Samasagalu In Kannada : ಕನ್ನಡ ವ್ಯಾಕರಣದಲ್ಲಿ ಬರುವಂತರ ಮುಖ್ಯವಾದ ಅಂಶಗಳಲ್ಲಿ ಅಥವಾ ವಿಷಯಗಳಲ್ಲಿ ಸಮಾಸವು ಒಂದು ಮುಖ್ಯವಾದ ವಿಷಯವಾಗಿದೆ ಎಂದು ಹೇಳಬಹುದು .
ಈ ಲೇಖನದಿಂದ ನಾವು ಸಮಾಸಗಳು ಮತ್ತು ಸಮಾಸದ ಎಂಟು ವಿಧಗಳು ಮತ್ತು ಸಮಾಸದಲ್ಲಿ ಕಂಡು ಬರುವ ವಿಭಕ್ತಿ ಪ್ರತ್ಯಗಳ ಬದಲಾವಣೆಗಳನ್ನು ತಿಳಿದುಕೊಳ್ಳಬಹುದು .
ಸಮಾಸ ಎಂದರೇನು ?
ಸಮಾಸ ಎಂದರೆ ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿಕೊಳ್ಳುವಾಗ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯ ಲೋಪವಾಗಿ ಒಂದು ಪದವಾಗುವುದಕ್ಕೆ ಸಮಾಸ ಎನ್ನುವರು .
ಸಮಾಸಗಳು ಉದಾಹರಣೆ 10
ಮಳೆಯ + ಕಾಲ = ಮಳೆಗಾಲ
ಕಾಲಿನ+ ಬಳೆ = ಕಾಲ್ಬಳೆ
ದೇವರ + ಮಂದಿರ = ದೇವಮಂದಿರ
ಹಿರಿದು + ಮರ = ಹೆಮ್ಮರ
ಮಂಗಳ+ ಆರತಿ = ಮಂಗಳಾರತಿ
ಮಾರಾಂತ+ಬಲ = ಮಾರ್ಬಲ
ಪಂಚ + ಸರ= ಪಂಚಸರ
ಅಂಶದಲ್ಲಿ+ತ್ರಿಣೇತ್ರ = ಅಂಶ ತ್ರಿಣೇತ್ರ
ದಳದ+ಮುಖಕ್ಕೆ + ಆದಿತ್ಯ =ದಳಮುಖಾದಿತ್ಯ
ಕೈ +ತಪ್ಪು = ಕೈತಪ್ಪು
ಸಮಾಸಗಳು ವಿಧಗಳು – Samasagalu in kannada
ಸಮಾಸದಲ್ಲಿ ಒಟ್ಟು ೮ ವಿಧಗಳಿವೆ
- ತತ್ಪುರುಷ ಸಮಾಸ
- ಕರ್ಮಧಾರೆಯ ಸಮಾಸ
- ದ್ವಿಗು ಸಮಾಸ
- ಅಂಶಿ ಸಮಾಸ
- ದ್ವಂದ ಸಮಾಸ
- ಬಹುವ್ರಿಹೀ ಸಮಾಸ
- ಕ್ರಿಯಾ ಸಮಾಸ
- ಗಮಕ ಸಮಾಸ
ತತ್ಪುರುಷ ಸಮಾಸ
ತತ್ಪುರುಷ ಸಮಾಸ ಎಂದರೆ ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎನ್ನುವರು. ( ಪೂರ್ವ ಪದದ ತೃತೀಯಾದಿ ವಿಭಕ್ತಿಗಳಿಂದ ಮೊದಲುಗೊಂಡು ಸಪ್ತಮಿ ವಿಭಕ್ತಿಗಳಿಗೆ ಯಾವುದಾದರೂ ವಿಭಕ್ತಿ ಅಂತ್ಯವಾಗಿ ಇರಬಹುದು ).
