Gade Matugalu in Kannada | 100 ಗಾದೆ ಮಾತುಗಳು

Gade Matugalu in Kannada : ನಮಸ್ಕಾರ ಸ್ನೇಹಿತರೆ, ಗಾದೆಗಳು ಜೀವನದಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನ ಮತ್ತು ಸೂಚಿಗಳಾಗಿವೆ. ಗಾದೆ ಎನ್ನುವುದು ಹೇಳಿಕೆಯ ರೂಪದಲ್ಲಿ ದಿನಬಳಕೆಯಾಗುವ ಮಾತುಗಳು. ನಿಮಗಾಗಿ ನಾವು ಕನ್ನಡದ ಜನಪ್ರಿಯ 100 ಗಾದೆ ಮಾತುಗಳು ಪಟ್ಟಿ ಮಾಡಿದ್ದೇವೆ.

ಗಾದೆಗಳು ವೇದಗಳಿಗೆ ಸಮಾನ ಎನ್ನುವ ನಂಬಿಕೆ ಇದೆ . ಹಾಗೆ, ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತು ಪ್ರಸಿದ್ಧವಾಗಿದೆ. ಈ ಮಾತಿನಿಂದ ಜನರು ಕನ್ನಡ ಜನಪ್ರಿಯ ಗಾದೆಗಳು ಮತ್ತು ಅವುಗಳ ಮಹತ್ವವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು, ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು.

100 ಗಾದೆ ಮಾತುಗಳು ಕನ್ನಡದಲ್ಲಿ

1) ತಾಯಿಯಂತೆ ಮಗಳು ನೂಲಿನಂತೆ ಸೀರೆ.
2) ಮಾತು ಬೆಳ್ಳಿ ,ಮೌನ ಬಂಗಾರ.
3) ಕೈ ಕೆಸರಾದರೆ ಬಾಯಿ ಮೊಸರು .
4) ಬೆಳ್ಳಗಿದ್ದಿದ್ದೆಲ್ಲ ಹಾಲಲ್ಲ.
5)ತಾಳಿದವನು ಬಾಳಿಯಾನು.
6) ಮನಸ್ಸಿದ್ದರೆ ಮಾರ್ಗ.
7) ವೇದ ಸುಳ್ಳಾದರು ಗಾದೆ ಸುಳ್ಳಾಗದು.
8) ಹಾಸಿಗೆ ಇದ್ದಷ್ಟು ಕಾಲು ಚಾಚು.
9) ಅಲ್ಪರ ಸಂಘ ಅಭಿಮಾನ ಭಂಗ.
10) ಮಾಡಿದವರ ಪಾಪ ಆಡಿದವರ ಬಾಯಲ್ಲಿ.


11) ಗಾಳಿ ಬಂದಾಗ ತೂರಿಕೋ
12) ದುಡ್ಡೇ ದೊಡ್ಡಪ್ಪ.
13) ಜಾಣನಿಗೆ ಮಾತಿಗೇ ಪೆಟ್ಟು,ದಡ್ಡನಿಗೆ ದೊಣ್ಣೆ ಪೆಟ್ಟು.
14) ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
15) ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ?
16) ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಯಾಕೆ.
17) ಮನೆಗೆ ಮಾರಿ, ಊರಿಗೆ ಉಪಕಾರಿ.
18) ಹುಣಸೆ ಮುಪ್ಪಾದರೂ ಹುಳಿ ಮುಪ್ಪೇ?
19) ಎಲ್ಲರ ಮನೆ ದೋಸೇನೂ ತೂತೆ .
20) ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು.


21)ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
22) ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
23)ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
24)ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಕೊಂಡು ನೋಡಿಕೊಂಡ
25)ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ.

