kai kesaradare bai mosaru in kannada – ಕೈ ಕೆಸರಾದರೆ ಬಾಯಿ ಮೊಸರು ಇದೊಂದು ಸುಪ್ರಸಿದ್ಧ ಗಾದೆಯಾಗಿದೆ. ಹಿರಿಯರು ಅನುಭವಗಳಿಂದ ನುಡಿದ ನುಡಿಮುತ್ತುಗಳಾಗಿವೆ
ಗಾದೆಗಳು ಜೀವನದಲ್ಲಿ ನಾವು ಸರಿಯಾದ ಮಾರ್ಗದಲ್ಲಿನಡೆಯಲು ಇವೂ ಸೂಚಿಗಳಾಗಿವೆ. ಗಾದೆ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು.
ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ ಜಾಣನುಡಿ ಎಂದು ಹೇಳಬಹುದು, ಗಾದೆ ಮಾತಿನಲ್ಲಿ ತಿಳುವಳಿಕೆ ಇದೆ ,ನೀತಿ ಇದೆ, ನಗೆಚಾಟಿಕೆ ಇದೆ ಒಳಿತು ಕೆಡಕುಗಳ ಸೂಕ್ಷ್ಮತೆಗಳಿವೆ . ಹೀಗಾಗಿ “ವೇದ ಸುಳ್ಳಾದರು ಗಾದೆ ಸುಳ್ಳಾಗದು” ಎಂದು ಹೇಳುತ್ತಾರೆ.
kai kesaradare bai mosaru
kai kesaradare bai mosaru meaning in kannada – “ಕೈ ಕೆಸರಾದರೆ ಬಾಯಿ ಮೊಸರು “ಎಂದಾಗ ಕೈಯನ್ನು ಕೆಸರಲ್ಲಿ ಅಡ್ಡಿ ತೆಗೆದಾಗ ಬಾಯಲ್ಲಿ ತನಗೆ ತಾನೇ ಮೊಸರಾಗುತ್ತದೆ ಎಂಬುದು ಶಾಬ್ಧಿಕ ಅರ್ಥವಾದರೂ ಅದರ ಭಾವಾರ್ಥ ಬೇರೆಯೇ ಇದೆ
‘ಕೈ ಕೆಸರಾಗುವುದು‘ ಅಂದರೆ ಕಷ್ಟ ಪಟ್ಟು ದುಡಿಯುವುದು
‘ಬಾಯಿ ಮೊಸರು ‘ ಅಂದರೆ ಹೊಟ್ಟೆತುಂಬಾ ಸವಿಯಾದ ಊಟ ಮಾಡುವುದೆಂದು ಇದರ ಅರ್ಥ.
ಕಷ್ಟ ಪಡುವುದರಿಂದ ಸುಖ ಸಿಗುತ್ತದೆ ಎಂಬುದನ್ನು ಈ ಗಾದೆ ಅರ್ಥೈಸುತ್ತೇವೆ ಇದು ಹಿರಿಯರು ನಮಗೆ ತಿಳಿಸಿ ಕೊಟ್ಟಿರುವ ನೀತಿ ಸಂದೇಶವೂ ಆಗಿದೆ.
ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ
ಸೋಮಾರಿಯಾಗಿ ಸುಮ್ಮನೆ ಕುಳಿತಿರಬಾರದು ಯಾವುದಾದರೂ ಒಂದು ಕೆಲಸ ಮಾಡುವುದರಿಂದ ನಮ್ಮ ಹೊಟ್ಟೆ ತುಂಬುತ್ತದೆ, ಕೈ ಕೆಸರಾಗುತ್ತದೆ ಅಂದರೆ ಕಷ್ಟ ವಾಗುತ್ತದೆ ಎಂದು ತಿಳಿದು ಕೈ ಕಟ್ಟಿ ಕೂಡುವದನ್ನು ಬಿಟ್ಟು ಯಾವ ಕೆಲಸವಾದರೂ ಸರಿ ಶ್ರಮವಹಿಸಿ ದುಡಿದಾಗಲೇ ನಮಗೆ ಒಳ್ಳೆಯ ಫಲ ಸಿಗುತ್ತದೆ ಎಂಬ ಅರ್ಥ ಇದರಲ್ಲಿ ಅಡಗಿದೆ.
