Sarvajnana Vachanagalu | 50 ಸರ್ವಜ್ಞ ವಚನಗಳು

Sarvajnana Vachanagalu –  ಸರ್ವಜ್ಞರವರು 16 ನೇ ಶತಮಾನದ ಪ್ರಸಿದ್ಧ ಕನ್ನಡ ಕವಿಯಾಗಿದ್ದು, ಅವರ ತ್ರಿಪದಿಗಳು ಅಥವಾ ಮೂರು-ಸಾಲಿನ ಪದ್ಯಗಳಿಗೆ ಹೆಸರುವಾಸಿಯಾಗಿದ್ದರು. 

ಸರ್ವಜ್ಞ ತ್ರಿಪದಿಗಳು – Sarvajnana Vachanagalu

ಸರ್ವಜ್ಞ ತ್ರಿಪದಿಗಳು ಎಂದರೆ ೩ ಸಾಲಿನ ವಚನಗಳು, ಸರ್ವಜ್ಞ ವಚನಗಳು (Sarvajnana vachanagalu ) ಹೆಚ್ಚಾಗಿ ೩ ಸಾಲುಗಳನ್ನೇ ಹೊಂದಿರುತ್ತವೆ ಅದರಿಂದ ಸರ್ವಜ್ಞ ತ್ರಿಪದಿಗಳು ಎಂದು ಕರೆಯಲಾಗುತ್ತದೆ

  • ವಿದ್ಯೆ ಕಲಿಸದ ತಂದೆ । ಬುದ್ದಿ ಹೇಳದ ಗುರು ।
    ಬಿದ್ದಿರಲು ಬಂದು ನೋಡದ ತಾಯಿಯು ।
    ಶುದ್ಧ ವೈರಿಗಳು ಸರ್ವಜ್ಞ ।
  • ಮುನ್ನ ಪೂರ್ವದಲಾನು । ಪನ್ನಗಧರನಾಳು
    ಎನ್ನಯ ಪೆಸರು ಪುಷ್ಪದತ್ತನು -ಎಂದು
    ಮನ್ನಿಪರು ನೋಡ ಸರ್ವಜ್ಞ .
  • ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ
    ಹಸ್ತದಿಂದಧಿಕ ಹಿತರಿಲ್ಲ ಪರದೈವ
    ನಿಂತ್ರನಿಂದಿಲ್ಲ ಸರ್ವಜ್ಞ .
  • ನಿದ್ರೆಯಿಂ ಸುಖವಿಲ್ಲ ಪದ್ಯದಿಂ ಅರಿವಿಲ್ಲ
    ಮುದ್ರೆಯಿಂದದಧಿಕ ಮಾತಿಲ್ಲ ದೈವವುಂ
    ರುದ್ರನಿಂದಿಲ್ಲ ಸರ್ವಜ್ಞ .
  • ಮಾತೆಯಿಂ ಹಿತರಿಲ್ಲ, ಕೋತಿಯಂ ಮರುಳಿಲ್ಲ
    ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ
    ಜಾತನಿಂದಿಲ್ಲ ಸರ್ವಜ್ಞ .
  • ಇದ್ದಲ್ಲಿಂ ಕರಿದಿಲ್ಲ ಬುದ್ಧಿಯಿಂ ಹಿರಿದಿಲ್ಲ
    ವಿದ್ಯೆಯಿಂದಧಿಕ ಧನವಿಲ್ಲ ದೈವ ತಾ
    ರುದ್ರನಿಂದಿಲ್ಲ ಸರ್ವಜ್ಞ .
  • ನಾಲಿಗೆಗೆ ನುಣಿಪಿಲ್ಲ ಹಾಲಿಗಿಂ ಬಿಳುಪಿಲ್ಲ
    ಕಾಲದಿಂದದಧಿಕ ಅರಿವಿಲ್ಲ ದೈವವುಂ
    ಶೂಲಿಯಿಂದಿಲ್ಲ ಸರ್ವಜ್ಞ .
  • ಹರಿಬ್ರಹ್ಮರೆಂಬುವರು ಹರನಿಂದಲಾದವರು
    ಅರಸನಿಗೆ ಆಳು ಸರಿಯಿಹನೇ ಪಶುಪತಿಗೆ
    ಸರಿಯರು ಕಾಣೆ ಸರ್ವಜ್ಞ .
