Nudigattugalu In Kannada | 100 ನುಡಿಗಟ್ಟುಗಳು

Nudigattugalu in Kannada : ನಮಸ್ಕಾರ ಸ್ನೇಹಿತರೆ, ನುಡಿಗಟ್ಟುಗಳು ವಿಚಾರ ಮತ್ತು ಭಾವನೆಗಳ ಅಭಿವ್ಯಕ್ತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ . ನುಡಿಗಟ್ಟಿನಿಂದ ಭಾಷೆ ಸಮೃದ್ಧವಾಗುತ್ತದೆ. ನಿಮಗಾಗಿ ನಾವು ಕನ್ನಡದ ಪ್ರಮುಖ 100 ನುಡಿಗಟ್ಟುಗಳು ಉದಾಹರಣೆ ಪಟ್ಟಿ ಮಾಡಿದ್ದೇವೆ.

ನುಡಿಗಟ್ಟುಗಳು ಎಂದರೇನು – ಭಾಷೆಗೆ ವಿಶೇಷ ಅರ್ಥವನ್ನು ಕೊಡುವ, ಅರ್ಥವ್ಯಾಪ್ತಿಯನ್ನು ವಿಸ್ತರಿಸುವ ವಿಶೇಷ ಬಗೆಯ ಪದ ಸಮುಚ್ಚಯಗಳು ಬಳಕೆಯಲ್ಲಿವೆ. ಅವುಗಳನ್ನು ನುಡಿಗಟ್ಟುಗಳು ಕನ್ನಡ ಅಥವಾ ಪಡನುಡಿಗಳು ಎಂದು ಕರೆಯುತ್ತಾರೆ.

100 ನುಡಿಗಟ್ಟುಗಳು ಕನ್ನಡದಲ್ಲಿ

1) ಪ್ರಪಂಚ ಕಾಣದವ – ಅನುಭವವಿಲ್ಲದವ
2) ಪ್ರಾಣ ಹಿಂಡು – ಬಹಳ ಪೀಡಿಸು
3) ಬಣ್ಣಕಟ್ಟು – ಇಲ್ಲದಿರುವುದನ್ನು ಸೇರಿಸು
4) ಬಣ್ಣ ಬಯಲಿಗೆ ಬರು – ರಹಸ್ಯ ಬಯಲಾಗು
5) ಬಾಲೆಗೆ ಬೀಳು – ವಶಕ್ಕೆ ಸಿಕ್ಕು
6) ಬಾಲ ಕತ್ತರಿಸು – ಸೊಕ್ಕು ಮುರಿ
7) ಬಿಸಿ ಬಿಸಿ ಸುದ್ದಿ – ಆಗ ತಾನೇ ಪ್ರಕಟವಾದ ಸುದ್ದಿ
8) ಬಣ್ಣ ಹೆಚ್ಚು- ನಯವಾಗಿ ಮಾತಾಡು
9) ಬೆನ್ನು ತಟ್ಟು – ಪ್ರೋತ್ಸಾಹಿಸು
10) ಮಣ್ಣು ಪಳಗು – ಹಾಳಾಗು
11) ಮಿನಾ ಮೇಷ ಎಣಿಸು – ಹಿಂದೆ ಮುಂದೆ ನೋಡು
12) ಮೂರೂ ಕಾಸಿನವ – ಮರ್ಯಾದೆಯಿಲ್ಲದವ
13) ಮೆಲಕು ಹಾಕು – ಹಳೆಯದನ್ನು ನೆನಪಿಸಿಕೋ
14) ರೈಲು ಬಿಡು- ಸುಳ್ಳು ಹೇಳು
15) ಸಿಗಿದು ತೋರಣ ಕಟ್ಟು- ಉಗ್ರವಾಗಿ ಶಿಕ್ಷಿಸುವುದು
16) ಹದ್ದಿನ ಕಣ್ಣು – ತೀಕ್ಷ್ಣ ಕಣ್ಣು
17) ಹಳ್ಳಕ್ಕೆ ಬೀಳು – ಮೋಸಹೋಗು
18) ಅಜ್ಜಿ ಕಥೆ – ಬಹಳ ಪುರಾತನ ಕತೆ
19) ಎರಡು ನಾಲಿಗೆಯವ- ಮಾತು ಬದಲಿಸುವವ
20) ಉಭಯ ಸಂಕಟ – ಸಂಧಿಗ್ದ ಪರಿಸ್ಥಿತಿ

