ಕನ್ನಡ ಸಂಧಿಗಳು – Kannada Sandhigalu

Kannada Sandhigalu : ನಾವು ಮಾತನಾಡುವ ವಾಕ್ಯದಲ್ಲಿರುವ ಪ್ರತಿಯೊಂದು ಪದವನ್ನು ಬಿಡಿಸಿ ಹೇಳುವುದಿಲ್ಲ. ಆದಷ್ಟು ಮಟ್ಟಿಗೆ ಅವುಗಳನ್ನು ಕುಡಿಸಿ ತಡವಾಗದಂತೆ ಉಚ್ಛರಿಸುತ್ತೇವೆ. ‘ಊರು ಊರು ‘ ಎಂಬ ಎರಡು ಶಬ್ದಗಳನ್ನು ಊರೂರು ಎಂದು ಕೂಡಿಸಿ ಮಾತನಾಡುತ್ತೇವೆ .

ಈ ರೀತಿ ಉಚ್ಚಾರಣೆಯಲ್ಲಿ ವರ್ಣಗಳ ನಡುವೆ ಕಾಲ್ ವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿಯೆಂದು ಸಂಧಿಯಾಗುವ ಮುಂಚೆ ಇದ್ದ ವರ್ಣವು ಬಿಟ್ಟು ಹೋಗುವುದು, ಹೊಸದೊಂದು ವರ್ಣವು ನಡುವೆ ಬರುವುದು, ಈ ಮೊದಲಾದ ವ್ಯತ್ಯಾಸಗಳಿಗೆ ಸಂಧಿಕಾರ್ಯಗಳೆಂದು ಹೆಸರು.

ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು

Kannada Sandhigalu Definition ( ಸಂಧಿಗಳು ಅರ್ಥ ) – ಎರಡು ಅಕ್ಷರಗಳು ( ವರ್ಣಗಳು ) ಕಾಲ ವಿಳಂಬವಿಲ್ಲದಂತೆ ಕೂಡಿಕೊಳ್ಳುವುದಕ್ಕೆ ಸಂಧಿ ಎನ್ನುವರು.

Kannada Sandhigalu Examples ( ಉದಾಹರಣೆ )

  • ಮೂರೂ +ಊರು =ಮುರೂರು
  • ಮಾತು+ಇಲ್ =ಮಾತಿಲ್ಲ
  • ಅವನು +ಅಲ್ಲಿ =ಅವನಲ್ಲಿ
  • ಆಡು +ಇಸು =ಆಡಿಸು

ಸಂಧಿಗಳ ಪ್ರಕಾರಗಳು – sandhigalu in kannada

  1. ಕನ್ನಡ ಸಂಧಿಗಳು
  2. ಸಂಸ್ಕೃತ ಸಂಧಿಗಳು

ಕನ್ನಡ ಸಂಧಿಗಳು – Kannada Sandhigalu

ಕನ್ನಡ ಸಂಧಿಗಳಲ್ಲಿ 3 ವಿಧಗಳು ಬರುತ್ತವೆ

  • ಲೋಪಸಂಧಿ
  • ಆಗಮ ಸಂಧಿ
  • ಆದೇಶ ಸಂಧಿ

ಲೋಪಸಂಧಿ

ಸ್ವರದ ಮುಂದೆ ಸ್ವರವು ಬಂದು ಸಂಧಿ ಆಗುವಾಗ ಪೂರ್ವಪದದ ಅಂತ್ಯದಲ್ಲಿರುವ ಸ್ವರವು ಅರ್ಥ ಕೆಡದಿದ್ದರೆ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಸ್ವರಲೋಪಸಂಧಿ /ಲೋಪಸಂಧಿ ಎನ್ನುವರು.