  • ಅಂಬಳೂರೊಳಗೆಸೆವ , ಕುಂಬಾರಸಾಲೆಯಲಿ
    ಇಂಬಿನ [ಕಳೆಯ ] ಮಳಿಯೊಳು -ಬಸವರಾಸ
    ನಿಂಬಿಟ್ಟನೆನ್ನ ಸರ್ವಜ್ಞ .
  • ಬಿಂದುವ ಬಿಟ್ಟು ಹೊ । ದಂದು ಬಸುರಾದವಳ
    ಲಂದಡಿಯಷ್ಟಾದಶ ಮಾಸ – ಉದರದಲ್ಲಿ
    ನಿಂದು ನ ಬೆಳೆದೆ ಸರ್ವಜ್ಞ .
  • ಹೆತ್ತವಳು ಮಾಳಿ ಎನ್ನ, ನೊತ್ತಿ ತೆಗೆದವಳು ಕೇಶಿ
    ಕತ್ತು ಬೆನ್ನ ಹಿಡಿದವಳು ಕಾಳಿ -ಮೊಯಿದಿಲ್ಲೆನ್ನ
    ಬತ್ತಲಿರಿಸಿದಳು ಸರ್ವಜ್ಞ .
  • ಕೊಟ್ಟು ಹುಟ್ಟಲಿಲ್ಲ ,ಮುಟ್ಟಿ ಪೂಜಿಸಲಿಲ್ಲ
    ಸಿಟ್ಟಿನಲ್ಲಿ ಶಿವನ ಬೈದರೆ , ಶಿವ ತಾನು ರೊಟ್ಟಿ ,
    ಕೊಡುವೆನೆ ಸರ್ವಜ್ಞ .
  • ಹೊಲೆಯಿಲ್ಲ ಅರಿದಂಗೆ, ಬಲವಿಲ್ಲ ಬಡವಂಗೆ
    ತೊಲೆ ಕಂಬವಿಲ್ಲ , ಗಗನಕ್ಕೆ ಯೋಗಿಗೆ ಕುಲವೆಂಬುದಿಲ್ಲ
    ಸರ್ವಜ್ಞ .
  • ಇಂದುವಿನೊಲುರಿಯುಂಟೆ ? ಸಿಂಧುವಿನೊಳಾರಬಂಟೆ ?
    ಸುಂದ ವೀರನೊಳು ಭಯ ಉಂಟೇ ? ಭಕ್ತಿಗೆ
    ಸಂದೇಹ ಉಂಟೆ ? ಸರ್ವಜ್ಞ.
  • ಕಾಡೆಲ್ಲಾ ಕಸುಗಾಯಿ , ನಾವೆಲ್ಲ ಹೆಗ್ಗಿಡವು
    ಆಡಿದ ಮಾತು ನಿಜವಿಲ್ಲ ಮಲೆನಾಡು ಕಾಡು
    ಸಾಕೆಂದ ಸರ್ವಜ್ಞ .
  • ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
    ಜಾತಿ ವಿಜಾತಿ ಎನಬೇಡ ದೇವನೊಲಿ
    ದಾತದೆ ಜಾತಾ . ಸರ್ವಜ್ಞ .
  • ಹಮ್ಮು ಎಂಬುದು ಕಿಚ್ಚು ಒಮ್ಮೆಲೇ
    ನಂದುವುದೇ ? ಬೊಮ್ಮು ಹರಿ ಬೆಂದು
    ಜಗಬೆಂದು ದಾಕಿಚ್ಚ ಗಮ್ಮಿಹನೆ ಯೋಗಿ ಸರ್ವಜ್ಞ.
  • ಕೋತಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ
    ಮೇಲು ಮೇಟಿಯಿಂದ ರಾಟಿ ನಡೆದುದಲ್ಲದೆ
    ದೇಶ ದಾಟವೇ ಕೆಡಗು ಸರ್ವಜ್ಞ .