ತತ್ಪುರುಷ ಸಮಾಸ ಉದಾಹರಣೆ
ಮರದ + ಕಾವಲು = ಮರಗಾವಲು
ಬೆಟ್ಟದ+ ತಾವರೆ = ಬೆಟ್ಟದಾವರೆ
ಹಗಲಿನಲ್ಲಿ + ಕನಸು = ಹಗಲುಗನಸು
ಕಣ್ಣಿನಿಂದ + ಕುರುಡು = ಕಣ್ಣು ಗುರುಡು
ತೆರಿಗೆ + ಮರ = ತೇರುಮರ
ಕವಿಗಳಿಂದ + ವಂದಿತ = ಕವಿವಂದಿತ
ದೇವರೇ + ಮಂದಿರ = ದೇವರಮಂದಿರ
ಉತ್ತಮರಲ್ಲಿ + ಉತ್ತಮ = ಉತ್ತಮೋತ್ತಮ
ವ್ಯಾಘ್ರದ ದೆಸೆಯಿಂದ + ಭಯ =ವ್ಯಾಘ್ರಭಯ
ಕರ್ಮಧಾರೆಯ ಸಮಾಸ
ಕರ್ಮಧಾರೆಯ ಸಮಾಸ ಎಂದರೆ ಪೂರ್ವೋತ್ತರ ಪದಗಳು ಲಿಂಗ ವಚನ ವಿಭಕ್ತಿಗಳಿಂದ ಸಮನಾಗಿದ್ದು ವಿಶೇಷಣ ಸಂಬಂಧದಿಂದ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನುವರು . ಇದರಲ್ಲಿ ಉತ್ತರಪದದ ಅರ್ಥವೇ ಪ್ರಧಾನವಾಗಿರುತ್ತದೆ .
ಕರ್ಮಧಾರೆಯ ಸಮಾಸ ಉದಾಹರಣೆ
ಹಿರಿಯರು + ಮಕ್ಕಳು = ಹಿರಿಯಮಕ್ಕಳು
ಹಿರಿದು + ಜೇನು = ಹೆಜ್ಜೇನು
ಹಿರಿಯ + ಬಾಗಿಲು =ಹೆಬ್ಬಾಗಿಲು
ಹಿರಿದು + ಮರ = ಹೆಮ್ಮರ
ಇರಿದು + ಸರ =ಇಂಚರ
ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ
ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶ
ನೀಲವಾದ + ಉತ್ಪಲ = ನೀಲೋತ್ಪಲ
ಭೂಮಿಯ + ಮಾತೆ = ಭೂಮಾತೆ
ಬೃಹತವಾದ + ವೃಕ್ಷ = ಬೃಹತವೃಕ್ಷ
ದ್ವಿಗು ಸಮಾಸ
ದ್ವಿಗು ಸಮಾಸ ಎಂದರೆ ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರ ನಾಮದೊಡನೆ ಸೇರಿ ಆಗುವ ಸಮಾಸಕ್ಕೆ ದ್ವಿಗು ಸಮಾಸ ಎನ್ನುವರು . ( ಇದು ಕೂಡ ತತ್ಪುರುಷ ಸಮಾಸದ ಒಂದು ಛೇದವೇ ಹೇಳಬಹುದು ).
ದ್ವಿಗು ಸಮಾಸ ಉದಾಹರಣೆ
ಒಂದು +ಕಣ್ಣು =ಒಕ್ಕಣ್ಣು
ಒಂದು + ಕಟ್ಟು = ಒಗ್ಗಟ್ಟು
ಎರಡು + ಮಡಿ =ಇಮ್ಮಡಿ
ಮೂರೂ + ಮಡಿ = ಮುಮ್ಮುಡಿ
ಪಂಚೆಗಳಾದ + ಇಂದ್ರಿಯಗಳು = ಪಂಚೇಂದ್ರಿಯಗಳು
ಸಪ್ತಗಳಾದ + ಲಿಂಗಗಳು =ಪಂಚೇಂದ್ರಿಗಳು
ದಶಗಳಾದ + ಮುಖಗಳು = ದಶಮುಖಗಳು
ಏಕವಾದ + ಅಂಗ = ಏಕಾಂಗ
ಅಂಶಿ ಸಮಾಸ
ಅಂಶಿ ಸಮಾಸ ಎಂದರೆ ಪೂರ್ವೋತ್ತರ ಪದಗಳು ಭಾವ ಸಂಬಂಧಗಳಿಂದ ಸೇರಿ ಪೂರ್ವಪದದ ಅರ್ಥವೂ ಪ್ರಧಾನವಾಗಿವುಳ್ಳ ಸಮಾನಕ್ಕೆ ಅಂಶಿಯ ಸಮಾಸ ಎನ್ನುವರು . ( ಇದನ್ನು ಕೆಲವರು ಅವ್ಯಯ ಭಾವ ಎಂದು ಕರೆಯುವುದುಂಟು ).