ಲೋಪ ಕನ್ನಡ ಸಂಧಿಗಳು ಉದಾಹರಣೆ : ಬೇರೆ+ಒಂದು =ಬೇರೊಂದು
ದೇವರು+ಇಂದ =ದೇವರಿಂದ
ಬೇರೆ+ಒಬ್ಬ =ಬೇರೊಬ್ಬ

ಆಗಮ ಸಂಧಿ

ಆಗಮವೆಂದರೆ ಹೊಸದಾಗಿ ಸೇರುವುದು, ಸ್ವರದ ಮುಂದೆ ಸ್ವರ ಬಂದಾಗ ಲೋಪಸಂಧಿ ಮಾಡಿದರೆ ಅರ್ಥವೂ ಕೆಡುವಂತಿದ್ದರೆ ಆ ಎರಡು ಸ್ವರಗಳ ಮಧ್ಯೆ ‘ಯ ‘ ಕಾರ ಅಥವಾ ‘ವ’ ಕಾರವನ್ನು ಹೊಸದಾಗಿ ಸೇರಿಸಿ ಹೇಳುವುದಕ್ಕೆ ಆಗಮ ಸಂಧಿ ಎಂದು ಕರೆಯುತ್ತಾರೆ.

ಆಗಮ ಸಂಧಿಯಲ್ಲಿ ಎರಡು ವಿಧಗಳು

  1. ‘ಯ ‘ ಕಾರ ಆಗಮ ಸಂಧಿ – ಆ ಈ ಇ ಎ ಏ ಐ ಸ್ವರಗಳ ಮುಂದೆ ಸ್ವರ ಬಂದರೆ ಆ ಎರಡು ಸ್ವರಗಳ ಮಧ್ಯೆ ‘ಯ ‘ ಕಾರ ಆಗಮವಾಗುತ್ತದೆ ಇದಕ್ಕೆ ‘ಯ ‘ ಕಾರ ಆಗಮ ಸಂಧಿ ಎಂದು ಹೆಸರು.

ಉದಾ : ಕಾ+ಅದೆ =ಕಾಯದೆ
ಹಳ್ಳಿ +ಅಲ್ಲಿ =ಹಳ್ಳಿಯಲ್ಲಿ
ದೊರೆ+ಎಂದು=ದೊರೆಯೆಂದು
ರಾಜ್ಯಶ್ರೀ +ಅನ್ನು =ರಾಜ್ಯಶ್ರೀಯನ್ನು
ಕೆರೆ +ಅನ್ನು=ಕೆರೆಯನ್ನು

2. ‘ವ’ ಕಾರ ಆಗಮ ಸಂಧಿ – ಉ ಊ ಋ ಓ ಸ್ವರಗಳ ಮುಂದೆ ಸ್ವರ ಬಂದರೆ ನಡುವೆ ‘ವ ‘ ಕಾರ ಆಗಮವಾಗುತ್ತದೆ, ಇದಕ್ಕೆ ‘ವ ‘ ಕಾರ ಆಗಮ ಸಂಧಿ ಎಂದು ಹೆಸರು.

ಉದಾ : ‘ಅ ‘ ಕಾರದ ಮುಂದೆ ‘ಅ ‘ ಕಾರವೇ ಬಂದರೆ ‘ವ ‘ ಕಾರ ಆಗಮವಾಗುತ್ತದೆ.
ಹೊಲ+ಅನ್ನು =ಹೊಲವನ್ನು
ಮನ +ಅನ್ನು=ಮನವನ್ನು

ಆ ಎಂಬ ಅಕ್ಷರ ಉ, ಊ ,ಒ, ಓ ,ಸ್ವರಗಳು ಬಂದರೆ ನಡುವೆ ‘ವ’ಕಾರಗಮನವಾಗುತ್ತದೆ.
ಆ +ಉಂಗುರ =ಆವುಂಗುರ
ಆ+ಒಂಟೆ =ಆವೊಂಟೆ

ಆದೇಶ ಸಂಧಿ

ಸಂಧಿ ಆಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರವು ಬರುವುದಕ್ಕೆ ಆದೇಶ ಸಂಧಿ ಎನ್ನುವರು. ಈ ಆದೇಶ ಸಂಧಿಯನ್ನು ಕನ್ನಡ ವ್ಯಂಜನ ಸಂಧಿ ಮತ್ತು ಗದಬಾ ಆದೇಶ ಸಂಧಿ ಎಂದು ಕರೆಯುವರು.

