Republic day in kannada speech – ಗಣರಾಜ್ಯೋತ್ಸವದ ಇತಿಹಾಸ, ಹಿನ್ನೆಲೆ , ಮತ್ತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು .
About Republic day in kannada
ವೇದಿಕೆ ಮೇಲೆ ಆಸೀನರಾಗಿರುವ ಗಣ್ಯರೇ, ಮುಖ್ಯ ಗುರುಗಳೇ ಶಿಕ್ಷಕರೇ ಹಾಗು ನನ್ನ ಪ್ರೀತಿಯ ಗೆಳೆಯ ಗೆಳತಿಯರೆ ಎಲ್ಲರಿಗು ಶುಭೋದಯ . ಇಂದು ೨೬ ನೆಯ ಜನವರಿ ,ಗಣರಾಜ್ಯೋತ್ಸವ ದಿನ ಆದ್ದರಿಂದ ಮೊದಲನೆಯದಾಗಿ ಎಲ್ಲರಿಗು ಗಣರಾಜ್ಯೋತ್ಸವದ ಶುಭಾಶಯಗಳು .
ಇಂದು ನಮಗೆಲ್ಲರಿಗೂ ಸಂತೋಷದ ದಿವಸ ಏಕೆಂದರೆ ಗಣರಾಜ್ಯೋತ್ಸವ ಭಾರತೀಯ ರಾಷ್ತ್ರೀಯ ಹಬ್ಬವಾಗಿದೆ . ಎಲ್ಲ ಭಾರತೀಯ ಜನರು ಒಗ್ಗೂಡಿ ಆಚರಿಸುವ ಹಬ್ಬವಾಗಿದೆ . ಈ ಗಣರಾಜ್ಯೋತ್ಸವವನ್ನು ೨೬ ಜನವರಿ ೧೯೫೦ ರಿಂದ ಆಚರಿಸಲಾಗುತ್ತಿದೆ ,ಪ್ರತಿ ವರ್ಷವೂ ಜನವರಿ ೨೬ ನ್ನು ಗಣರಾಜ್ಯೋತ್ಸವ ದಿನ ಎಂದು ಆಚರಿಸುತ್ತಾರೆ .
ಭಾರತೀಯ ಸಂವಿಧಾನವು ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ ೨೬,೧೯೫೦ ರಂದು ಆದ ಕರಣ ಜನವರಿ ೨೬ ನ್ನು ಗಣರಾಜ್ಯ ದಿನವಾಗಿ ಆಚರಿಸುತ್ತಾರೆ .
ಅಗಸ್ಟ ೧೫ ,೧೯೪೭ ರಂದು ಭಾರತ ಸಸ್ವತಂತ್ರವಾದ ನಂತರ ಆಗಸ್ಟ್ ೨೯ ರಂದು ಡಾ. ಬಿ ಆರ್ ಅಂಬೇಡ್ಕರ ರವರ ನೇತೃತ್ವದಲ್ಲಿ ಕರಡು ಸಮಿತಿ ನೇಮಕ ಮಾಡಲಾಯಿತು.
ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೇಂಬರ ೪,೧೯೪೭ ರಂದು ರಚನಾ ಸಭೆ ಮುಂದೆ ಇಟ್ಟಿತು , ಸುಧೀರ್ಘ ಚರ್ಚೆಯ ನಂತರ ರಚನಾ ಸಭೆಯು ೨೬-೧೧-೧೯೪೯ ರಂದು ಸಂವಿಧಾನವನ್ನು ಅಂಗೀಕರಿಸಿತು.
ಆದರೆ ನಮ್ಮ ಸಂವಿಧಾನವು ೨೬-೦೧-೧೯೫೦ ಜಾರಿಗೆ ಬಂದಿತು. ಈ ದಿನವನ್ನು ಇಂದಿಗೂ ಗಣರಾಜ್ಯ ದಿನವಾಗಿ ಆಚರಿಸುತ್ತಿದ್ದೇವೆ .
Ganarajyotsava in kannada
ಸಂವಿಧಾನ ೨೬-೧೧-೧೯೪೯ ರಂದು ಅಂಗೀಕರಿಸಿದರು ಕೂಡಾ ಜನವರಿ ೨೬ ರಂಡೆ ಸಂವಿದಾನ ಜಾರಿಗೆ ತರಲು ಕಾರಣವಿದೆ ,ಅದೇನೆಂದರೆ ಜನವರಿ ೨೬ ಒಂದು ಐತಿಹಾಸಿಕ ಮಹತ್ವವನ್ನು ಹೊಂದಿದ ದಿನವಾಗಿದೆ.
