Atiyase Gathi Gedu Essay in Kannada – ಅತಿಯಾಸೆ ಗತಿಗೇಡು ಗಾದೆ ಇದೊಂದು ಸುಪ್ರಸಿದ್ಧ ಗಾದೆಯಾಗಿದೆ. ಹಿರಿಯರು ಅನುಭವಗಳಿಂದ ನುಡಿದ ನುಡಿಮುತ್ತುಗಳಾಗಿವೆ
ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರು ಗಾದೆ ಸುಳ್ಳಾಗುವುದಿಲ್ಲ ಮತ್ತು ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ.
ಆಸೆಯೇ ಉತ್ಸಾಹದ ಜನನಿ ಅದು ಜೀವನದ ಸಂಚಲನ ಶಕ್ತಿ, ಆಸೆ ಇಲ್ಲದಿದ್ದರೆ ಮನುಷ್ಯ ಕಾಡು ಪ್ರಾಣಿಯಂತೆ ಜೀವಿಸುತ್ತಿದ್ದ ,ಆದ್ರೆ ಆಸೆಯೂ ಹಿತಮಿತವಾಗಿರಬೇಕು
ಅತಿಯಾಸೆ ಗತಿಗೇಡು ಗಾದೆ ವಿಸ್ತರಣೆ
ಈ ಗಾದೆಯೂ ಕನ್ನಡ ಪ್ರಸಿದ್ಧ ಗಾದೆಗಳಲ್ಲಿ ಒಂದಾಗಿದೆ. ಒಬ್ಬ ಮನುಷ್ಯನಿಗೆ ಹಲುವು ಆಸೆ ಇರುತ್ತದೆ, ಅತಿಯಾಸೆ ಮನುಷ್ಯನ ಸಹಜ ಪ್ರವೃತ್ತಿ ಕೂಡ ಹೌದು ಆದರೆ ವ್ಯಕ್ತಿ ದುರಾಸೆಯಿಂದ ಎಲ್ಲವನ್ನು ಕಳೆದುಕೊಳ್ಳಬೇಕಾಗಬಹುದು ಎಂಬುದು ಇದರ ಅರ್ಥ
ಮಾನವ ತನ್ನ ಜೀವನವನ್ನು ನಡೆಸಲು ಬೇಕಾದ ಸೌಲಭ್ಯಗಳನ್ನು ಮಾತ್ರ ಹೊಂದಬೇಕು ,ಆದರೆ ಮನುಷ್ಯ ಅತಿ ಆಸೆಯಿಂದ ಕೆಟ್ಟ ಮಾರ್ಗದ ಕಡೆಗೆ ಸಾಗಿ ಆಸ್ತಿ ಸಂಪತ್ತು ಮಾಡುವಲ್ಲಿ ನಿರತನಾಗುತ್ತಾನೆ ,ಈ ರೀತಿಯ ಅತಿಯಾಸೆಯಿಂದ ಜೀವನದಲ್ಲಿ ನೆಮ್ಮದಿಯನ್ನು ಸಹ ಕಳೆದುಕೊಳ್ಳುತ್ತಾನೆ
Atiyase Gathi Gedu Essay in Kannada
ಅತಿಯಾಸೆ ಗತಿಗೇಡು meaning in Kannada – ಜೀವನದಲ್ಲಿ ಎಲ್ಲ ಆಸೆ ಗಳು ಮಿತಿಯಾಗಿರಬೇಕು, ಅತಿಯಾದರೆ ಅಮೃತವು ಕೂಡ ವಿಷವಾಗುತ್ತದೆ ಮತ್ತು ಆತಿಯಾಸೆಯಿಂದ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಆಸೆಯೇ ದುಃಖಕ್ಕೆ ಮೂಲವೆಂಬಂತೆ ಭಾವಿಸಿ ಇದ್ದಷ್ಟರಲ್ಲಿಯೇ ಸಂತೋಷದಿಂದ ಇರಬೇಕೆ ಹೊರತು ಆಸೆ ಅತಿಯಾಗಬಾರದು.. ಅತಿ ಆಸೆ ಪಟ್ಟರೆ ಜೀವನದಲ್ಲಿ ಒಮ್ಮೆ ತಾನು ಪಡೆದನ್ನು ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ
ಅತಿಯಾಸೆ ಗತಿಗೇಡು ಗಾದೆ ಮಾತು ಉದಾಹರಣೆ
ಈ ಗಾದೆಗೆ ಹೋಲುವಂತೆಯೇ ಇನ್ನೊಂದು ಗಾದೆಯನ್ನು ಸಹ ನಾವು ಇದಕ್ಕೆ ಹೋಲಿಸಿ ಹೇಳಬಹುದು ಅದುವೇ ‘ಹಾಸಿಗೆ ಇದ್ದಷ್ಟು ಕಾಲು ಚಾಚು ‘ ಅಂದರೆ ಮನುಷ್ಯ ತಮ್ಮ ಹತ್ತಿರ ಇರುವುದರಲ್ಲಿಯೇ ಸಮಾಧಾನನದಿಂದ ಜೀವನ ನಡೆಸಬೇಕು ಹೆಚ್ಚಿಗೆ ಆಸೆ ಪಡಬಾರದು ಎಂದು ಈ ಗಾದೆಯಿಂದಲೂ ಹೇಳಬಹುದು
- ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ವರವನ್ನು ಪಡೆದ ಮೈದಾಸ ತನ್ನ ಮಗಳನ್ನು ಚಿನ್ನದ ಗೊಂಬೆಯನ್ನಾಗಿಸಿ ದುಃಖ ಪಡುತ್ತಾನೆ, ಆಸೆ ಎಂಬುದು ಬಹಳ ಕೆಟ್ಟದ್ದು ಎಂಬುದಕ್ಕೆ ಇದು ಕೂಡ ಉದಾಹರಣೆ
- ಒಂದೂರಿನಲ್ಲಿ ಒಬ್ಬ ಒಂದು ಕೋಳಿಯನ್ನು ಹೊಂದಿದ್ದ, ಆ ಕೋಳಿ ಪ್ರತಿ ದಿನವೂ ಒಂದು ಬಂಗಾರದ ಮೊಟ್ಟೆಯನ್ನು ಇಡುತಿತ್ತು, ಆತ ಅದನ್ನು ಚಿನ್ನ ಬೆಳ್ಳಿ ಅಂಗಡಿಯಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಒಮ್ಮೆ ಅವನಿಗೆ ಅತಿಯಾದ ಆಸೆ ಮೂಡಿತು ಅಲ್ಲ ದಿನಕ್ಕೆ ಒಂದೇ ಒಂದು ಮೊಟ್ಟೆ ಪಡೆದು ಮಾರಾಟ ಮಾಡಿದರೆ ಹೊಟ್ಟೆ ಮಾತ್ರ ತುಂಬುತ್ತದೆ ಅದೇ ಒಂದೇ ಬಾರಿಗೆ ಆ ಕೋಳಿಯ ಹೊಟ್ಟೆಯಲ್ಲಿರುವ ಮೊಟ್ಟೆಯನ್ನೆಲ್ಲ ತೆಗೆದುಕೊಂಡರೆ ನಾನು ಶ್ರೀಮಂತನಾಗುತ್ತೇನೆ ಎಂದು ಕೋಳಿಯನ್ನು ಕೊಯ್ದ ಕೋಳಿ ಸತ್ತು ಹೋಯಿತು ಅದರ ಹೊಟ್ಟೆಯಲ್ಲಿ ಮೊಟ್ಟೆಯೇ ಇರಲಿಲ್ಲ .ಆಟಿ ಆಸೆ ಪಟ್ಟಿದ್ದಕ್ಕೆ ಆತ ನಿತ್ಯ ಸಿಗುತ್ತಿದ್ದ ಮೊಟ್ಟೆ ಕಳೆದುಕೊಂಡು ಕಂಗಾಲಾದ..