ಆದೇಶ ಸಂಧಿ ಉದಾಹರಣೆ

ವರ್ಗದ ಪ್ರಥಮಾ ಅಕ್ಷರಗಳಾದ ಕ,ಚ ,ಟ ,ತ ,ಪ , ವ್ಯಂಜನಗಳಲ್ಲಿ ಚ ,ಟ , ವ್ಯಂಜನಗಳನ್ನು ಬಿಟ್ಟು ಉಳಿದಂತಹ ಕ,ತ,ಪ , ವ್ಯಂಜನಗಳಿಗೆ ವರ್ಗದ ತೃತೀಯ ವ್ಯಂಜನಗಳಾದ ಗದಬ ಆದೇಶವಾಗಿ ಬರುವುದಕ್ಕೆ ಗದಬಾ ಆದೇಶ ಸಂಧಿ ಎಂದು ಕರೆಯುವರು.

  • ಕಣ್ +ಪನಿ =ಕಂಬನಿ
  • ಕೈ +ತೋಟ =ಕೈದೋಟ
  • ಬೆನ +ಪತ್ತು = ಬೆಂಬತ್ತು
  • ಕ್ಷೀರ +ಕಡಲು =ಕ್ಷೀರಗಡಲು

ಸಂಸ್ಕೃತ ಸಂಧಿಗಳು

ಎರಡು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯಾಗುತ್ತದೆ. ಒಂದು ಪದ ಸಂಸ್ಕೃತವಿದ್ದು ಮತ್ತೊಂದು ಕನ್ನಡ ಪದ ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯಾಗಲಾರದು.
ಸಂಸ್ಕೃತದಲ್ಲಿ ಕನ್ನಡದಂತೆ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಯೆಂದು ಕರೆಯುತ್ತಾರೆ. ವ್ಯಂಜನಕ್ಕೆ ವ್ಯಂಜನ ಅಥವಾ ಸ್ವರ ಪರವಾದರೆ ವ್ಯಂಜನ ಸಂಧಿಯಾಗುತ್ತದೆ.

ಸಂಸ್ಕೃತ ಸಂಧಿಯಲ್ಲಿ ಎರಡು ವಿಧಗಳು

  • ಸಂಸ್ಕೃತ ಸ್ವರ ಸಂಧಿ
  • ಸಂಸ್ಕೃತ ವ್ಯಂಜನ ಸಂಧಿ

a) ಸಂಸ್ಕೃತ ಸ್ವರ ಸಂಧಿ

ಸಂಸ್ಕೃತದಲ್ಲಿ ಕನ್ನಡದಂತೆ ಸ್ವರಕ್ಕೆ ಸ್ವರ ಪರವಾದರೆ ಸಂಸ್ಕೃತ ಸ್ವರ ಸಂಧಿ ಎಂದು ಕರೆಯುತ್ತಾರೆ.

ಸಂಸ್ಕೃತ ಸ್ವರ ಸಂಧಿಯಲ್ಲಿ 4 ವಿಧಗಳು

1) ಸವರ್ಣ ಧೀರ್ಘ ಸಂಧಿ – ಸವರ್ಣ ಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎಂದು ಕರೆಯುತ್ತಾರೆ.
ಆ,ಆ,ಇ ,ಈ,ಉ,ಊ ಇವು ಸವರ್ಣ ಸ್ವರಗಳು

ಸಂಸ್ಕೃತ ಸಂಧಿಗಳು ಉದಾಹರಣೆ : ದೇವ +ಇಂದ್ರ=ದೇವೇಂದ್ರ
ಸೋಮ+ಈಶ್ವರ=ಸೋಮೇಶ್ವರ
ಸುರ+ಇಂದ್ರ=ಸುರೇಂದ್ರ
ರಾಜ +ಉತ್ಸವ =ರಾಜ್ಯೋತ್ಸವ
ದೇವಾ+ಋಷಿ =ದೇವರ್ಷಿ
ಗಣ+ಈಶ =ಗಣೇಶ
ಸರ್ವ +ಉದಯ =ಸರ್ವೋದಯ
ಮಹಾ+ಋಷಿ =ಮಹರ್ಷಿ