೧೯೨೯ ಜನವರಿ ೨೬ ರನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ವ ಸ್ವರಾಜ್ಯ ದಿನವನ್ನಾಗಿ ಆಚರಿಸಿತು . ಅದರ ನೆನಪಿಗಾಗಿ ಭಾರತ ಸಂವಿಧಾನವನ್ನು ಅನುಷ್ಠಾನಗೊಳಿಸಲು ಜನವರಿ ೨೬ ನ್ನು ಆಯ್ಕೆ ಮಾಡಿಕೊಳ್ಳಲಾಯಿತು .( ಲಾಹೋರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು .
ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬, ೧೯೫೦ ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು .
ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಬೇರೆ ಬೇರೆ ದೇಶದ ಗಣ್ಯರು ಅತಿಥಿಗಳಾಗಿ ಬಂದು ಭಾಗವಹಿಸುತ್ತಾರೆ .ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಂದು ಶಾಲಾ-ಕಾಲೇಜು ಕಚೇರಿಗಳಲ್ಲಿ ವಿವಿಧ ಇಲಾಖೆಗಳಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಬಹುದು .
ಇಂದು ಭಾರದತ ಪ್ರತಿ ರಾಜ್ಯ,ಪ್ರತಿ ಜಿಲ್ಲೆ,ಪ್ರತಿ ಹಳ್ಳಿಗಳಲ್ಲಿಯೂ ಸಂಭ್ರಮದ ಆಚರಣೆ ಕಾಣುತ್ತೇವೇ ಗಣರಾಜ್ಯೋತ್ಸವವನ್ನು ಕೇವಲ ಸಂವಿಧಾನ ಜಾರಿಗೆ ಬಂದ ಸವಿನೆನಪಿಗಾಗಿ ಆಚರಿಸುವುದು.
ಅಷ್ಟೇ ಅಲ್ಲದೆ ನಮ್ಮ ದೇಶದ ಅಖಂಡತೆ ನಾವೆಲ್ಲರೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವಂತಹ ಜವಾಬ್ದಾರಿ ಎಲ್ಲರಿಗು ತಿಳಿಯುವಂತೆ ಮಾಡಬಹುದು .
ನಮ್ಮ ಭಾರತ ದೇಶವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ . ಈ ದೇಶವು ಹೇಗೆ ಬೆಳೆಯಿತು ,ದೇಶದ ಇತಿಹಾಸವೇನು ಎಂಬುದರ ಬಗ್ಗೆ ತಿಳಿಸುವುದು ಈ ದಿನಾಚರಣೆಯ ಒಂದು ಉದ್ದೇಶವಾಗಿದೆ .
ಭಾರತ ದೇಶದ ಉಕ್ಕಿನ ಮನುಷ್ಯರಾದ ಸರ್ದಾರ ವಲ್ಲಭಭಾಯಿ ಪಟೇಲರವರ ಪರಿಶ್ರಮದಿಂದ ಇಂದು ಈ ವಿಶಾಲ ಭಾರತ ದೇಶ ನಮ್ಮದಾಗಿದೆ.
Republic day in kannada Speech
ನಮ್ಮ ದೇಶದ ಪ್ರಾಂತ್ಯಗಳು , ಸಾವಿರಾರು ಭಾಷೆಗಳು, ಹಲವಾರು ಧರ್ಮಗಳ ಭಿನ್ನತೆಯನ್ನು ಮರೆತು ನಾವೆಲ್ಲರೂ ಒಂದಾಗಿ ಒಗ್ಗೂಡಿ ಬಾಳುತ್ತೇವೆ ಮತ್ತು ಏಕತೆಯೊಂದಿಗೆ ಜಗತ್ತಿಗೆ ಮಾದರಿಯಾಗುತ್ತೇವೆ ಎಂದು ಶಪಥಗೈದ ಶುಭದಿನ ಈ ಗಣರಾಜ್ಯೋತ್ಸವ ದಿನ.
ಒಬ್ಬ ಹಿಂದುವಿಗೆ ಭಾಗವದ್ಗೀತೆ ಶ್ರೇಷ್ಠ , ಒಬ್ಬ ಮುಸಲ್ಮಾನನಿಗೆ ಕುರಾನ ಶ್ರೇಷ್ಠ , ಒಬ್ಬ ಕ್ರಿಶ್ಚಿಯನನಿಗೆ ಬೈಬಲ್ ಶ್ರೇಷ್ಠ ಆದರೆ ಒಬ್ಬ ಭಾರತೀಯನಿಗೆ ಯಾವ ಧರ್ಮದವನಿದ್ದರೂ ಅವನಿಗೆ ಸಂವಿಧಾನವೇ ಅತಿ ಶ್ರೇಷ್ಠ .