21) ಭೂಮಿಗೆ ಭಾರ – ನಿಷ್ಪ್ರಯೋಜಕ
22) ಮಂಗಳ ಹಾಡು – ಮುಕ್ತಾಯ
23) ಭೂಮಿ ತೂಕದ ಮನುಷ್ಯ – ತಾಳ್ಮೆಯ ಮನುಷ್ಯ
24) ಬುಸುಗುಟ್ಟು – ಕೋಪಗೊಳ್ಳು
25) ಮಂಗಮಾಯ – ಇದ್ದಕಿದ್ದಂತೆ ಇಲ್ಲವಾಗುವುದು

Nudigattugalu in Kannada Language Examples

26) ಅಜಗಜಾಂತರ – ಭಾರಿ ವ್ಯತ್ಯಾಸ
27) ಕತ್ತಿ ಮಸೆ – ದ್ವೇಷ ಸಾಧಿಸು
28) ಹೊಂಚು ಹಾಕು – ಸಮಯ ಸಾಧಿಸು
29) ರೆಕ್ಕೆಪುಕ್ಕ ಕಳೆದುಕೊ – ಶಕ್ತಿಯನ್ನು ಕಳೆದುಕೊ
30) ಹಾಸಿಗೆ ಹಿಡಿ – ಕಾಯಿಲೆ ಬೀಳುವುದು
31) ಎದೆಯ ಮೇಲೆ ಭಾರ ಇಳಿ – ಹೊಣೆಗಾರಿಕೆ ಕಡಿಮೆಯಾಗು
32) ಎದೆ ಭಾರವಾಗು – ದುಃಖವಾಗು
33) ಎತ್ತಂಗಡಿಯಾಗು- ವರ್ಗವಾಗು
34) ಎತ್ತಿದ ಕೈ- ಪ್ರವೀಣ
35) ಉಪ್ಪುಖಾರ ಹೆಚ್ಚು – ಇಲ್ಲದನ್ನು ಸೇರಿಸು
36) ಎದೆ ತುಂಬಿಬರು – ಭಾವೋದ್ವೇಗಉಂಟಾಗು
37) ಎಂಜಲು ಕೈಯಲ್ಲಿ ಕಾಗೆ ಓಡಿಸಿದವ – ಜಿಪುಣ
38) ಅಗ್ನಿಪರೀಕ್ಷೆ – ಕಠಿಣವಾದ ಪರೀಕ್ಷೆ
39) ಕೈ ಮಿರು- ನಿಯಂತ್ರಣ ತಪ್ಪು
40) ಕೋಳಿ ನಿದ್ದೆ- ಸ್ವಲ್ಪ ನಿದ್ದೆ

41) ಅರೆದು ಕುಡಿಸು – ಚೆನ್ನಾಗಿ ತಿಳಿಯುವಂತೆ ಹೇಳಿಕೊಡು
42) ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ – ಬಹಳ ಅಪರೂಪವಾಗಿ
43) ಅಬ್ಬೇಪಾರಿ – ಜವಾಬ್ದಾರಿ ಇಲ್ಲದವ
44) ಮೂಗು ತೂರಿಸು- ಎಲ್ಲ ವಿಚಾರಕ್ಕೂ ತಲೆ ಹಾಕು
45) ಮುಳುಗಿ ಹೋಗು – ಎಲ್ಲವನ್ನು ಕಳೆದುಕೊಳ್ಳುವುದು

