ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ – Manasiddare Marga gade in kannada

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ – ಮನಸ್ಸಿದ್ದರೆ ಮಾರ್ಗ ಗಾದೆ ಇದೊಂದು ಕನ್ನಡ ಜನಪ್ರಿಯ ಗಾದೆಯಾಗಿದೆ. ಜೀವನದ ಹಿರಿತನದ ಅನುಭವವನ್ನು ಗಾದೆ ಮಾತುಗಳಲ್ಲಿ ಹೇಳಿದ್ದಾರೆ, ಈ ಗಾದೆ ಮಾತುಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿವೆ

Manasiddare Marga gade in kannada – ಯಾವುದೇ ಕೆಲಸವನ್ನು ಮಾಡಿದರು ಮೊದಲು ಆಸಕ್ತಿ ಇರಬೇಕು ,ಆಸಕ್ತಿ ಇದ್ದಾಗ ಮಾತ್ರ ಕೆಲಸವನ್ನು ಮಾಡಲು ಹಲವಾರು ಮಾರ್ಗಗಳು ಲಭ್ಯವಾಗುತ್ತವೆ .

ಆಸಕ್ತಿ ಇಂದ ಪ್ರೀತಿಯಿಂದ ಸಮಯದ ಸದುಪಯೋಗ ಪಡಿಸಿಕೊಂಡು ಮಾಡಿದ ಕೆಲಸಗಳು ಮನಸ್ಸಿಗೆ ಹಿತವೆನಿಸುತ್ತವೆ.ದೃಢವಾದ ಮನಸ್ಸಿದ್ದರೆ ಮಾತ್ರ ಯಾವುದೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯ .

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

ಮನಸ್ಸಿದ್ದರೆ ಮಾರ್ಗ ಎಂಬ ಗಾದೆಯನ್ನು ಸಹ ನಾವು ದಿನ ನಿತ್ಯದ ಜೀವನದಲ್ಲಿ ಬಳಸುತ್ತೇವೆ , ಯಾವುದೇ ಕಾರ್ಯವನ್ನು ಮಾಡುವಾಗ ,ಗುರಿ ಸಾಧಿಸುವಾಗ ,ಅಸಾಧ್ಯವಾದುದನ್ನು ಸಾಧ್ಯ ಮಾಡಬಹುದು ಎಂಬುದು ಮನಸ್ಸಿದ್ದರೆ ಮಾರ್ಗ ಗಾದೆ ಮಾತು ಅರ್ಥ.

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಮತ್ತು ನಮ್ಮಲ್ಲಿ ಗುರಿ ಮತ್ತು ಮನಸ್ಸು ಇದ್ದರೆ ಪುಸ್ತಕಗಳ ಕೊರತೆ ಇದ್ದರು ಹೇಗಾದರೂ ಮಾಡಿ ಪುಸ್ತಕಗಳನ್ನು ಒದಗಿಸಿಕೊಂಡು ಪ್ಯಯತ್ನ ಪಡಬಹುದು .

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ಕನ್ನಡ ವಿವರಣೆ

Manasiddare Marga gade in kannada – ಎಲ್ಲ ಸೌಕರ್ಯಗಳನ್ನು ಹೊಂದಿದ್ದು ನಾನು ಮೊದಲ ಸ್ಥಾನ ಬರಬೇಕೆಂದು ಹೇಳುತ್ತಾ ಅದಕ್ಕೆ ಯಾವುದೇ ರೀತಿಯ ಓದುವ ಮತ್ತು ಬರೆಯುವ ಪ್ರಯತ್ನ,ಶ್ರಮ ಪಡದಿದ್ದರೆ ಮೊದಲ ಸ್ಥಾನ ಬರಲು ಸಾಧ್ಯವಿಲ್ಲ .

ಮನಸ್ಸಿದ್ದರೆ ಮಾರ್ಗ ಗಾದೆ ವಿಸ್ತರಣೆ ಹೆಚ್ಚಾಗಿ ಬಳಸುವುದು ಯಾವಾಗೆಂದರೆ ಉದಾಹರಣೆಗೆ, ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ ,ಬುದ್ದಿವಾದ ಹೇಳುವಾಗ, ತಪ್ಪನ್ನು ಎತ್ತಿ ತಿಳಿಹೇಳುವಾಗ ,ವಿಶೇಷ ಗುಣಗಳ ಮಹತ್ವವನ್ನು ವಿವರಿಸುವಾಗ ಗಾದೆಗಳನ್ನು ಹೆಚ್ಚಾಗಿ ಬಳಸುವುದು ವಾಡಿಕೆಯಲ್ಲಿದೆ.

