kalagalu in Kannada – ಕಾಲಗಳನ್ನು ಕಲಾರ್ಥಕ ಕ್ರಿಯಾಪದ ಎಂದು ಸಹ ಕರೆಯುತ್ತಾರೆ. ಕಾಲಗಳಲ್ಲಿ ೩ ವಿಧಗಳು
ಕಾಲಗಳು ಎಂದರೇನು ?
ಕಾಲಗಳು ಎಂದರೆ ಕ್ರಿಯಾ , ಧಾತು, ಕಾಲವನ್ನು ಅನುಸರಿಸಿ ಬದಲಾವಣೆಯನ್ನು ಹೊಂದುವ ಪದಗಳಿಗೆ ಮತ್ತು ವಾಕ್ಯಗಳಿಗೆ ಕಾಲಗಳು ಎಂದು ಕರೆಯುವರು.
(ಕಾಲಾರ್ಥಕ ಕ್ರಿಯಾಪದಗಳಲ್ಲಿ ಪ್ರತಿಯೊಂದು ಕಾಲದ ಅಖ್ಯಾತ ಪ್ರತ್ಯಯಗಳು ಬೇರೆ ಬೇರೆಯಾಗಿರುತ್ತವೆ . ಆದರೆ ಸಂಶ್ಯಾಯಾರ್ಥಕ ,ವಿಧ್ಯರ್ಥಕ , ನಿಷೇಧಾರ್ಥಕಗಳಲ್ಲಿ ಅಖ್ಯಾತ ಪ್ರತ್ಯಯಗಳು ಮೂರೂ ಕಾಲಗಳನ್ನು ಸೂಚಿಸುತ್ತದೆ )
Kalagalu in Kannada – ಕಾಲಗಳು ಯಾವುವು ?
ಕಾಲಗಳಲ್ಲಿ 3 ವಿಧಗಳು
1) ವರ್ತಮಾನ ಕಾಲ
2) ಭೂತಕಾಲ
3)ಭವಿಷ್ಯತ್ ಕಾಲ
1) ವರ್ತಮಾನ ಕಾಲ
ವರ್ತಮಾನ ಕಾಲವೆಂದರೆ ಈಗ ನಡೆಯುತ್ತಿರುವ ಕ್ರಿಯೆಯನ್ನು ತಿಳಿಸುವುದೇ ವರ್ತಮಾನಕಾಲ. (ಕ್ರಿಯೆಯು ಸದ್ಯ ನಡೆಯುತ್ತಿರುವ ಕಾಲ ಸೂಚಿಸುತ್ತದೆ). ವರ್ತಮಾನ -ಭೂತ ಕೃದಂತಾವ್ಯಗಳ ಮುಂದೆ ‘ಇರು’ ಧಾತುವಿನ ವರ್ತಮಾನ ಕಾಲದ ‘ಇದ್ದಾನೆ, ಇದ್ದಾರೆ’ ಮುಂತಾದ ವಿಕೃತ ರೂಪ ಸೇರಿಸಿದರೆ ‘ಅಪೂರ್ಣ ವರ್ತಮಾನ ಕಾಲದ ‘ ಅರ್ಥ ಹೇಳುವ ‘ಸಂಯುಕ್ತ ಕ್ರಿಯಾಪದವಾಗುತ್ತದೆ’.
ವರ್ತಮಾನ ಕಾಲ ಉದಾಹರಣೆ–
ವರ್ತಮಾನ ಕಾಲದಲ್ಲಿ ೩ ತರಹದ ವಿನ್ಯಾಸವಿರುವ ಕಾಲಗಳನ್ನು ಕಾಣಬಹುದಾಗಿದೆ ಅವುಗಳು ಈ ಕೆಳಗಿನಂತಿವೆ
- ಸಾಮಾನ್ಯ ವರ್ತಮಾನಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗುತ್ತಾನೆ.
ಸುಶೀಲಾಳು ದೇವಸ್ಥಾನಕ್ಕೆ ಹೋಗುತ್ತಾಳೆ
- ಅಪೂರ್ಣ ವರ್ತಮಾನಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗುತ್ತಿದ್ದಾನೆ
ಸುಶೀಲಾಳು ದೇವಸ್ಥಾನಕ್ಕೆ ಹೋಗುತ್ತಿದ್ದಾಳೆ
- ಪೂರ್ಣ ವರ್ತಮಾನ ಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗಿರುತ್ತಾನೆ .