ಅಂಶಿ ಸಮಾಸ ಉದಾಹರಣೆ
ತಿಂಗಳಿನ + ಬೆಳಕು = ಬೆಳದಿಂಗಳು
ಬಾಗಿಲ + ಹಿಂದೆ =ಇಂಬಾಗಿಲು
ಅಡುವೆಯ + ನಡುವೆ = ನವ್ವಾಡುವೆ
ಹುಬ್ಬಿನ + ಕೊನೆ= ಕೊನೆಹುಬ್ಬು
ಕೈಯ + ಮುಂದೆ=ಮುಂಗೈ
ದ್ವಂದ ಸಮಾಸ
ದ್ವಂದ ಸಮಾಸ ಎಂದರೆ ಎರಡು ಅಥವಾ ಅನೇಕ ನಾಮಪದಗಳು ಸಂಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ ಸಮಾಸ ಎನ್ನುವರು .
ದ್ವಂದ ಸಮಾಸ ಉದಾಹರಣೆ
ಕೆರೆಯ + ಕಟ್ಟೆಯ + ಭಾವಿಯ = ಕೆರೆ ಕಟ್ಟೆ ಭಾವಿ
ಗಿಡವು + ಮರವು +ಬಳ್ಳಿಯು+ ಪೊದೆಯು=ಗಿಡ ಮರ ಬಳ್ಳಿ ಪೊದೆ
ಆನೆಗಳು+ಒಂಟೆಗಳು + ಕುದುರೆಗಳು =ಆನೇ ಒಂಟೆ ಕುದುರೆ
ಹಿರಿಯ + ವನಯಾ+ ದುರ್ಗವು =ಗಿರಿವನದುರ್ಗವು
ಸೂರ್ಯ+ಚಂದ್ರಮವು +ನಕ್ಷತ್ರವು = ಸೂರ್ಯಚಂದ್ರನಕ್ಷತ್ರ
ಕರಿಯ + ತುರಗಾಮ + ರಥವು = ಕರತುರಗರಥವು
ಇಲ್ಲಿ ದ್ವಂದ ಸಮಾಸವಾದ ಮೇಲೆ ಸಮಸ್ತ ಪದವು ಬಹುವಚನಾಕಿಂತವಾಗಿಯೂ ಏಕವಚನವಾಗಿಯೂ ನಿಲ್ಲುವುದುಂಟು ,ಅದು ಹೇಳುವವರ ಇಚ್ಛೆ ಏಕವಚನವಾಗಿ ನಿಂತರೆ ಸಮೂಹವಾದ ದ್ವಂದ ಸಮಾಸ ಅಥವಾ ದ್ವಂದವೆಂದು , ಬಹುವಚನವಾಗಿ ನಿಂತರೆ ಇತರ ಯೋಗ ದ್ವಂದ ಎಂದು ಹೆಸರು.
ಬಹುವ್ರೀಹಿ ಸಮಾಸ
ಬಹುವ್ರೀಹಿ ಸಮಾಸ ಎಂದರೆ ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥ ಪ್ರಧಾನವುಳ್ಳ ಸಮಾಸಕ್ಕೆ ಬಹುರುವಿ ಸಮಾಸವೆನ್ನುವರು.
ಬಹುವ್ರೀಹಿ ಸಮಾಸ ಉದಾಹರಣೆ
ಮೂರೂ+ಕಣ್ಣು+ಉಳ್ಳವ= ಮುಕ್ಕಣ್ಣ (ಶಿವ)
ನಾಲ್ಕು +ಮುಖ+ ಉಳ್ಳವ= ಸಾಲಮುಖ ( ಬ್ರಹ್ಮ)
ಕೆಂಪಾದ+ಕಣ್ಣು+ ಉಳ್ಳವ= ಕೆಂಗಣ್ಣು (ಶಿವ)
ಪಾಲದಲ್ಲಿ + ನೇತ್ರ + ಉಳ್ಳವನು= ಪಾಲನೇತ್ರ
ಚಕ್ರವು+ ಪಣಿಯಲ್ಲಿ + ಉಳ್ಳವನು= ಚಕ್ರಪಾನಿ
ಮೇಲೆ ಹೇಳಿದ ಎಲ್ಲ ಉದಾಹರಣೆಗಳನ್ನು ನೋಡಿದರೆ ಪೂರ್ವೋತ್ತರ ಪದಗಳೆರಡು ಸಮಾಸ ವಿಭಕ್ತಿಗಳಿಂದ ಕೂಡಿದೆ ಆದರೆ ಒಂದೇ ವಿಭಕ್ತಿ ಅಂತ್ಯವಾಗಿದೆ ಹೀಗೆ ಪೂರ್ವೋತ್ತರ ಪದಗಳು ಸಮಾಸ ಕುಡಿದರೆ ಅವುಗಳನ್ನು ಸಮಾನಾರ್ಥಕರಣ ಬಹುರುವಿ ಸಮಾಸ ಎನ್ನುವರು, ಭಿನ್ನ ಭಿನ್ನ ವಿಭಕ್ತಿಗಳಿಂದ ಕುಡಿದರೆ ಸಮಾಸ ಎನ್ನುವರು.