  • ಹಸಿವ ಕೊಂದಾತಂಗೆ , ಪಶುವಧೆಯ
    ಮಾಡದವಗೆ ಹುಸಿ ಕರ್ಮ
    ಕಾಮವಳಿಂದಾಗೇ ಇಹಪರಿದಿ ಶಶಿಧರನೊಲಿವ ಸರ್ವಜ್ಞ .
  • ಎಂಜಲವು ಶಾಚವು ,ಸಂಜೆ ಎಂದೆನಬೇಡ
    ಕುಂಜರವು ವನವನೆನೆವಂತೆ ಬಿಡದೇನಿ
    ರಂಜನನ ನೆನೆಯೂ -ಸರ್ವಜ್ಞ .
  • ಸರ್ವಜ್ಞನೆಂಬುವನು ಗರ್ವದಿಂದಾದವನೆ
    ಸರ್ವರೊಳೊಂದೊಂದು ನುಡಿಗಲಿತು
    ವಿದ್ಯೆಯ ಪರ್ವತವೇ ಆದ ಸರ್ವಜ್ಞ .
  • ಕಲ್ಲುಕಲ್ಲೆಂಬುವಿರಿ, ಕಲ್ಲೋಳಿಪ್ಪುವುದೇ ದೈವ ?
    ಕಲ್ಲಲ್ಲಿ ಕಳೆಯ ನಿಲಿಸಿದ ,ಗುರುವಿನ
    ಸೊಲ್ಲಲ್ಲೇ ದೈವ , ಸರ್ವಜ್ಞ.
  • ಸಾಲವನು ಕೊಂಬಾಗ ಹಾಲೊಗರುಂಡಂತೆ
    ಸಾಲಿಗರು ಕೊಂಡು ಎಳೆವಾಗ
    ಕಿಬ್ಬದಿಯ ಕೀಳು ಮುರಿದಂತೆ ಸರ್ವಜ್ಞ .
  • ಜ್ಞಾನ ಉಳ್ಳವನೋಡಾಲು ಭಾನುವಿನಂತಿಹುದು
    ಜ್ಞಾನವಿಲ್ಲದವನ ಬರಿಯೊಡಲು ಹಾಳೂರ
    ಶುನಕನಂತಕ್ಕೂ ಸರ್ವಜ್ಞ .
  • ಒಳಗಣ ಜ್ಯೋತಿಯ ಬೆಳಗ ಬಲ್ಲಾತಂಗೆ
    ಬೆಳಗಾಯಿತೇಳಿ ಕೇಳಿ ಎಂತೆಂಬ ನುಡಿಯ
    ಕಳವಳವೇಕೆ ಸರ್ವಜ್ಞ .
  • ಕಂಡವರ ದಂಡಿಸುತ ,ಕೊಂದವರ ವಡವೆಗಳ
    ನುಂಡುಂಡು ಮಲಗಿ ಮಡಿದ ಮೇಲುವೆಗೆ
    ಯಮದಂಡ ತಪ್ಪುವದೇ ಸರ್ವಜ್ಞ .
  • ಒಂದೊಂದು ಹನಿ ಬಿದ್ದು ನಿಂದಲ್ಲಿ ಮಡುವಕ್ಕೆ
    ಸಂದ ಜ್ಞಾನಿಗಳ ಒಡನಾಡೆ ಪರಬೊಮ್ಮ
    ಮುಂದೆ ಬಂದಕ್ಕೂ ಸರ್ವಜ್ಞ.
  • ಏನಾದಡೇನಯ್ಯಾ ತಾನಾಗದನ್ನಕ್ಕೂ
    ತಾನಾಗಿ ತನ್ನನಿರಿದೊಡೆ ಲೋಕ ತಾ
    ನೇನಾದೊಡೇನು ಸರ್ವಜ್ಞ.
  • ತನ್ನ ತನ್ನತಾನರಿದವನ ಮುನ್ನ ಹೊದ್ದದ್ದು ಮಾಯೆ
    ಉನ್ನತ ಮಪ್ಪ ಗಜವೇರಿ ಒಪ್ಪವನು
    ಕುನ್ನಿಗಂಜುವನೆ ಸರ್ವಜ್ಞ.