ಸುಶೀಲಾಳು ದೇವಸ್ಥಾನಕ್ಕೆ ಹೋಗಿರುತ್ತಾಳೆ
2) ಭೂತಕಾಲ
ಕಳೆದು ಹೋದ ಕಾಲವೇ ಭೂತಕಾಲ , ಕಳೆದು ಹೋದ ಕಾಲದಲ್ಲಿ ಕ್ರಿಯೆ ನಡೆಯಿತು ಎಂಬುದನ್ನು ಇದು ಸೂಚಿಸುತ್ತದೆ .( ವರ್ತಮಾನ -ಭೂತ ಕೃದಂತಾವ್ಯಯಗಳ ಮುಂದೆ ‘ಇರು’ ಧಾತುವಿನ ಭೂತಕಾಲದ ರೂಪ ಸೇರಿಸಿದರೆ ಅಪೂರ್ಣ ಭೂತಕಾಲದ ಅರ್ಥ ಹೇಳುವ ಸಂಯುಕ್ತ ಕ್ರಿಯಾಪದಗಳಾಗುತ್ತವೆ .)
ಭೂತಕಾಲಕ್ಕೆ ಉದಾಹರಣೆಗಳು
ಭೂತಕಾಲದಲ್ಲಿ ೩ ತರಹದ ವಿನ್ಯಾಸದಲ್ಲಿ ಉದಾಹರಣೆಗಳನ್ನು ಕಾಣಬಹುದು ಅವುಗಳು ಈ ಕೆಳಗಿನಂತಿವೆ.
- ಸಾಮಾನ್ಯ ಭೂತಕಾಲ
ಉದಾಹರಣೆ – ಶಿವನು ಶಾಲೆಗೆ ಹೋದನು
ಗೀತಾ ದೇವಸ್ಥಾನಕ್ಕೆ ಹೋದಳು
- ಅಪೂರ್ಣ ಭೂತಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗುತ್ತಿದ್ದನು
ಗೀತಾ ದೇವಸ್ಥಾನಕ್ಕೆ ಹೋಗುತ್ತಿದ್ದಳು
- ಪೂರ್ಣ ಭೂತಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗಿದ್ದನು
ಗೀತಾ ದೇವಸ್ಥಾನಕ್ಕೆ ಹೋಗಿದ್ದಳು .
3)ಭವಿಷ್ಯತ್ ಕಾಲ
ಭವಿಷ್ಯತ್ ಕಾಲ ಎಂದರೆ ಮುಂದೆ ಬರಲಿರುವ ಕಾಲದಲ್ಲಿ ಕ್ರಿಯೆ ನಡೆಯುವುದನ್ನು ತಿಳಿಸುವುದೇ ಭವಿಷ್ಯತ್ ಕಾಲ ಎನ್ನುವರು.
( ವರ್ತಮಾನ- ಕೃದಂತಾವ್ಯಯಗಳ ಮುಂದೆ ‘ಇರು’ ಧಾತುವಿನ ವರ್ತಮಾನ ಕಾಲದ ಕ್ರಿಯಾಪದ ಅಥವಾ ಭೂತ-ಭವಿಷ್ಯತ್ ಕಾಲದ ಕ್ರಿಯಾಪದ ಸೇರಿಸಿದರೆ ‘ರುಡ್ಯಾರ್ಥ್ ‘ ಕ್ರಿಯಾಪದ ಅಂದರೆ ಕ್ರಿಯೆಯು ನಿರಂತರ ನಡೆಯುವುದೆಂಬ ಅರ್ಥ ಹೇಳುವ ‘ಸಂಯುಕ್ತ ಕ್ರಿಯಾಪದಗಳಾಗುತ್ತವೆ’)
ಭವಿಷ್ಯತ್ ಕಾಲಕ್ಕೆ ಉದಾಹರಣೆ
ಭವಿಷ್ಯತ್ ಕಾಲದಲ್ಲಿ ೩ ತರಹದ ವಿನ್ಯಾಸದ ಉದಾಹರಣೆಗಳನ್ನು ಕಾಣಬಹುದು ಅವುಗಳು ಈ ಕೆಳಗಿನಂತಿವೆ .