ಸಣ್ಣ ಗಾದೆ ಮಾತುಗಳು in Kannada


26)ದುಡಿಮೆಯೇ ದೇವರು
27)ನಾಯಿ ಬೊಗಳಿದರೆ ನಾಗಲೋಕ ಹಾಳೆ.
28)ನಾಳೆ ಎಂಬುವನ ಮನೆ ಹಾಲು .
29)ತಿರುಕನ ಕನಸು ನಿಜ ಅಲ್ಲ.
30)ಹೆತ್ತಮ್ಮಗೆ ಹೆಗ್ಗಣ ಮುದ್ದು.
31)ಅಯ್ಯ ಸತ್ತರೆ ಅಮಾವಾಸ್ಯೆ ನಿಲ್ಲದು.
32)ಮಾಡಿದ್ದುಣ್ಣೋ ಮಾರಾಯ.
33)ಕುಣಿಯಲು ಬಾರದವಳು ನೆಲ ಡೋಂಕೆಂದಳು.
34)ಓದು ಒಕ್ಕಲು ,ಬುದ್ದಿ ಮುಕ್ಕಾಲು.
35)ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ.


36)ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು.
37)ವಿದ್ಯೆಗೆ ವಿನಯವೇ ಭೂಷಣ.
38)ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು.
39)ದುಡಿತವೇ ದುಡ್ಡಿನ ತಾಯಿ.
40)ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ
41)ಸಜ್ಜನರ ಸಂಘ ಹೆಜ್ಜೇನು ಸವಿದಂತೆ.
42)ಮನೆ ಕಟ್ಟಿ ನೋಡು ಮಾಡುವೆ ಮಾಡಿ ನೋಡು.
43)ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು.
44)ಖಾಸಾ ತಿನ್ನೋದಕ್ಕಿಂತ ತುಸು ತಿನ್ನು.
45)ಸಂಸಾರದ ಗುಟ್ಟು ವ್ಯಾದಿ ರಟ್ಟು.


46)ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ.
47)ಶಂಖದಿಂದ ಬಂದರೆ ತೀರ್ಥ.
48)ಒಂದು ಸುಳ್ಳು ಮುಚ್ಚೋಕೆ ಸಾವಿರ ಸುಳ್ಳು ಹೇಳಬೇಕು.
49)ಸತ್ಯಕ್ಕೆ ಸಾವಿಲ್ಲ ,ಸುಳ್ಳಿಗೆ ಸುಖವಿಲ್ಲ.
50)ದುಷ್ಟರನ್ನು ಕಂಡು ದೂರ ಇರು.

Gade Matugalu in kannada


51)ಹದಾ ಇದ್ದಾಗ ಕೂಡಾ ತೆಗೆಯೋರು.
52)ಥು ಅಂದ್ರು ತಾ ಅಂತಾನಾ.
53)ಆರು ಹಡದಾಕಿಮುಂದ ಮುರ ಹಡದಾಕಿ ಸೋಗು ಮಾಡಿದ್ಲು.
54)ತುಂಬಿದ ಕೊಡ ತುಳುಕುವುದಿಲ್ಲ.
55)ಆಳಾಗಿ ದುಡಿ ಅರಸನಾಗಿ ಉಣ್ಣು.
56)ಹುಟ್ಟಿಸಿದ ದೇವರೆಂದು ಹುಲ್ಲು ಮೇಯಿಸಲಾರ.
57)ಸಂತೋಷವೇ ಯೌವನ, ಚಿಂತೆಯೇ ಮುಪ್ಪು.
58)ಇಲಿಯಾಗಿ ನೂರು ವರ್ಷ ಬಾಳುವುದುಕ್ಕಿಂತ, ಹುಲಿಯಾಗಿ ಮೂರೂ ವರ್ಷ ಬಾಳುವುದು ಲೇಸು.
59)ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ .
60)ಸಾಲವೇ ಶೂಲ.