ಸಂವಿಧಾನದ ಮಾತೆ ಅಂತಿಮ ಅನ್ನುವುದನ್ನು ಮನದಟ್ಟು ಮಾಡುವುದೇ ಇಂದಿನ ಗಣರಾಜ್ಯೋತ್ಸವದ ಮುಖ್ಯ ಉದ್ದೇಶವಾಗಿದೆ ಎನ್ನಬಹುದು.
ಸಂವಿಧಾನದ ಜ್ಞಾನಸಾಗರ ಡಾ . ಬಿ ಆರ್ ಅಂಬೇಡ್ಕರವರ ನೇತೃತ್ವದಲ್ಲಿ ೨೫೦ ಕ್ಕೂ ಹೆಚ್ಚು ಮೇಧಾವಿಗಳಿಂದ ತಯಾರಾಗಿರುವ ಮಹಾಕಾನೂನು ಗ್ರಂಥವೇ ಸಂವಿಧಾನ . ಈ ಸಂವಿಧಾನದ ಮಾರ್ಗದರ್ಶನದಲ್ಲಿ ೭೪ ವರ್ಷಗಳಲ್ಲಿ ನಾವು ಬಹಳಷ್ಟು ಸಾಧಿಸಿದ್ದೇವೆ.
ಗಣರಾಜ್ಯೋತ್ಸವ ಭಾಷಣ ಕನ್ನಡ
ಗಣರಾಜ್ಯೋತ್ಸವವನ್ನು ಪ್ರಜಾರಾಜ್ಯೋತ್ಸವ ಎಂದು ಸಹ ಕರೆಯುತ್ತಾರೆ. ಪ್ರಜೆಗಳನ್ನು ಆಳುವ ಸರ್ಕಾರವನ್ನು ಆಯ್ಕೆ ಮಾಡುವಂತಹ ಹಕ್ಕು ಪ್ರಜೆಗಳಿಗಿರುತ್ತದೆ. ಇದನ್ನು ಗಣರಾಜ್ಯವೆಂದು ಕರೆಯುತ್ತಾರೆ.
ಪ್ರಜೆಗಳು ತಮ್ಮ ಮತಗಳನ್ನು ನೀಡುವ ಮೂಲಕ ಅವರಿಗೆ ಅವಶ್ಯಕವಿರುವ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವರು .”ಜನರೇ ಜನರಿಗಾಗಿ ಜನರಿಗೋಸ್ಕರ ಆಡಳಿತ ವ್ಯವಸ್ಥೆ ” ಎಂದು ಹೇಳುತ್ತಾರೆ.
ಈ ಸಂಧರ್ಭದಲ್ಲಿ ಬ್ರಿಟಿಷರು ಭಾರತೀಯರಿಗೆ ಒಂದು ಸವಾಲನ್ನು ಒಡ್ಡಿದರು ಅದೇನೆಂದರೆ ಭಾರತೀಯರಾದ ನೀವೇನು ಸ್ವತಂತ್ರವನ್ನು ಪಡೆದುಕೊಂಡಿರಿ . ದೇಶಕ್ಕೆ ಸಂವಿಧಾನವನ್ನು ಹೇಗೆ ರಚಿಸುತ್ತೀರಿ ಆ ಸಾಮರ್ಥ್ಯ ನಿಮಗಿಲ್ಲ ಎಂದು ಸವಾಲು ಹಾಕಿದರೂ.
ಆಗಿನ ಸಂಧರ್ಭದಲ್ಲಿ ಭಾರತಕ್ಕೆ ೨ ರೀತಿಯ ತೊಂದರೆಗಳು ಎದುರಾದವು ಮೊದಲನೆಯದು ಮುಸ್ಲಿ೦ವಾದಿಗಳ ಬೃಹತ್ ಸಂಖ್ಯೆ ಮತ್ತು ರಾಜ ಮಹಾರಾಜರು ಬ್ರಿಟಿಷರ ಕೈಕೆಳಗೆ ಅಧೀನರಾಗಿರುವುದು ಆದ ಕಾರಣ ಸಂವಿಧಾನ ರಚಿಸಲು ಭಾರತದಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಆಯಿತು . ಆದರೂ ಭಾರತೀಯರು ಎದೆಗುಂದದೆ ಸಂವಿಧಾನ ರಚನೆಯಲ್ಲಿ ತೊಡಗಿದರು.