- ಸಾಮಾನ್ಯ ಭವಿಷ್ಯತ್ ಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗುವನು
ಗೀತಾ ದೇವಸ್ಥಾನಕ್ಕೆ ಹೋಗುವಳು
- ಅಪೂರ್ಣ ಭವಿಷ್ಯತ್ ಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗುವನಿದ್ದನು
ಗೀತಾಳು ದೇವಸ್ಥಾನಕ್ಕೆ ಹೋಗುವಳಿದ್ದಳು
- ಪೂರ್ಣ ಭವಿಷ್ಯತ್ ಕಾಲ
ಉದಾಹರಣೆ – ಶಿವನು ಶಾಲೆಗೆ ಹೋಗುತ್ತಿರುವನು
ಗೀತಲೂ ದೇವಸ್ಥಾನಕ್ಕೆ ಹೋಗುತ್ತಿರುವಳು.
*ಕಾಲಗಳಲ್ಲಿ ೩ ವಿಧಗಳು ಅಷ್ಟೇ ಅಲ್ಲದೆ ಇನ್ನು ಹಲವಾರು ಅಂಶಗಳನ್ನು ಕಾಣಬಹುದಾಗಿದೆ ಅವುಗಳು ಈ ಕೆಳಗಿನಂತಿವೆ .
- ಕಾಲಸೂಚಕ ಪ್ರತ್ಯಯಗಳು
ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದವಾಗುತ್ತದೆ. ಅಖ್ಯಾತವೆಂದರೆ ಭಾವ ಪ್ರಧಾನವಾದದ್ದು ,ಹೀಗೆ ಅಖ್ಯಾತ ಪ್ರತ್ಯಯಗಳು ಸೇರುವಾಗ ವರ್ತಮಾನ,ಭೂತ, ಭವಿಷ್ಯತ್ ಕಾಲಗಳಲ್ಲಿ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ಮಧ್ಯದಲ್ಲಿ ಉತ್ತ, ದ , ವ ಎಂಬ ಕಾಲಸೂಚಕ ಪ್ರತ್ಯಯಗಳು ಆಗಮವಾಗುತ್ತವೆ.
ಉದಾಹರಣೆ – ಹೋಗು+ ಉತ್ತ + ಆನೆ = ಹೋಗುತ್ತಾನೆ
ಹೋಗು + ಉತ್ತ + ಆಳೆ =ಹೋಗುತ್ತಾಳೆ
ತಿಳಿ + ದ + ಅಳು = ತಿಳಿದಳು
ಕೊಡು+ ವ + ಅನು = ಕೊಡುವನು
- ವಿಧ್ಯರ್ಥಕ ಕ್ರಿಯಾಪದ
ಆಶೀರ್ವಾದ , ಅಪ್ಪಣೆ, ಆಜ್ಞೆ , ಹಾರೈಕೆ ಇವುಗಳನ್ನು ಸೂಚಿಸುವಾಗ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ವಿಧ್ಯರ್ಥಕ ಕ್ರಿಯಾಪದಗಳಾಗುತ್ತವೆ.
ಉದಾಹರಣೆ – ದೇವರು ಒಳ್ಳೆಯದು ಮಾಡಲಿ.
ರಾಮನಿಗೆ ಜಯವಾಗಲಿ.
ಅವಳು ಪಾಠ ಓದಲಿ.
ನಿನ್ನ ಕೆಲಸ ಹೋಗಲಿ.
- ನಿಷೇಧಾರ್ಥಕ ಕ್ರಿಯಾಪದ
ಕ್ರಿಯೆಯು ನಡೆಯಲಿಲ್ಲ ಎಂಬ ಅರ್ಥ ಕೊಡುವಾಗ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳಾಗುತ್ತವೆ.
ಉದಾಹರಣೆ -ಅವಳು ಒಳಗೆ ಬಾರಳು.
ಸೀತೆ ಹಾರವನ್ನು ಕೊಡಳು.
- ಸಂಭಾವನಾರ್ಥಕ ಕ್ರಿಯಾಪದಗಳು
ಕ್ರಿಯೆಯು ನಡೆಯುವ ವಿಷಯದಲ್ಲಿ ಸಂಶಯ ಅಥವಾ ಊಹೆ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ಕ್ರಿಯಾಪದಗಳು.