61)ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
62)ಕೋಣದ ಮುಂದೆ ಕಿನ್ನರಿ ಬಾರಿಸಿದಂತೆ.
63)ಕಚ್ಚೋ ನಾಯಿ ಬೊಗಳೋದಿಲ್ಲ,ಬೊಗೋಳೋ ನಾಯಿ ಕಚ್ಚೋದಿಲ್ಲ.
64)ದಿಕ್ಕಿಲ್ಲದವರಿಗೆ ದೇವರೇ ಗತಿ.
65)ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
66)ಆಪತ್ಕಾಲದಗ ಆದವನೇ ನೆಂಟ.
67)ಇಲಿ ಹೋಗೈತಂದ್ರ , ಹುಲಿ ಹೋಗೈತಂತಾರ.
68)ಇದ್ರ ಈ ಊರ, ಎಡ್ರ ಮುಂದಿನ ಊರ.
69)ಕಲ್ಲನನ್ನ ನಂಬಿದ್ರು ,ಕುಳ್ಳನ್ನ ನಂಬಬಾರದು.
70)ಹಾಲು ನೋಡಿ ಎಮ್ಮೆ ಟೋಗೊ, ಕುಲ ನೋಡಿ ಹೆಣ್ಣ ತೊಗೊ .


71)ಹರೆದಾಗ ಹಾದರ ಮಾಡಿ ಮುಪ್ಪಿನ ಕಾಲಕ ಆಚಾರ ಹೇಳಿದ್ದಾಳಂತ .
72)ಮಾಡಬಾರದು ಮಾಡಿದ್ರ, ಆಗಬಾರದ್ದು ಆಗತ್ತ.
73)ಹರೆದಾಗ ಹಂದಿನು ಚಂದ ಕಾಣಸ್ತದ .
74)ಹಿಂದೋಡನ ಕೊಟ್ಟು ಒದೆಯೋ ಕತ್ತೆ ತಂದಂತೆ .
75)ಮನಸ್ಸಿದ್ದರೆ ಮಾರ್ಗ.

ಕನ್ನಡ ಜನಪ್ರಿಯ ಗಾದೆಗಳು


76)ಹಂಪಿ ಹೋಗುವುದಕ್ಕಿಂತ, ಕೊಂಪಿಯಲ್ಲಿರುವುದೇ ಲೇಸು.
77)ಕೆಡುವವರು ಮನೆಯಲ್ಲಿದ್ದರು ಕೆಡುತ್ತಾರೆ .
78)ಅಲ್ಪರ ಸಂಘ ಅಭಿಮಾನ ಭಂಗ.
79)ಕಜ್ಜಿ ಹೋದರು ಕಡಿತ ಹೋಗಲಿಲ್ಲ.
80)ಸುಖ ಬಂದಾಗ ಹಿಗ್ಗಬೇಕು, ಕಷ್ಟ ಬಂದಾಗ ಕುಗ್ಗಬೇಕು .
81)ಹುಲಿ ಹೊಟ್ಟೇಲಿ ನರಿ ಹುಟ್ಟಿದ ಹಾಗೆ.
82)ಹುಟ್ಟುತ್ತಾ ಅಣ್ಣತಮ್ಮಂದಿರು , ಬೆಳೆಯುತ್ತ ದಾಯಾದಿಗಳು.
83)ಹೊಡೆಯ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಅಂದ ಹಾಗೆ.
84)ಹನಿ ಹನಿ ಕುಡಿದರೆ ಹಳ್ಳ, ತೆನೆ ತೆನೆ ಕುಡಿದರೆ ಬಳ್ಳಿ.
85)ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ.