ಈಗಿನ ಕಾಲದ ಮಕ್ಕಳು ಹಾಗು ದೊಡ್ಡವರು ಕೂಡ ಜೂಜು ಅಥವಾ ಕಳ್ಳತನದ ಇನ್ನಿತರ ಅನೈತಿಕ ಜಾಲಕ್ಕೆ ಬಲಿಯಾಗುತ್ತಿದ್ದಾರೆ
ಅನೈತಿಕ ಜಾಲವನ್ನು ಬಿಟ್ಟು ಓದಿ ವಿದ್ಯಾಭ್ಯಾಶ ಪಡೆದುಕೊಂಡು ನೈತಿಕ ಉದ್ಯೋಗಗಳನ್ನು ತೆಗೆದುಕೊಳ್ಳಬೇಕೆಂದು
ಹಿರಿಯರು ನಂಬಿದ್ದರು. ಹೀಗಾಗಿ ಅವರು ಈ ಕನ್ನಡ ಜನಪ್ರಿಯ ಗಾದೆಗಳು ಒಳ್ಳೆಯ ಕಾರ್ಯಗಳನ್ನು ಉತ್ತೇಜಿಸುವ ಸಾಧನವಾಗಿ ಬಳಸಿದರು.
ನೀವು ಸರಿಯಾದ ರೀತಿಯಲ್ಲಿ ಜೀವನವನ್ನು ಗಳಿಸಿದಾಗ ನೀವು ಪಡೆಯುವ ಸೌಕರ್ಯವು ನಿಜವಾಗಿಯೂ
ಶಾಂತಿಯುತವಾಗುತ್ತದೆ.
ನಿಮಗೆ ಕೆಳಗಿನವು ಕೂಡ ತಿಳಿದಿರಲಿ – ಓದಿ |
Parisara Samrakshane Essay in Kannada – ಪರಿಸರ ಸಂರಕ್ಷಣೆ ಪ್ರಬಂಧ |
Kannada Sandhigalu – ಕನ್ನಡ ಸಂಧಿಗಳು ಮತ್ತು ವಿವರಣೆ |
RSS – ರಾಷ್ಟೀಯ ಸ್ವಯಂಸೇವಕ ಸಂಘ ಬಗ್ಗೆ |
kai kesaradare bai mosaru story in kannada
ನಾವು ಯಾವುದೇ ಕೆಲಸ ಫಲ ಕೊಡಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೇಗೆ ಒಬ್ಬ ಶಿಲ್ಪಿ ತನ್ನ ಪರಿಶ್ರಮದಿಂದ ಒಂದು ಬಂಡೆಗಲ್ಲನ್ನು ಕೆತ್ತಿ ಸುಂದರ ಶಿಲ್ಪ ಕಲಾಕೃತಿಯನ್ನಾಗಿ ಮಾಡುವನೋ ಹಾಗೆಯೇ ನಮ್ಮ ಕೆಲಸವನ್ನು ಗಮನವಿಟ್ಟು ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು.
ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯಿಸುತ್ತದೆ. ಶಿಕ್ಷಕರು ಮಾಡಿದ ಪಾಠಗಳನ್ನು ಗಮನ ಇಟ್ಟು ಓದಿದರೆ ಒಂದು ಒಳ್ಳೆಯ ಗುರಿ ಸಾಧಿಸಬಹುದು. ಆಲಸಿಗಳಾಗದೆ ಶ್ರಮದಿಂದ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡರೆ
ಗಮನೀಯ ಸಾಧನೆಗೆ ನಾಂದಿಯಾಗುತ್ತದೆ. ಜೊತೆಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ
ನಿಮಗೆ ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದೆ ಮತ್ತು ನಿಮಗೆ ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ ತಿಳಿದಿದೆ ಎಂದು ಭಾವಿಸುತ್ತೇವೆ
,ಒಳ್ಳೆಯ ವಿಷಯ
ಹೊಸದಾದ ಅಂಶ
It’s very good ☺️ ☺️😌👌👌🆗👌👌