50 ನುಡಿಗಟ್ಟುಗಳು in Kannada

46) ಗುಂಡಿಗೆ ತಳ್ಳು – ನಂಬಿಸಿ ಮೋಸ ಮಾಡು
47) ಚಳ್ಳೆ ಹಣ್ಣು ತಿನ್ನಿಸು – ತಕ್ಕ ಪಾಠ ಕಲೀಸು
48) ಬೆವರು ಸುರಿಸು – ಕಷ್ಟಪಡು
49) ಮಂಗಳಾರತಿ ಎತ್ತು – ಅವಮಾನ ಮಾಡು
50) ಹಿತ್ತಾಳೆ – ಚಾಡಿ ಮಾತು ಕೇಳುವ ಸ್ವಭಾವ
51) ಹೊಟ್ಟೆಗೆ ಹಾಕಿಕೋ – ಕ್ಷಮಿಸು
52) ಹೊಟ್ಟೆ ತಣ್ಣಗಾಗು – ತೃಪ್ತಿಯಾಗು
53) ಹಾಲು ತುಪ್ಪದಲ್ಲಿ ಕೈ ತೊಳೆ – ಸಮೃದ್ಧ ಜೀವನ
54) ಮನೆ ಬೆಳಗಿಸು – ಉದ್ದಾರ ಮಾಡು
55) ಮುಖಕ್ಕೆ ಮಸಿ ಹಚ್ಚು – ಕಳಂಕ ತರು
56) ಮೈ ಚಳಿ ಬಿಡು – ಸಂಕೋಚ ಬಿಡು
57) ಬೆನ್ನು ಹತ್ತು – ಹಿಂಬಾಲಿಸು
58) ಬಿಳಿ ಮಜ್ಜಿಗೆ – ಹೆಂಡ
59) ಗಂಟಲು ದೊಡ್ಡದು ಮಾಡು – ಗಟ್ಟಿಯಾಗಿ ಕೂಗಿ ಮಾತಾಡು
60) ಗಂಟುಕಟ್ಟು – ಹೋರಾಡಲು ಸಿದ್ಧವಾಗು

61) ಗತಿ ಕಾಣಿಸು – ಮುಗಿಸು
62) ಗಾಯದ ಮೇಲೆ ಬರೆ ಎಳೆ – ಕಷ್ಟದ ಮೇಲೆ ಕಷ್ಟ ಕೊಡು
63) ಗಾಳಿಗೆ ತೂರಿಬಿಡು – ನಿರ್ಲಕ್ಷಿಸು
64) ಗಾಳಿ ಸಮಾಚಾರ – ಖಚಿತವಲ್ಲದ ವಾರ್ತೆ
65) ಗುಡ್ಡವನ್ನು ಬೆಟ್ಟ ಮಾಡು – ಸಣ್ಣದನ್ನು ದೊಡ್ಡದು ಮಾಡಿ ಹೇಳು
66) ಚಕಾರವೆತ್ತು- ಆಕ್ಷೇಪಣೆ ಮಾಡು
67) ಚಳ್ಳೆಹಣ್ಣು ತಿನ್ನುಸು – ಕಷ್ಟಕೊಡು
68) ಜನ್ಮ ಜಾಲಾಡು – ಚೆನ್ನಾಗಿ ಬಯ್ಯು
69) ಜೇಬಿಗೆ ತೂತು ಬೀಳು – ಹಣ ಖರ್ಚಾಗು
70) ಟೋಪಿ ಹಾಕು – ಮೋಸ ಮಾಡು

10 ನುಡಿಗಟ್ಟುಗಳು – Nudigattugalu in kannada

71) ಡಂಗುರ ಹೋಡೆ – ಘೋಷಿಸು
72) ತಣ್ಣೀರೆರಚು – ಉತ್ಸಾಹ ಭಂಗ ಮಾಡು
73) ತನ್ನ ಕಾಲು ಮೇಲೆ ತಾನು ನಿಲ್ಲು – ಸ್ವಾವಲಂಬಿಯಾಗು
74) ತಲೆ ಎತ್ತಿ ತಿರುಗು – ಮರ್ಯಾದೆಯಿಂದ ಬಾಳು
75) ತಲೆ ಓಡದಿರು – ಏನು ತೋಚದಿರು
76) ತಲೆ ಕೆರೆ- ಚಿಂತಿಸು
77) ತಲೆ ಕೊಡು – ಭಾಗವಹಿಸು
78) ತಲೆಗೆ ಹಚ್ಚಿಕೋ – ಬಹಳವಾಗಿ ಚಿಂತಿಸು
79) ತಲೆ ತಿನ್ನು – ಕಾಡು
80) ತಲೆ ತೊಳೆದುಕೊ – ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊ

ನುಡಿಗಟ್ಟುಗಳು ಉದಾಹರಣೆ

81) ತಲೆದೂಗು – ಮೆಚ್ಚುಗೆ ವ್ಯಕ್ತ ಪಡಿಸು
82) ತಲೆ ಬಿಸಿಯಾಗು – ಕೋಪ
83) ತಲೆ ಮೇಲೆ ಕಲ್ಲು ಹಾಕು – ತೊಂದರೆಯನ್ನುಂಟು ಮಾಡು
84) ತಲೆ ಮೇಲೆ ಕುರಿಸಿಕೋ – ತುಂಬ ಸಲಿಗೆ ಕೊಡು
85) ತಲೆಯ ಮೇಲೆ ಕೈ ಇಟ್ಟು ಕೂರುವುದು – ಏನು ತೋಚದಿರು
86) ತಲೆಯಾಡಿಸು – ಸಮ್ಮತಿ ಸೂಚಿಸು
87) ತಾಳಕ್ಕೆ ಸರಿಯಾಗಿ ಹೆಜ್ಜೆಹಾಕು – ಹೇಳಿದಂತೆ ಕೇಳು
88) ತಾಳ ಮೇಳವಿಲ್ಲದಿರುವುದು – ಹೊಂದಾಣಿಕೆಯಿಲ್ಲದಿರು
89) ತಿಂದು ತೇಗು – ಬರಿದು ಮಾಡು
90) ತಿಪ್ಪರಲಾಗ ಹಾಕು – ಶಕ್ತಿ ಮೀರಿ ಯತ್ನಿಸು

91) ತಿರುಕನ ಕನಸು – ನನಸಾಗದ ಇಚ್ಛೆ
92) ತಿರುಗಿ ಬೀಳು – ವಿರೋಧಿಸು
93) ತೊಡೆ ತಟ್ಟಿ ನಿಲ್ಲು – ಜಗಳಕ್ಕೆ ನಿಲ್ಲು
94) ದಡ ಕಾಣಿಸು – ಸಮಸ್ಯೆ ಬಗೆಹರಿಸು
95) ಧೂಳಿಪಟ ಮಾಡು – ನಾಶ ಮಾಡು
96) ದಿನ ಎಣಿಸು – ಸಾವನ್ನು ಎದುರು ನೋಡು
97) ನಡು ನೀರಲ್ಲಿ ಕೈ ಬಿಡು – ಅರ್ಧದಲ್ಲೇ ಸಂಚಾರ ನಿಲ್ಲಿಸು
98) ನಾಲಿಗೆ ಉದ್ದಮಾಡು – ಅತಿಯಾಗಿ ಮಾತಾಡು
99) ನುಂಗಿ ನೀರು ಕುಡಿ – ನಾಶ ಮಾಡು
100) ನುಣ್ಣಗೆ ಮಾಡು – ಸಂಪೂರ್ಣವಾಗಿ ಹಾಳು ಮಾಡು

ಕನ್ನಡ ನುಡಿಗಟ್ಟುಗಳು pdf

Nudigattugalu in kannada Language examples : ಕನ್ನಡದ ಪ್ರಮುಖ ನುಡಿಗಟ್ಟುಗಳು, ಜನರು ಹೆಚ್ಚಾಗಿ ಬಳಸುವ 100 ನುಡಿಗಟ್ಟುಗಳು ಉದಾಹರಣೆ ನೀಡಲಾಗಿದೆ

ನಿಮಗೆ ನಾವು ನೀಡಿರುವ 100 ನುಡಿಗಟ್ಟುಗಳು ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ.

Leave a Comment