ಕ್ರಿಯಾ ಸಮಾಸ
ಕ್ರಿಯಾ ಸಮಾಸ ಎಂದರೆ ಪೂರ್ವ ಪದವು ಪ್ರಾಯಶಃ ದ್ವಿಯಾರಿತವಾಗಿದ್ದು ಉತ್ತರದಲ್ಲಿರುವ ಕ್ರಿಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾ ಸಮಾಸ ಎನ್ನುವರು .
ಕ್ರಿಯಾ ಸಮಾಸ ಉದಾಹರಣೆ
ಮೈಯನ್ನು + ತಡವಿ = ಮೈದಡವಿ
ಕೈಯನ್ನು+ಮುಚ್ಚಿ = ಕೈಮುಚ್ಚಿ
ಕಣ್ಣನ್ನು + ಮುಚ್ಚಿ = ಕಣ್ಣಮುಚ್ಚಿ
ಕಣ್ಣನ್ನು + ತೆರೆದನು= ಕಣ್ಣತೆರೆದನು
ಕಾರ್ಯವನ್ನು +ಮಾಡಿದನು = ಕಾರ್ಯಮಾಡಿದನು
ಸತ್ಯವನ್ನು+ ನುಡಿದನು = ಸತ್ಯನುಡಿದನು
ಕಾರ್ಯವನ್ನು+ ಬರೆದನು = ಕಾವ್ಯಬರೆದನು
ಗಮಕ ಸಮಾಸ
ಗಮಕ ಸಮಾಸ ಎಂದರೆ ಪೂರ್ವ ಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು ಉತ್ತರದಲ್ಲಿರುವ ನಾಮಪದದೊಡನೆ ಕುಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎನ್ನುವರು.
ಗಮಕ ಸಮಾಸ ಉದಾಹರಣೆ
ಅವನು+ ಹುಡುಗ = ಆ ಹುಡುಗ
ಅವಳು+ ಹುಡುಗಿ=ಆ ಹುಡುಗಿ
ಅದು + ಕಲ್ಲು = ಆ ಕಲ್ಲು
ಇವನು+ ಗಂಡಸು = ಆ ಗಂಡಸು
ಇದು+ ನಾಯಿ = ಆ ನಾಯಿ
ಮಾಡಿದುದು+ ಅಡಿಗೆ = ಮಾಡಿದಡಿಗೆ
ತಿಂದಿದು+ ಕೂಳು =ತಿಂದಕುಳು
ಅರಳುವುದು +ಮೊಗ್ಗು = ಅರಳುಮೊಗ್ಗು
ಉಡುವುದು+ ದಾರ = ಉಡುದಾರ
ಬೆಂದಿದ್ದು+ ಅಡಿಗೆ= ಬೆಂದಡಿಗೆ
ಮಾಡಿದುದು+ ಕಾರ್ಯ = ಮಾಡಿದಕಾರ್ಯ
ಹೇಳಿದುದು+ ಸತ್ಯ= ಹೇಳಿದಸತ್ಯ
ಕಂಡಿದುದು+ ವಿಚಾರ = ಕಂಡವಿಚಾರ
ನೋಡಿದುದು+ ದೃಶ್ಯ= ನೋಡಿದದೃಶ್ಯ
Samasagalu in kannada
Samasagalu in kannada with examples : ನಿಮಗೆ ನಾವು ನೀಡಿರುವ ಕನ್ನಡದ ಪ್ರಮುಖ ಸಮಾಸಗಳು ಮತ್ತು ಸಮಾಸಗಳು ವಿಧಗಳು, ಸಮಾಸಗಳು ಎಂದರೇನು ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಮತ್ತು ಇನ್ನಿತರ ವ್ಯಾಕರಣ ಸಂಬಂಧ ಪಾಠ ವಿಷಗಳಿಗಾಗಿ ನಮ್ಮ ಪೋಸ್ಟ್ಗಳನ್ನು ವಿಸಿಟ್ ಮಾಡಿ.