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ಉದಾಹರಣೆಗಳು

  1. ಮನಸ್ಸೊಂದಿದ್ದರೆ ಈ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಧಾರಣ ವ್ಯಕ್ತಿಯಾಗಿದ್ದು ಬಡತನದಲ್ಲೇ ಮೇಲೆ ಬಂದು ವಿಜ್ಞಾನಿಯಾಗಿ ಅಂತೆಯೇ ರಾಷ್ಟ್ರಪತಿಯಾದಂತಹ ದೊಡ್ಡಹುದ್ದೆಗೇರಿದ ಅಬ್ದುಲ್ ಕಲಾಂ ಅವರನ್ನು ನಾವು ಕಾಣಬಹುದಾಗಿದೆ
  2. ಚಾಯವಾಲಾ ಎಂದು ಕರೆಸಿಕೊಳ್ಳುತ್ತಿದ್ದ ಎಲೆಮರೆಯ ಕಾಯಿಯಂತೆ ಬದುಕಿದರು ಇಂದು ‘ಪ್ರಧಾನ ಮಂತ್ರಿ’ಯಾಗಿರುವ ನರೇಂದ್ರ ಮೋದಿ ಯವರು ಸಹ ಛಲ ಬಿಡದೆ ಸಾಧನೆ ಮಾಡಿದ ಪ್ರಸಿದ್ಧ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ
  3. ಒಲಂಪಿಕ್ಸ ನಲ್ಲಿ ಭಾಗವಹಿಸಬೇಕು ಎಂದು ಆಶಾವಾದಿಯಾಗಿದ್ದ’ವಿಲ್ಮರುಡಾಲ್ಪ್ ‘ ಅಪಘಾತವೊಂದರಲ್ಲಿ ತಮ್ಮ ಕಾಲು ಕಳೆದುಕೊಂಡರು ಸಹ ಛಲ ಬಿಡದೆ ಮನಸ್ಸಿಟ್ಟು ಅಭ್ಯಾಸ ಮಾಡಿದದರ ಫಲವಾಗಿ ಅಂಗವಿಕಲರ ಕೋಟಾದಲ್ಲಿ ಚಿನ್ನದ ಪದಕವನ್ನು ಗಳಿಸಿ ಪ್ರಪಂಚಕ್ಕೆ ಹೆಸರುವಾಸಿಯಾದರು .

ಮನಸ್ಸಿದ್ದರೆ ಮಾರ್ಗ meaning in kannada

ಪ್ರೀತಿಯಿಂದ ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ.ಹಾಗಾಗಿ ಮೊದಲು ನಮ್ಮಲ್ಲಿ ಗುರಿ ಇರಬೇಕು ನಂತರ ಗುರಿ ಸಾಧಿಸುತ್ತೇನೆ ಎಂಬ ಛಲ ಇರಬೇಕು ಛಲದಿಂದ , ಆತ್ಮವಿಶ್ವಾಸದಿಂದ ಅಭ್ಯಾಸ ಅಥವಾ ಕೆಲಸದ ಕಡೆಗೆ ಶ್ರಮವಿರಬೇಕು. ನಮ್ಮ ಅಭಿರುಚಿಗೆ ತಕ್ಕಂತೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ,ಆಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ.

ಉತ್ತಮ ಮನಸ್ಸಿನಿಂದ, ಆಸಕ್ತಿಯಿಂದ ಕಲಿತ ವಿಷಯಗಳನ್ನು ಕಡಿಮೆ ಸಮಯದಲ್ಲಿ ಕಲಿಯಬಹುದು ಮತ್ತು ಬಹುಕಾಲದ ವರೆಗೂ ನೆನಪಿನಲ್ಲಿಟ್ಟುಕೊಳ್ಳಬಹುದು.

ಸಾಮರ್ಥ್ಯ ಮತ್ತು ಪ್ರಯತ್ನಗಳು ಜೋಡೆತ್ತಿನಂತೆ ಒಟ್ಟಿಗೆ ಸಾಗಿದರೆ, ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ. ಸಾಮರ್ಥ್ಯದ ಜೊತೆಗೆ ಕೆಲಸ ಮಾಡುವ ಮನಸ್ಸು ಬಹು ಮುಖ್ಯ

ಮನಸ್ಸಿದ್ದರೆ ಮಾರ್ಗ meaning in english

If there is a will, there is a way – It is usually used when a person takes tough decisions in life and he achieves them. this proverb tells us that if we wish to turn things around then we will surely find the means/ way to accomplish it.

ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ ತಿಳಿದಿದೆ ಎಂದು ಭಾವಿಸುತ್ತೇವೆ

ಕನ್ನಡ ಜನಪ್ರಿಯ ಗಾದೆಗಳು ಮತ್ತು ಸಂಕ್ಷಿಪ್ತ ಮಾಹಿತಿ

> ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

> ಅತಿಯಾಸೆ ಗತಿಗೇಡು ಗಾದೆ ಮಾತು

Leave a Comment