  • ಅರಿಯನೆಂಬುವಗೊಂದು ಕುರುಹುಂಟು ಬೊಮ್ಮನ
    ನರಿದೆ ನೆಂಬುವಗೊಂದು ಅರಿವ ತಾನರಿದೊಡೆ
    ತೆರೆಹಿಲ್ಲ ಬೊಮ್ಮ ಸರ್ವಜ್ಞ.
  • ಭಕ್ತಿ ಎಂಬುದು ಬೀಜ ಮುಕ್ತಿ ಎಂಬುದೇ ಫಲವು
    ಯುಕ್ತಿಯು೦ ವೃಕ್ಷ ವೇರಿದಗೆ ಇಹದಲ್ಲಿ
    ಮುಕ್ತಿ ಇಹುದೆಂದ ಸರ್ವಜ್ಞ.
  • ಮನದಲ್ಲಿ ನೆನೆವಂಗೆ ಮನೆಯೇನು ? ಮಠವೇನೂ ?
    ಮನದಲ್ಲಿ ನೆನೆಯದಿರುವವನು ದೇಗುಲದ ಕೊನೆಯಲ್ಲಿದ್ದೆನು
    ಸರ್ವಜ್ಞ.
  • ದಾನಭಕ್ತಿಗಳಲ್ಲಿ ನಾನು ಮರೆದಿರಬೇಕು
    ನಾನೆಂಬ ರೋಗ ನೀಗಿದಾಗೆ, ಗುರುಬೋಡೆ
    ತಾನೇ ಫಲಿಸುವದು ಸರ್ವಜ್ಞ.
  • ಇಂಜಿನೊಳು ನಾಟವನು, ತೆಂಗಿನೊಳಗಳನೀರು
    ಭೃಂಗ ಕೋಗಿಲೆಯ ಕಂಠದೊಳು ,ಗಾಯನವ
    ತುಂಬಿದವರಾರು ಸರ್ವಜ್ಞ.
  • ಕಂಡುದನು ಆಡೇ ಭೂ । ಮಂಡಲವು ಮುನಿಯುವುದು
    ಕೊಂಡಾಡುತಿಚ್ಛೇ ನುಡಿದಿಹರೆ , ಜಗವೆಲ್ಲ ।
    ಮುಂಡಾಡುತಿಹುದು ಸರ್ವಜ್ಞ.
  • ಎಲ್ಲ ಬಲ್ಲವರಿಲ್ಲ ,ಬಲ್ಲವರು ಬಹಳಿಲ್ಲ
    ಬಲವಿಲ್ಲ ಬಲ್ಲವರಿದ್ದು
    ಸಾಹಿತ್ಯ ಎಲ್ಲರಿಗಲ್ಲ ಸರ್ವಜ್ಞ .
  • ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
    ಎತ್ತು ಗಾಣುವನು ಹೊತ್ತು ತಾ
    ನಿತ್ಯದಲಿ ಸುತ್ತಿಬಂದಂತೆ ಸರ್ವಜ್ಞ.
  • ಏಳು ಕೋಟಿಯೇ ಕೋಟಿ , ಏಳು ಲಕ್ಷವೇ ಲಕ್ಷ
    ಏಳು ಸಾವಿರ ಎಪ್ಪತ್ತು ವಚನಗಳ
    ಹೇಳಿದನು ಕೆಳ ಸರ್ವಜ್ಞ.
  • ಊರಿಂಗೆ ದಾರಿಯನು । ಆರು ತೋರಿದಡೇನು ।
    ಸಾರಯದ ನಿಜವಾ ತೋರುವ, ಗುರುವು ತಾ ।
    ನರಾದಡೇನು ಸರ್ವಜ್ಞ ।।
  • ಸತ್ಯವೆಂಬುದು ತಾನು| ಹಿತ್ತಲದ ಗಿಡ ನೋಡ
    ಮತ್ತೆಲ್ಲಿ ನೋಡಿ ಅರಸದಲೇ ತಾನಿರ್ದ
    ಹತ್ತಿಲೆ ನೋಡ ಸರ್ವಜ್ಞ.
  • ಹಮ್ಮು ಎಂಬುವ ಕಿಚ್ಚು ಒಮ್ಮೆಲೇ
    ನಂದುವುದೇ ?ನಂಬೊಮ್ಮ ಹರಿ ಬೆಂದು ಜಗಬೆಂದು
    ದಾಕಿಚ್ಚ ಗುಮ್ಮಿಹನೆ ಯೋಗಿ ಸರ್ವಜ್ಞ .
