Independence day speech In kannada |ಸ್ವಾತಂತ್ರ್ಯ ದಿನಾಚರಣೆ ಭಾಷಣ ಕನ್ನಡ

Independence day speech In kannada – ಸ್ವಾತಂತ್ರ್ಯ ದಿನಾಚರಣೆ ಭಾಷಣ ಕನ್ನಡ ದಲ್ಲಿ ನಾವು ಸ್ವಾತಂತ್ರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತೇವೆ.

ಸ್ವಾತಂತ್ರ್ಯ ದಿನಾಚರಣೆ ಮಹತ್ವ, Independence Day speech in kannada language, ಸ್ವಾತಂತ್ರ್ಯ ದಿನಾಚರಣೆ ಭಾಷಣ 2024 ಕನ್ನಡ, independence day speech in kannada short

Independence day speech In kannada 2024

ವೇದಿಕೆಯ ಮೇಲೆ ಆಸೀನರಾದಂತಹ ಗುರು ಹಿರಿಯರೇ ಶಿಕ್ಷಕರೇ ಅಥಿತಿಗಳೇ ಮತ್ತು ಉಳಿದಂತಹ ನನ್ನ ಸ್ನೇಹಿತ ಬಳಗದವರೇ ಮತ್ತು ನನ್ನೆಲ್ಲ ಭಾರತೀಯ ಬಂಧುಗಳೇ ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು .

ನಮಗೆಲ್ಲರಿಗೂ ಸ್ವಾತಂತ್ರ್ಯ ದಿನ ಕೇವಲ ಸಡಗರ ದಿನ ಅಷ್ಟೇ ಅಲ್ಲ ನಮ್ಮ ದೇಶದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸುಮಾರು ಆರೂವರೆ ಲಕ್ಷ ಯೋಧರಿಗೆ ಮಹಾ ಪುರುಷರಿಗೆ ಗೌರವ ನಮನಗಳನ್ನು ಸಲ್ಲಿಸುವ ಸುದಿನ .

ಈ ಸಂಧರ್ಭದಲ್ಲಿ ೧೮೫೭ ರಲ್ಲಿ ಕೆಂಪು ಮೂತಿ ಬ್ರಿಟಿಷರ ಕೆನ್ನೆಗೆ ಬಾರಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಮಂಗಲ್ ಪಾಂಡ್ಯೆಯಿಂದ ಹಿಡಿದು , ಕಿತ್ತೂರು ರಾಣಿ ಚನ್ನಮ್ಮ , ಬಾಲಗಂಗಾಧರ್ ತಿಲಕ್, ಗೋಪಾಲಕೃಷ್ಣ ಗೋಕಲೆ , ಸುಭಾಷಚಂದ್ರ ಬೋಸ್ , ಚಂದ್ರಶೇಖರ ಅಜಾದ , ಮಹಾತ್ಮಾ ಗಾಂಧಿ ಇವರಂತಹ ದೇಶ ಭಕ್ತರಿಗೆ ಗೌರವ ನಮನಗಳನ್ನು ಸಲ್ಲಿಸುವ ದಿನ.

ಬ್ರಿಟಿಷರು ನಮ್ಮ ಭಾರತ ದೇಶದಲ್ಲಿ 300 ವರ್ಷಗಳ ಕಾಲ ಕೊಳ್ಳೆ ಹೊಡೆದರು ಆದರೆ ನಮಗ್ಯಾರಿಗೂ ಅದರ ಅರಿವಾಗಲೇ ಇಲ್ಲ .ಭಾರತ ದೇಶದ ಸಂಪತ್ತನ್ನು ದೋಚಿಕೊಂಡು ತಿಂದು ಹಾಕಿದರು ಆದರೆ ಯಾರು ಆ ಸಂಪತ್ತಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ . ಇಲ್ಲಿಯ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಿ ಸಿದ್ಧವಸ್ತುಗಳನ್ನಾಗಿ ತಯಾರಿಸಿ ಮರಳಿ ನಮ್ಮ ದೇಶಕ್ಕೆ ತಂದು ಮಾರಾಟ ಮಾಡಲು ಪ್ರಾರಂಭಿಸಿದರು.