ಸಣ್ಣ ಸಣ್ಣ ಸಮಿತಿಗಳನ್ನು (ಉದಾ-ಕರುಡು ಸಮಿತಿ ) ರಚಿಸಿ ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿಯ ಕಾನೂನಿನ ಬಗ್ಗೆ ಅಧ್ಯಯನ ಮಾಡುತ್ತಾರೆ ಮತ್ತು ಸರ್ದಾರ ವಲ್ಲಭಬಾಯಿ ಪಟೇಲ ಅವರು ಮೂಲಭೂತ ಹಕ್ಕುಗಳ ಮೂಲಕ ಕಾನೂನನ್ನು ರಚಿಸುತ್ತಾರೆ .
ಇದನ್ನು ಕೂಡ ಓದಿ – Hanuman Chalisa in Kannada – ಹನುಮಾನ್ ಚಾಲೀಸಾ
ಹೀಗೆಯೇ ಬೇರೆ ಬೇರೆ ದೇಶಕ್ಕೆ ಹೋಗಿ ಅಲ್ಲಿಯ ಕಾನೂನುಗಳನ್ನು ನೀತಿ ನಿಯಮಗಳನ್ನು ಹೇಗಿವೆ ಎಂದು ತಿಳಿದುಕೊಂಡು ಭಾರತದ ಸಂವಿಧಾನದ ರಚನೆಗೆ ಪರಿಶ್ರಮವನ್ನು ಪಡುತ್ತೇವೆ .
ಹೀಗಾಗಿ ನಾವು ಅಮೇರಿಕಾದಿಂದ ಅನೇಕ ಕಾನೂನುಗಳನ್ನು ಎರವಲು ಪಡೆದುಕೊಂಡಿದ್ದೇವೆ ಮತ್ತು ಹಲವಾರು ದೇಶಗಳಿಂದ ಕಾಯ್ದೆ ಕಾನೂನಗಳನ್ನು ಎರವಲು ಪಡೆಯುವ ಮೂಲಕ ಸಂವಿಧಾನವನ್ನು ರಚನೆ ಮಾಡುತ್ತಾರೆ .
ಹೀಗೆ ಭಾರತದ ನಾಯಕರುಗಳು ಮತ್ತು ಸಮಿತಿಗಳ ಅಧ್ಯಕ್ಷರುಗಳು ಒಟ್ಟುಗೂಡಿ ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ ಪರಿಶ್ರಮ ಪಟ್ಟು ಸಂವಿಧಾನ ರಚನೆ ಮಾಡುತ್ತಾರೆ. ರಚನೆ ಮಾಡಿದ ಮೇಲೆ ಜನವರಿ ೨೬ ,೧೯೫೦ ರಂದು ಜಾರಿಗೆ ತರುತ್ತಾರೆ.
ಈ ದಿನದಂದು ದೆಹಲಿಯ ರಾಜಪಥನಲ್ಲಿ ರಾಷ್ಟ್ರಪತಿಯವರು ದ್ವಜಾರೋಹಣ ಮಾಡುತ್ತಾರೆ . ಹಲವಾರು ಪೆರೇಡುಗಳನ್ನು ನಡೆಸುತ್ತಾರೆ ಮತ್ತು ನಮ್ಮ ಭಾರತದ ಹಲವಾರು ರಾಜ್ಯಗಳಿಂದ ಆಯಾ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಹೀಗೆ ಭಾರತ ದೇಶದಲ್ಲಿ ಗಣರಾಜ್ಯದಿನವನ್ನು ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ತ್ರಿವರ್ಣ ಧ್ವಜವನ್ನು ಆರೋಹಣ ಮಾಡುವ ಮೂಲಕ ಗೌರವವನ್ನು ಸಲ್ಲಿಸುತ್ತಾ ರಾಷ್ಟ್ರದ ಬಹುದೊಡ್ಡ ಹಬ್ಬವಾಗಿ ಆಚರಿಸುತ್ತವೆ.
ಹೀಗೆಯೇ ಪ್ರತಿವರ್ಷವೂ ಒಗ್ಗಟ್ಟಿನಿಂದ ಈ ಹಬ್ಬವನ್ನು ಆಚರಿಸುತ್ತಾ ಹೋಗೋಣ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ .
ಧನ್ಯವಾದಗಳು….
ಜೈ ಹಿಂದ .