  • ತಂದೆ ಹಾರುವನಲ್ಲ । ತಾಯಿ ಮಾಳಿಯೂ ಅಲ್ಲ ।
    ಚಂದ್ರಶೇಖರನ ವರದಿಂದ ಪುಟ್ಟಿದ
    ಕಂದ ತಾನೆಂದು ಸರ್ವಜ್ಞ .
  • ಮಾಳನೂ ಮಾಳಿಯೂ । ಕುಳ್ತಿ೦ದ ಹೆಮ್ಮೆಯಲಿ ।
    ಕೇಳೇ ನಿನಾರ ಮಗನೆಂದು -ನಾ ಶಿವನ
    ಮೇಳದನುಗೆಂಬೆ ಸರ್ವಜ್ಞ .
  • ಬಂಧುಗಳು ಆದವರು , ಬ೦ದುಂಡು ಹೋಗುವರು
    ಬಂಧವನ ಕಳೆಯಲರಿಯರು , ಗುರುವಿಂದ
    ಬಂಧುಗಳು ಉಂಟೆ ? ಸರ್ವಜ್ಞ.
  • ಪುರುಷ ಕಬ್ಬಿನದೆಸೆವ ,ಕರಡಿಯೊಳಗಡಗಿಹುದೆ ?
    ಹರಿಭಕ್ತಿ ಉಳ್ಳ ಮಹಿಮ , ಸಂಸಾರದೊಳು
    ಚಿರಕಾಲವಿಹವೇ ? ಸರ್ವಜ್ಞ.
  • ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
    ಗೋರ್ಕಲ್ಲಮೇಲೆ ಮಳೆಗರೆದರೆ
    ಆಕಲ್ಲು ನೀರುಕುಡಿವುದೆ ಸರ್ವಜ್ಞ.
  • ಕೂಳು ಹೋಗುವ ತನಕ ಗುಳಿಯಂತಿರುತಿಕ್ಕು
    ಕೂಳು ಹೋಗದಾ ಮೂಡಿ ಬರಲು
    ಮನುಜನವ ಮುಳನಾಯಕ್ಕೂ ಸರ್ವಜ್ಞ.
  • ಪುರುಷಲೋಹವ ಸೋಂಕಿ , ವರುಷವಿರಬಲ್ಲುದೆ ?
    ಪುರುಷವೆಂತಂತೆ ಶಿಷ್ಯಂಗೆ ಗುರುವಿನ
    ದರುಶನವೇ ಪುರುಷ ಸರ್ವಜ್ಞ.
  • ಜಾಳಿಗೆಯೂ ಕಟ್ಟುವುದು । ಕಾಳಗಕೆ ನಡೆವುದು
    ಸೂಳೇರ ಸುಖವ ಮಾಡುವುದು
    ಕೂಳಿನ ಗುಣವು ಸರ್ವಜ್ಞ.
  • ಮುದ್ದೆಗಳು ಇಲ್ಲದೆ । ನಿದ್ರೆಗಳು ಬಾರವು
    ಮುದ್ದು ಮಾತುಗಳು ಸೊಗಸವು -ಒಡಲಿಗೆ
    ಮುದ್ದೆ ತಪ್ಪಿದರೆ ಸರ್ವಜ್ಞ .

ನಾವು ಪಟ್ಟಿ ಮಾಡಿರುವ ವಚನಗಳು ಬಿಟ್ಟು ಇನ್ನು ಯಾವುದಾದರು sarvajnana vachanagalu ನಿಮಗೆ ಗೊತ್ತಿದ್ದರೆ ಕಾಮೆಂಟ್ ಮಾಡಿ , ನಾವು ಅವುಗಳನ್ನು ನಮ್ಮ ಪೋಸ್ಟ್ ಅಲ್ಲಿ ಸೇರಿಸುತ್ತೇವೆ

ಕೆಳಗಿನ ವಚನಗಳನ್ನು ಕೂಡ ಓದಿ :

Leave a Comment

error: Content is protected !!