ಭಾರತದಲ್ಲಿ ಗುಡಿಕೈಗಾರಿಕೆ ಎಲ್ಲವು ನಾಶವಾದವು , ನಿರುದ್ಯೋಗ ಹೆಚ್ಚಾಯಿತು , ಬಡತನ ಹೆಚ್ಚು ಆಯ್ತು ಆದರೆ ಅದಕ್ಕೂ ಸಹ ಯಾರು ತಲೆಕೆಡಿಸಿಕೊಳ್ಳಲಿಲ್ಲ ಆದರೆ ಯಾವಾಗ ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ಜಾರಿಗೆ ತಂದು ರಾಜ ಮಹಾರಾಜರುಗಳ ಬುಡಕ್ಕೆ ಬಂದರೋ ಆವಾಗ ನಮ್ಮ ದೇಶದಲ್ಲಿ ಸ್ವಾತಂತ್ರದ ಕಿಚ್ಚು ಹೊತ್ತಿಕೊಂಡಿತು , ಯಾವಾಗ ಸಿರಿವಂತರಿಗೆ ಸಂಕಟ ಪ್ರಾರಂಭವಾಯಿತೋ ಆವಾಗ ಹೋರಾಟ ಆರಂಭವಾಯಿತು. ಆದರೆ ಅವತ್ತಿನಿಂದ ಹಿಡಿತು ಇವತ್ತಿನವರೆಗೂ ಬಡವರ ಸಮಸ್ಯೆಗೆ ಬೇಲೆ ಎಂಬುದೇ ಇಲ್ಲ . ಕೇವಲ ಶ್ರೀಮಂತ ರಾಜಕಾರಣಿಗಳ ಸಮಸ್ಯೆಗೆ ಮಾತ್ರ ಬೆಲೆ ಸಿಗುತ್ತಿದೆ.

ಇವತ್ತು ಕುಡಿತ ಅಥವಾ ಕುಡುಕರಿಂದ ಎಷ್ಟೋ ಕುಟು೦ಬಗಳು ಬೀದಿಗೆ ಬಂದಿವೆ ಆದರೆ ಇದು ರಾಜಕಾರಣಿಗಳ ಸಮಸ್ಯೆಯಲ್ಲ . ಧೂಮಪಾನ ಗುಟ್ಕಾ ಸೇವನೆಯಿಂದ ಎಷ್ಟೋ ಜನ ಪ್ರಾಣವನ್ನೇ ಬಿಟ್ಟಿದ್ದಾರೆ ಆದರೆ ಅದನ್ನೆಲ್ಲ ನೀಷೆದ ಮಾಡುತ್ತಿಲ್ಲ ಇದೆಲ್ಲದರ ಬಗ್ಗೆಯೂ ಸರ್ಕಾರ ಗಮನ ಹರಿಸುವುದು ಮತ್ತು ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ .

ಸ್ವಾತಂತ್ರ್ಯ ದಿನಾಚರಣೆ ಭಾಷಣ 2024

ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ನಾವು ಸ್ವಾತಂತ್ರ್ಯ ಎಂದರೇನು ಎಂದು ತಿಳಿದುಕೊಳ್ಳೋಣ, ಸ್ವಾತಂತ್ರ್ಯ ಎಂದರೆ ನಮ್ಮ ಇಚ್ಛೆಯಂತೆ ಬದುಕುವುದುಅಥವಾ ವರ್ತಿಸುವುದು ಎಂದು ನಾವೆಲ್ಲರೂ ಅಂದುಕೊಂಡಿದ್ದವೇ ಆದರೆ ನಿಜವಾದ ಸ್ವಾತಂತ್ರ್ಯವೆಂದರೆ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದು ಎಂದರ್ಥ.