10 Gade matugalu in kannada


86)ಬೆಳ್ಳಗಿರುವದೆಲ್ಲ ಹಾಲಲ್ಲ .
87)ಮನೆಗೊಂದು ಮರ ,ಊರಿಗೊಂದು ವನ .
88)ಮಾತೆ ಮುತ್ತು, ಮಾತೆ ಮೃತ್ಯು.
89)ನೀರಿನಲ್ಲಿ ಮುಳುಗಿದವನಿಗೆ ,ಚಳಿಯೇನು,ಮಳೆಯೇನು.
90)ಕಟ್ಟಿಕೊಂಡವಳು ಕೊನೆತನಕ, ಇಟ್ಟುಕೊಂಡುವಳು ಇರೋತನಕ.
91)ನಮಾಜ ಮಾಡಲು ಹೋದ್ರ ಮಸೀದಿ ಕೊಲ್ಲಿಗೆ ಬಿಟ್ಟು.
92)ಸಾಲ ಮಾಡಿ ಮಾಡುವೆ ಮಾಡಬೇಕು,ಗಳಿಕೆ ಮಾಡಿ ಮನೆ ಕಟ್ಟಬೇಕು.
93)ಗಾಜು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು.
94)ದುಡ್ಡು ಮರದ ಮೇಲೆ ಬೆಳೆಯಲ್ಲ.
95)ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?


96)ದೇಶ ಸುತ್ತು, ಕೋಶ ಓದು .
97)ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು.
98)ವೇದಾಂತ ಹೇಳಕ್ಕೆ ,ಬದನೇಕಾಯಿ ತಿನ್ನಕೆ.
99)ಊರಿಗೆ ಅರಸನಾದರೂ ,ತಾಯಿಗೆ ಮಗನೆ .
100)ಶಕ್ತಿಗಿಂತ ಯುಕ್ತಿ ಮೇಲು.

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ pdf

Gade Matugalu in kannada with explanation : ಕನ್ನಡ ಜನಪ್ರಿಯ ಗಾದೆಗಳು ಮತ್ತು ಜನರು ಹೆಚ್ಚಾಗಿ ಬಳಸುವ ಕೆಲವು ಗಾದೆ ಮಾತುಗಳ ಸಂಪೂರ್ಣ ವಿಸ್ತರಣೆಯನ್ನು ಕೆಳಗಡೆ ನೀಡಿದ್ದೇವೆ

100 ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ pdf

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ : ತಾಳಿದವನು ಎಂದರೆ ತಾಳ್ಮೆಯಿಂದ ವರ್ತಿಸುವವನು ಮತ್ತು ಸಹನೆಯಿಂದ ಜೀವನ ನಡೆಸುವವನಿಗೆ ಜೀವನವು ಕಷ್ಟವಲ್ಲ.

ತಾಳ್ಮೆಯಿಂದ ಇದ್ದರೆ ಯಾವಾಗಲು ಸುಖ ಸಂತೋಷದಿಂದ ಬದುಕು ಸುಂದರವಾಗುತ್ತದೆ. ಯಾವುದೇ ಕಷ್ಟ ಬಂದರೂ ಅವನು ಅದನ್ನು ಸುಲಭವಾಗಿ ಎದುರಿಸುತ್ತಾನೆ ಸುಖ ನೆಮ್ಮದಿಯಿಂದ ಜೀವನ ಸಾಗಿಸುತ್ತಾನೆ. ಹೆಚ್ಚಿನ ಮಾಹಿತಿ

ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ : ಸೋಮಾರಿಯಾಗಿ ಸುಮ್ಮನೆ ಕುಳಿತುಕೊಳ್ಳುವ ಬದಲು ಯಾವುದಾದರೂ ಒಂದು ಕೆಲಸ ಶ್ರಮವಹಿಸಿ ದುಡಿದಾಗಲೇ ನಮಗೆ ಒಳ್ಳೆಯ ಫಲ ಸಿಗುತ್ತದೆ ಎಂಬ ಅರ್ಥ ಇದರಲ್ಲಿ ಅಡಗಿದೆ. Read More

ನಿಮಗೆ ನಾವು ನೀಡಿರುವ 100 ಗಾದೆ ಮಾತುಗಳು ಮಾಹಿತಿ ಉಪಯುಕ್ತವಾಗಿದೆ ಮತ್ತು Gade Matugalu in Kannada with explanation ತಿಳಿದಿದೆ ಎಂದು ಭಾವಿಸುತ್ತೇವೆ

3 thoughts on “Gade Matugalu in Kannada | 100 ಗಾದೆ ಮಾತುಗಳು”

Leave a Comment

error: Content is protected !!