- ಆಸೆಗಳು ಅತಿಯಾಗಿ ಆದಾಯ ಕಡಿಮೆ ಇದ್ದಾಗ ಸಾಲ ಮಾಡಬೇಕಾಗುತ್ತದೆ ಇದರಿಂದ ಸಮಸ್ಯೆಗೆ ಸಿಲುಕಬೇಕಾಗುತ್ತದೆ
ಪ್ರಸ್ತುತ ‘ಅತಿಯಾಸೆ ಗತಿಗೇಡು ಗಾದೆ ವಿಸ್ತರಣೆ ‘ ತಿರುಳನ್ನು ‘ತಿರುಕನ ಕನಸು ‘ ಪದ್ಯ ತುಂಬಾ ಸ್ಪಷ್ಟವಾಗಿ ವಿವರಿಸುತ್ತದೆ
ತಿರುಕ ರಾಜನಾಗುವ ಅವಕಾಶ ಪಡೆದಂತೆಯೂ ಸಕಲ ವೈಭವಗಳಲ್ಲಿ ಮರೆಯದಂತೆಯೂ ಕನಸು ಕಾಣುತ್ತದೆ. ಶತ್ರುಗಳ ದಾಳಿ ಎದುರಾಗುತ್ತಲೇ ಕೈಕಾಲುಗಳನ್ನು ಒದರಿ ಎಚ್ಚರಗೊಳ್ಳುತ್ತನೆ. ಅಂದು ಲಭಿಸಿದ ಅನ್ನದ ಬಟ್ಟಲು ಮಣ್ಣು ಪಾಲಾಗುತ್ತದೆ. ತನ್ನ ಇತಿಮಿತಿ ಮೀರಿ ಆಸೆ ಪಡಬಾರದು ಹಾಗೆ ಮಿತಿಮೀರಿ ಆಸೆ ಪಟ್ಟದ್ದು ಅದೃಷ್ಟವಶಾತ್ ಸಿಕ್ಕರೂ ಅದರ ಬೆನ್ನಲ್ಲೇ ಬರುವ ಅಪಾಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶಕ್ತಿ ಇರುವುದಿಲ್ಲ.
ಅತಿ ಆಸೆ ಗತಿಗೇಡು meaning in english
This proverb conveys the concept that immoderate ambition or desire can genuinely gradually down development or fulfillment. It indicates that one needs to pursue desires with a balanced and realistic technique averting the pitfalls of over-eagerness
ಅತಿ ಆಸೆ ಗತಿಗೇಡು ಗಾದೆಯ ಸಂದೇಶ
ಈ ಗಾದೆಯಿಂದ ನಾವು ನೀವು ಅರ್ಥ ತಿಳಿಕೊಳ್ಳಬೇಕಾಗಿರೋದು ತುಂಬಾ ಇದೆ ಮತ್ತು “ಆಸೆಗೆ ಮಿತಿ ಇರಲಿ ಆಸೆಯೇ ದುಃಖಕ್ಕೆ ಮೂಲ” , ಜೀವನದಲ್ಲಿ ಸಾರ್ಥಕತೆ ಮತ್ತು ಸಂತೋಷ ತುಂಬಾನೇ ಮುಖ್ಯ ಎಂದು ನಾವೆಲ್ಲರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಅಗತ್ಯವಿರುವಷ್ಟು ಪ್ರಾಮಾಣದ ಅಗತ್ಯಗಳೊಂದಿಗೆ ಜೀವನವನ್ನ ನಡೆಸಿ
ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ ಅತಿಯಾಸೆ ಗತಿಗೇಡು ಗಾದೆ ಮಾತು ವಿವರಣೆ ತಿಳಿದಿದೆ ಎಂದು ಭಾವಿಸುತ್ತೇವೆ
ಅತಿಯಾಸೆ ಗತಿಗೇಡು ಗಾದೆ ವಿಸ್ತರಣೆ | Atiyase Gathi Gedu Essay in Kannada