ಪ್ರಸಿದ್ಧ ಇತಿಹಾಸಕಾರರು ಒಂದು ಕಡೆ ಹೇಳುತ್ತಾರೆ ” ಇತಿಹಾಸವನ್ನು ತಿಳಿದವನು ಮಾತ್ರ ಇತಿಹಾಸವನ್ನು ಸೃಷ್ಟಿಸಲು ಸಾಧ್ಯ ” ಹಾಗಾಗಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವದ ಇತಿಹಾಸವನ್ನು ತಿಳಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಬಹುದು.

ಸುಮಾರು ವರ್ಷಗಳ ಹಿಂದೆ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ನಮ್ಮ ದೇಹದಲ್ಲಿ ಬ್ರಿಟಿಷರು ಆಳ್ವಿಕೆಯನ್ನು ಮಾಡುತ್ತಿದ್ದರು ಎಂದು ನಮಗೆಲ್ಲ ತಿಳಿದಿದೆ. ಭಾರತದ ಅಪಾರ ಸಂಪತ್ತನ್ನು ನೋಡಿ ಭಾರತದಲ್ಲಿಯೇ ಉಳಿಯುವ ಯೋಚನೆಯನ್ನು ಮಾಡಿದರು . ಹಾಗೆಯೆ ದೀನ ಕಳೆದಂತೆ ಭಾರತೀಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡು , ಇಡೀ ಭಾರತದಾದ್ಯಂತ ತಮ್ಮ ಅಧಿಪತ್ಯವನ್ನು ಸಾಧಿಸುತ್ತಾರೆ ಈ ಒಂದು ಸಂಧರ್ಭದಲ್ಲಿ ಸಂಪೂರ್ಣ ಭಾರತೀಯರು ಬ್ರಿಟಿಷರ ಕಬಂದ ಬಾಹುವಿನಲ್ಲಿ ಬಂಧನದಲ್ಲಿರುತ್ತಾರೆ.

ಈ ಸಂಧರ್ಭದಲ್ಲಿ ಇದನ್ನು ಕಂಡು ರೊಚ್ಚಿಗೆದ್ದ ಹಲವಾರು ವ್ಯಕ್ತಿಗಳು ಹಾಗೆಯೆ ದೇಶ ಪ್ರೇಮಿಗಳ ಬ್ರಿಟಿಷರನ್ನು ಹೇಗಾದರೂ ಮಾಡಿ ಭಾರತದಿಂದ ಓಡಿಸಲೇ ಬೇಕು ಎಂದು ಕಂಕಣ ಬದ್ದವಾಗಿ ನಿಲ್ಲುತ್ತಾರೆ.

ಬದ್ಧರಾಗಿ ನಿಂತು ಹಲವಾರು ಚಳುವಳಿಗಳನ್ನು ನಡೆಸುತ್ತಾರೆ . ಆ ಚಳುವಳಿಗಳು ಯಾವವು ಎಂದರೆ ೧೮೫೭ ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಇದನ್ನು ಸಿಪಾಯಿ ದಂಗೆ ಎಂದು ಸಹ ಕರೆಯುತ್ತಾರೆ) ೧೯೧೮ ರಿಂದ ೧೯೪೭ ರ ನಡುವಿನ ಅವಧಿಯಲ್ಲಿ ನಡೆದ ಅಸಹಕಾರ ಚಳುವಳಿಗಳು , ಚೌರಿ ಚೌರಾ ಘಟನೆ ಜಲಿಯನ್ ವಾಲಾಬಾಗ್ ದುರಂತ,ಉಪ್ಪಿನ ಸತ್ಯಾಗ್ರಹ ಇನ್ನೂ ಮುಂತಾದ ಚಳುವಳಿಗಳು ನಡೆಸುತ್ತಾರೆ.ಹಾಗೆಯೆ 1947 ನೇ ವರ್ಷದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಒಂದು ಹೋರಾಟ ಕೂಡ ನಡೆಯುತ್ತದೆ ಈ ಒಂದು ಹೋರಾಟವನ್ನು ಕ್ವಿಟ್ ಇಂಡಿಯಾ ಮೂಮೆಂಟ ಎಂದು ಕೂಡಾ ಕರೆಯುತ್ತಾರೆ.

