ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ : ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತು ಪ್ರಸಿದ್ಧವಾಗಿದೆ. ಈ ಮಾತಿನಿಂದ ಜನರು ಗಾದೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು, ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳು ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನವುಗೊಳಿಸುತ್ತವೆ. ಇಂತಹ ಗಾದೆಮಾತುಗಳಲ್ಲಿ ” ತಾಳಿದವನು ಬಾಳಿಯಾನು” ,“Talidavanu Baliyanu gade in kannada” ಎಂಬ ಗಾದೆ ಮಾತು ಕೂಡ ಒಂದಾಗಿದೆ .
ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ
ತಾಳಿದವನು ಬಾಳಿಯಾನು ಗಾದೆಯ ಅರ್ಥ ತಾಳಿದವನು ಎಂದರೆ ತಾಳ್ಮೆಯಿಂದ ವರ್ತಿಸುವವನು ಎಂದರ್ಥ ತಾಳ್ಮೆ ಅಥವಾ ಸಹನೆಯಿಂದ ಜೀವನ ನಡೆಸುವವನಿಗೆ ಜೀವನವು ಕಷ್ಟವೆನಿಸುವುದಿಲ್ಲ. ತಾಳ್ಮೆ ತೋರುವುದರಿಂದ ಒಳಿತಾಗುತ್ತದೆ, ಬದುಕು ಸುಂದರವಾಗುತ್ತದೆ, ಎಂಬುದು ಅವನಿಗೆ ಗೊತ್ತಿರುತ್ತದೆ . ಯಾವುದೇ ಕಷ್ಟ ಬಂದರೂ ಅವನು ಅದನ್ನು ತಾಳ್ಮೆಯಿಂದ ಎದುರಿಸುತ್ತಾನೆ ಸುಖ ನೆಮ್ಮದಿಯಿಂದ ಜೀವನ ಸಾಗಿಸುತ್ತಾನೆ.
“ತಾಳಿದವನು ಬಾಳಿಯಾನು ” ಇದು ಕನ್ನಡ ಜನಪ್ರಿಯ ಗಾದೆ ಮಾತಾಗಿದೆ , ಅತಿಯಾಗಿ ಕೋಪ ಮಾಡಿಕೊಳ್ಳದೆ ಸಮಾಧಾನದಿಂದ ಇರಬೇಕು. ಕೋಪ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ತಿಳಿಸುತ್ತದೆ.
” ಕೋಪಂ ಅನರ್ಥ ಸಾಧನಂ ” ,”ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೆ“ಎಂಬ ಮಾತಿನಂತೆ ಕೋಪವು ಕೆಡುಕನ್ನು ಉಂಟು ಮಾಡುತ್ತದೆ. ಕ್ಷಣಕಾಲದ ಕೋಪದ ಕೈಯಾಗೆ ಬುದ್ದಿ ಕೊಟ್ಟರೆ ಅದು ನಮ್ಮನ್ನು ಮಾತ್ರವಲ್ಲದೆ ಅದಕ್ಕೆ ಗುರಿಯಾದವರನ್ನು ಅಪಾಯಕ್ಕೆ ನೂಕುತ್ತದೆ.
Talidavanu Baliyanu gade in kannada
ಕನಕದಾಸರು “ತಾಳುವಿಕೆಗಿಂತ ತಾಪವು ಇಲ್ಲ “ಎಂದಿದ್ದಾರೆ . ಕೂಡಲೇ ಫಲ ಬಿಡಬೇಕು ಎಂದರೆ ಸಾಧ್ಯವಿಲ್ಲ. ಪ್ರತಿಯೊಂದು ಸಾಧನೆಯಲ್ಲೂ ತಾಳ್ಮೆ ಬೇಕು, ತಾಳ್ಮೆ ಎಂದರೆ ಆಮೆಗತಿಯಲ್ಲಿ ಸಾಗುವುದು ಎಂದರ್ಥವಲ್ಲ, ಯಾವ ಸಾಧನೆಗೆ ಎಷ್ಟು ಸಮಯ ಮತ್ತು ಪ್ರಯತ್ನಗಳು ಬೇಕೋ ಅದನ್ನು ಪೂರ್ಣತೆಯಿಂದ ಮಾಡಲು ಬೇಕಾಗುವ ಶಕ್ತಿಯೇ ತಾಳ್ಮೆ . ತಾಳ್ಮೆಯಿಂದ ಪಡೆದದ್ದು ದೀರ್ಘಕಾಲ ಉಳಿಯುತ್ತದೆ.
ತಾಳಿದವನು ಬಾಳಿಯಾನು ಗಾದೆ ಮಾತು ಉದಾಹರಣೆ
- ಭಗವದ್ಗೀತೆಯಲ್ಲಿ ಅರ್ಜುನನವು ಶ್ರೀಕೃಷ್ಣನಿಗೆ ನೀನು ಹೇಳಿದಂತೆ ಯೋಗವನ್ನು ಸಿದ್ದಿ ಮಾಡಿಕೊಳ್ಳುವುದು ಕಷ್ಟ ಸಾಧ್ಯಹ ಎಂದಾಗ ಶ್ರೀಕೃಷ್ಣ” ಅಭ್ಯಾಸೇನ ತು ಕೌಂತೇಯ ಪ್ರಯತ್ನ೦ ಚ ಪರಂತಪ ” ಎನ್ನುತ್ತಾನೆ . ಅಂದರೆ ಸತತ ಪ್ರಯತ್ನದಿಂದ (ತಾಳ್ಮೆಯಿಂದ) ಎಲ್ಲವೂ ಸಾಧ್ಯ.
- ವಿಧ್ಯಾರ್ಥಿಯಾದವನು ತನ್ನ ಓದಿನಲ್ಲಿ ಅರ್ಥವಾಗದ ವಿಷಯವನ್ನು ತಾಳ್ಮೆಯಿಂದ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿದರೆ ಅದರಲ್ಲಿ ಆತ ಯಶಸ್ವಿಯಾಗುತ್ತಾನೆ. ವಂದೇ ಬಾರಿಗೆ ಅರ್ಥವಾಗಲಿಲ್ಲ ಎಂಬ ಕಾರಣಕ್ಕೆ ತಾಳ್ಮೆಗೆಟ್ಟು ಪುಸ್ತಕದ ಬಗ್ಗೆ ಬೇಸರ ಪಟ್ಟರೆ ಆತನ ವಿದ್ಯಾಭ್ಯಾಸ ಹಾಳಾಗುವುದು. ಆದ್ದರಿಂದ ತಾಳ್ಮೆ ಬಹುಮುಖ್ಯ.
- ಕುಂಬಾರನು ಹಲವು ದಿನಗಳು ಶ್ರಮ ಪಟ್ಟು ತಯಾರಿಸಿದ ಮಡಕೆಯನ್ನು ಒಂದು ದೊಣ್ಣೆಯಿಂದ ನಾಶ ಮಾಡಿದಂತೆ, ಕ್ಷಣಿಕ ಕೋಪವು ಅನಾಹುತವನ್ನು ಉಂಟುಮಾಡುತ್ತದೆ. ಆದ್ದರಿಂದ ತಲ್ಮೆ ಇರಬೇಕು ಕೋಪದ ಕೈಗೆ ಬುದ್ದಿ ಕೊಡಬಾರದು.
ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ ತಿಳಿದಿದೆ ಎಂದು ಭಾವಿಸುತ್ತೇವೆ
ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidavanu Baliyanu gade in Kannada
It is good and helpfull