯೋಗಗಳು

 1. ಸೇಬಿನಲ್ಲಿ ಕಂಡುಬರುವಂತಹ ಬ್ಯಾಕ್ಟೀರಿಯಾಗಳು ತುಂಬಾ ಆರೋಗ್ಯಕಾರಿ ಮತ್ತು ಇದು ಹೊಟ್ಟೆಯ ಸೂಕ್ಷ್ಮಾಣುಗಳಿಗೆ ಒಳ್ಳೆಯ ಮೂಲ ಎಂದು ಹೇಳಲಾಗುತ್ತದೆ.
 2. ಆರೋಗ್ಯಕಾರಿ ಹೊಟ್ಟೆಯ ಸೂಕ್ಷ್ಮಾಣುಗಳಿದ್ದರೆ ಆಗ ಇದು ಸಂಪೂರ್ಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ರೋಗಕಾರಗಳನ್ನು ತಡೆಯುವುದು
 3. ಸೇಬಿನ ಬೀಜಗಳಲ್ಲಿ ಪ್ರೋಟೀನ್, ನಾರಿನಾಂಶ ಮತ್ತು ಎಣ್ಣೆಯಂಶವಿದೆ. ಇದರಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳು ಇವೆ.
 4. 2019ರಲ್ಲಿ ಜರ್ನಲ್ ಫ್ರಾಂಟಿಯರ್ಸ್ ಮೈಕ್ರೋಬಯಾಲಜಿಯಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ ಸೇಬಿನ ಬೀಜದಲ್ಲೂ ಆರೋಗ್ಯಕಾರಿ ಬ್ಯಾಕ್ಟೀರಿಯಾ ಇದೆ
 5. ಇಡೀ ಸೇಬಿನಲ್ಲಿ ಸುಮಾರು 100 ಮಿಲಿಯನ್ ಬ್ಯಾಕ್ಟೀರಿಯಾ ಇದೆ, ಸೇಬಿನ ಸಿಪ್ಪೆಯಲ್ಲಿ ಒಟ್ಟು 10 ಮಿಲಿಯನ್ ಬ್ಯಾಕ್ಟೀರಿಯಾ ಇದೆ
 6. ಮಧುಮೇಹ ಕಾಯಿಲೆಯನ್ನು ತಡೆಯುತ್ತದೆ ಮತ್ತು ಶರೀರದ ಬಲಿಷ್ಠತೆ ಹೆಚ್ಚಿಸುತ್ತದೆ
 7. ಕಣ್ಣಿನ ಪೋರ್ ಬರದಂತೆ ಕಾಪಾಡುತ್ತದೆ ಮತ್ತು ಮುಖದ ಕಾಂತಿಗೆ ಉಪಯುಕ್ತ
 8. ಸೇಬು ಹಣ್ಣನ್ನು ಉಪಯೋಗಿಸುವುದರಿಂದ ಆರೋಗ್ಯವನ್ನು ಚನ್ನಾಗಿ ನೋಡಿಕೊಳ್ಳಬಹುದು
 9. ಸೇಬು ಹಣ್ಣನ್ನು ಸೇವಿಸುವುದರಿಂದ್ ಹೃದಯಕ್ಕೆ ರಕ್ಷಣೆ ಸಿಗುತ್ತದೆ
 10. ಅಸ್ತಮಾ ರೋಗವನ್ನು ಕಡಿಮೆ ಮಾಡುತ್ತದೆ ಮತ್ತು ಕಿಡ್ನಿ ಸ್ಟೋನ್ ಕಡಿಮೆ ಆಗಲು ಸೇಬು ಉಪಯೋಗಿಸುವರು

FAQ :

ಗರ್ಭಿಣಿಯರು ದಿನಕ್ಕೊಂದು ಸೇಬು ತಿನ್ನಬಹುದಾ ?

ಹೌದು, ಹೆಣ್ಣು ಮಕ್ಕಳು ಗರ್ಭಧಾರಣೆ ವೇಳೆ ದಿನಕ್ಕೊಂದು ಸೇಬು ಹಣ್ಣು ಸೇವಿಸುವುದು ತುಂಬಾ ಸುರಕ್ಷಿತ. ಯಾಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇವೆ

ಸೇಬು ಹಣ್ಣಿನ ಬೀಜ ತಿಂದರೆ ಏನಾಗುತ್ತದೆ ?

ಸೇಬು ಹಣ್ಣಿನ ಬೀಜದಲ್ಲಿ ಸೈನೇಡ್ ಅಂಶವಿರುವ ಕಾರಣದಿಂದಾಗಿ ಅದನ್ನು ತಿನ್ನಲು ಹೋಗಬೇಡಿ. ನಿಮ್ಮ ದೇಹಕ್ಕೆ ಹಾನಿ ಉಂಟು ಮಾಡಬಹುದು.

ಸೇಬು ಹಣ್ಣಿನ ಉಪಯೋಗಗಳು ?

ಪ್ರತಿದಿನ ಒಂದು ಸೇಬನ್ನು ತಿನ್ನುವುದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸೇಬನ್ನು ತಿನ್ನುವುದರಿಂದ ಆಸ್ತಮಾವನ್ನು ನಿವಾರಿಸಬಹುದು

Leave a Comment