ಇದನ್ನು ಕೂಡ ಓದಿ – Republic day in kannada speech | ಗಣರಾಜ್ಯೋತ್ಸವ ಭಾಷಣ ಕನ್ನಡ

ಈ ರೀತಿಯಾಗಿ ಹಲವಾರು ಚಳುವಳಿಗಳು ಮತ್ತು ಹೋರಾಟಗಳ ಫಲವಾಗಿ ” ಅಗಸ್ಟ 14 ರ ಮಧ್ಯರಾತ್ರಿ 12 ಗಂಟೆಗೆ 1947 ರಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ.ಈ ಒಂದು ಸವಿನೆನಪಿಗಾಗಿ ಪ್ರತಿ ವರ್ಷ ಆಗಸ್ಟ 15 ರಂದು ದೇಶದಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೆಯೆ ಶಾಲಾ ಕಾಲೇಜುಗಳಲ್ಲಿ ಮುಂತಾದ ಕಡೆ ಈ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜ್ರುಂಭಣೆಯಿಂದ ಆಚರಣೆಯನ್ನು ಮಾಡಲಾಗುತ್ತಿದೆ.

ನಮ್ಮ ಭಾರತ ದೇಶದ ರಾಜಧಾನಿಯಾದ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಪ್ರಧಾನ ಮಂತ್ರಿಯವರು ರಾಷ್ಟ್ರಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆಯಾದ ಜನಗಣಮನವನ್ನು ಹಾಡುವ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣವನ್ನು ಕೂಡಾ ಮಾಡುತ್ತಾರೆ.

ಹಾಗೆಯೇ ಈ ಒಂದು ಸಂಧರ್ಭದಲ್ಲಿ ನಾವೆಲ್ಲರೂ ತಿಳಿದುಕೊಳ್ಳಲೇಬೇಕಾದ ಮತ್ತೆರಡು ವಿಚಾರಗಳಿವೆ ಅವುಗಳು ಏನೆಂದರೆ ಮೊದಲನೆಯದಾಗಿ ನಮ್ಮ ರಾಷ್ಟ್ರ ಧ್ವಜದ ಬಗ್ಗೆ, ಈ ನಮ್ಮ ರಾಷ್ಟ್ರ ಧ್ವಜವು ಮೂರೂ ಬಣ್ಣಗಳನ್ನು ಒಳಗೊಂಡಿದೆ. ಆ ಬಣ್ಣಗಳು ಯಾವವು ಎಂದರೆ ಕೇಸರಿ, ಬಿಳಿ, ಹಸಿರು.

ಈ ಕೇಸರಿ ಬಣ್ಣವು ತ್ಯಾಗ ಬಲಿದಾನ ಹಾಗು ಧೈರ್ಯದ ಸಂಕೇತವಾಗಿದೆ. ಬಿಳಿಯ ಬಣ್ಣ ಸತ್ಯ ಹಾಗು ಶಾಂತಿಯ ಸಂಕೇತವಾಗಿದೆ .ಹಾಗೆಯೆ ಹಸಿರು ಬಣ್ಣ ಅಭಿವೃದ್ಧಿಯ ಸಂಕೇತವಾಗಿದೆ.ಅದರ ಜೊತೆಗೆ ಬಿಳಿಯ ಬಣ್ಣದ ನಡುವೆ ನಾವು ನೀಲಿಯ ಬಣ್ಣದ ಚಕ್ರವನ್ನು ಸಹ ಕಾಣಬಹುದಾಗಿದೆ , ಈ ನೀಲಿ ಚಕ್ರವು 24 ರೇಖೆಗಳನ್ನು ಒಳಗೊಂಡಿದೆ . ಇದನ್ನು ಧಾರ್ಮ ಚಕ್ರ ಎಂದು ಕೂಡ ಕರೆಯುತ್ತಾರೆ ಮತ್ತು ಈ ನಮ್ಮ ರಾಷ್ಟ್ರ ಧ್ವಜದ ಉದ್ದ ಅಗಲವೂ 3:2 ರ ಪ್ರಮಾಣದಲ್ಲಿ ಇರಬೇಕು ಎನ್ನುವ ಒಂದು ನಿಯಮವಿದೆ ಅದರ ಜೊತೆಗೆ ರಾಷ್ಟ್ರ ಧ್ವಜವನ್ನು ತಯಾರಿ ಮಾಡುವಂತಹ ಹಕ್ಕನ್ನು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಎನ್ನುವ ಒಂದು ಗ್ರಾಮಕ್ಕೆ ನೀಡಲಾಗಿದೆ.