ಉದಾಹರಣೆ – ರಾಮನು ಕಾಡಿಗೆ ಹೋದನು.
ಹಸು ಮೇಯಲು ಹೋದಿತು
ನೀವು ಅಲ್ಲಿಗೆ ಹೋದಿರಿ
- ಕಾಲಪಲ್ಲಟ
ಒಂದು ಕಾಲದಲ್ಲಿ ನಡೆಯುವ ಕ್ರಿಯೆಯನ್ನು ಬೇರೆ ಕಾಲದ ಕ್ರಿಯಾ ರೂಪದಿಂದ ಹೇಳುವ ಪ್ರಯೋಗಗಳು ಭಾಷೆಯಲ್ಲಿವೆ ,ಇದನ್ನು ಕಾಲಪಲ್ಲಟ ಎನ್ನುವರು .
ಯಾವುದೇ ಒಂದು ಕಾಲದಲ್ಲಿ ಹೇಳಬೇಕಾದ ಕ್ರಿಯೆಯನ್ನು ಬೇರೊಂದು ಕಾಲದ ಕ್ರಿಯಾರೂಪದಿಂದ ಹೇಳುವುದನ್ನು ‘ಕಾಲಪಲ್ಲಟ’ ಅಥವಾ ‘ಕಲಾವಿಪರಿಣಾಮ ‘ ಅನ್ನುವರು. ಈ ಕಾಲಪಲ್ಲಟವು ಮುಖ್ಯವಾಗಿ ವಾಕ್ಯದಲ್ಲಿಯ ಕ್ರಿಯಾಪದದಲ್ಲಿ ಮಾತ್ರ ನಡೆಯುತ್ತದೆ. ಅದು ನಾಲ್ಕು ಪ್ರಕಾರಗಳಿರುತ್ತವೆ.
1) ವರ್ತಮಾನಕಾಲದ ಸ್ಥಳದಲ್ಲಿ ಭವಿಷ್ಯತ್ ಕಾಲದ ಕ್ರಿಯಾಪದ ಪ್ರಯೋಗ
2) ಭವಿಷ್ಯತ್ ಕಾಲಗಳ ಸ್ಥಳದಲ್ಲಿ ವರ್ತಮಾನಕಾಲದ ಕ್ರಿಯಾಪದ ಪ್ರಯೋಗ
3) ವರ್ತಮಾನ / ಭವಿಷ್ಯತ್ ಕಾಲಗಳ ಸ್ಥಳದಲ್ಲಿ ಭೂತಕಾಲದ ಕ್ರಿಯಾಪದ ಪ್ರಯೋಗ
4) ಭೂತಕಾಲದ ಸ್ಥಳದಲ್ಲಿ ವರ್ತಮಾನ /ಭವಿಷ್ಯತ್ ಕಾಲಗಳ ಕ್ರಿಯಾಪದ ಪ್ರಯೋಗ
(ಹೀಗೆ ಒಂದು ಕಾಲದ ಕ್ರಿಯಾಪದದ ಸ್ಥಳದಲ್ಲಿ ಬೇರೆ ಯಾವುದೇ ಒಂದು ಕಾಲದ ಕ್ರಿಯಾಪದವನ್ನು ವಾಕ್ಯದಲ್ಲಿ ಪ್ರಯೋಗಿಸುವದು ಕಂಡು ಬರುತ್ತದೆ )
Note- ವರ್ತಮಾನ ಕಾಲ ಸೂಚಕ ಆಗಮ ‘ಉತ್ತ’ಎಂದು, ಭವಿಷ್ಯತ್ ಕಾಲ ಸೂಚಕ ಆಗಮ ‘ಉವ’ ಎಂದು, ಭೂತಕಾಲ ಸೂಚಕ ಆಗಮ ‘ದ ‘ ಎಂದು ಬರುವುದು.
ನಿಮಗೆ ನಾವು ನೀಡಿರುವ ಮಾಹಿತಿ Kalagalu in Kannada ಉಪಯುಕ್ತವಾಗಿದ್ದರೆ , ನಮ್ಮ Kannada words ವೆಬ್ಸೈಟಲ್ಲಿ ಇರುವ ಇನ್ನಿತರ ಮಾಹಿತಿಗಳನ್ನು ಕೂಡ ಓದಿ