ಎರಡನೆಯದಾಗಿ ರಾಷ್ಟ್ರಗೀತೆ ಬಗ್ಗೆ, ನಮ್ಮ ರಾಷ್ಟ್ರಗೀತೆಯಾದಂತಹ ಜನಗಣಮನ ಎನ್ನುವ ಒಂದು ಗೀತೆಯನ್ನು ರಚನೆ ಮಾಡಿದಂತಹ ವ್ಯಕ್ತಿ ನೊಬೆಲ್ ಪ್ರಶಸ್ತಿ ವಿಜೇತರಾದಂತಹ ರವೀಂದ್ರನಾಥ ಟ್ಯಾಗೋರ ಅವರು ಇವರು ಸಂಸ್ಕೃತ ಮಿಶ್ರಿತ ಬಂಗಾಳಿ ಭಾಷೆಯಲ್ಲಿ ಈ ಒಂದು ರಾಷ್ಟ್ರಗೀತೆಯನ್ನು ರಚನೆ ಮಾಡಿದ್ದಾರೆ .

ಈ ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಿಗೆ ಮೀರಿದಂತೆ ಹಾಡಬೇಕು ಎನ್ನುವ ಒಂದು ನಿಯಮ ಸಹ ಇದೆ. ಅದರ ಜೊತೆಗೆ ರಾಷ್ಟ್ರಗೀತೆಯನ್ನು ಹಾಡುವಾಗ ಎಲ್ಲರೂ ಕೂಡ ಎದ್ದು ನಿಂತು ಗೌರವವನ್ನು ಸೂಚಿಸಬೇಕು, ಇಲ್ಲವಾದರೆ ಕಾನೂನಿನಲ್ಲಿ ಇದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ

ಸ್ನೇಹಿರತೆ ಇದಿಷ್ಟು ನಮ್ಮ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಇತಿಹಾಸ ಹಾಗೆಯೆ ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರ ಧ್ವಜ ,ರಾಷ್ಟ್ರ ಗೀತೆಯ ಕುರಿತಾದಂತಹ ಸಂಕ್ಷಿಪ್ತ ಮಾಹಿತಿಯಾಗಿದೆ. ಕೊನೆಯದಾಗಿ ಹೇಳಬೇಕು ಎಂದರೆ ನಮ್ಮ ಪೂರ್ವಜರು ಅನೇಕ ರೀತಿಯ ಪ್ರಯಾಸವನ್ನು ಪಟ್ಟು ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಈ ದಿನ ನಾವು ಸ್ವಾತಂತ್ರ್ಯ ಎನ್ನುವ ಒಂದು ಪರಿಶುದ್ಧವಾದ೦ತಹ ಗಾಳಿಯನ್ನ ಸೆವೆಸುತ್ತ ಇದ್ದೇವೆ ಇಂತಹ ಒಂದು ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಹದ್ದು ಭಾರತೀಯರಾದಂತಹ ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳುತ್ತಾ ನನ್ನ ಒಂದೆರಡು ಮಾತುಗಳನ್ನು ಮುಗಿಸುತ್ತ ಇದ್ದೇನೆ.

ಜೈ ಹಿಂದ

Leave a Comment