2) ಗುಣಸಂಧಿ – ಆ,ಆ,ಕಾರ ಗಳಿಗೆ ಇ ,ಈ,ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ ‘ಕಾರವು ; ಉ,ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವೂ, ಋ ಕಾರವೂ ಪರವಾದರೆ ಅವೆರಡರ ಸ್ಥಾನದಲ್ಲಿ ‘ಅರ್ ‘ ಕಾರವು ಆದೇಶವಾಗಿ ಬರುತ್ತದೆ.ಇದಕ್ಕೆ ಗುಣಸಂಧಿ ಎಂದು ಕರೆಯುವರು.

ಉದಾ : ದೇವ +ಈಶ =ದೇವೇಶ
ಚಂದ್ರ+ಉದಯ=ಚಂದ್ರೋದಯ
ದೇವ +ಈಶ =ದೇವೇಶ

3) ವೃದ್ಧಿಸಂಧಿ – ಆ,ಆ, ಕಾರಗಳಿಗೆ ಏ ,ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು ಒ , ಔ ಕಾರಗಳು ಪರವಾದರೆ ಅವೆರಡರ ಸ್ತಾನದಲ್ಲಿ ಔ ಕಾರವು ಆದೇಶವಾಗಿ ಬರುತ್ತದೆ, ಇದಕ್ಕೆ ವೃದ್ಧಿಸಂಧಿ ಎಂದು ಕರೆಯುತ್ತೇವೆ.

ಉದಾ: ಜನ+ಐಕ್ಯ =ಜನೈಕ್ಯ
ಜತ+ಓಘ =ಜತೌಘ
ಏಕ +ಏಕ=ಏಕೈಕ
ವನ+ಔಷಧ =ವನೌಷಧ
ಮಹಾ+ಔನ್ನತ್ಯ =ಮಹೌನ್ನತ್ಯ

4) ಯಣ್ ಸಂಧಿ – ಇ ,ಈ,ಉ,ಋ , ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ,ಈ,ಕಾರಗಳಿಗೆ ‘ಯ್ ‘ ಕಾರವು ಉ ಕಾರಕ್ಕೆ ‘ವ್ ‘ ಕಾರವು ಋ ಕಾರಕ್ಕೆ ‘ರ್ ‘ ವೂ ಆದೇಶವಾಗಿ ಬರುತ್ತವೆ, ಇದಕ್ಕೆ ಯಣ್ ಸಂಧಿ ಎಂದು ಕರೆಯುತ್ತಾರೆ .

ಉದಾ: ಅತಿ +ಅಂತ =ಅತ್ಯಂತ
ಪ್ರತಿ+ಉತ್ತರ =ಪ್ರತ್ಯುತ್ತರ
ಮನು+ಅಂತರ =ಮನ್ವಂತರ
ಪಿತೃ+ಅರ್ಜಿತ =ಪಿತ್ರಾರ್ಜಿತ

b) ಸಂಸ್ಕೃತ ವ್ಯಂಜನ ಸಂಧಿ

ವ್ಯಂಜನಕ್ಕೆ ವ್ಯಂಜನ ಅಥವಾ ಸ್ವರ ಪರವಾದರೆ ಪರವಾದರೆ ಸಂಸ್ಕೃತ ವ್ಯಂಜನ ಸಂಧಿಯಾಗುತ್ತದೆ.

ಸಂಸ್ಕೃತ ವ್ಯಂಜನ ಸಂಧಿಯಲ್ಲಿ 6 ವಿಧಗಳು

1. ಶ್ಟುತ್ವ ಸಂಧಿ – ಸಕಾರ ತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ ಸಕಾರಕ್ಕೆ ಶಕಾರವೂ ತವರ್ಗಕ್ಕೆ ಚವರ್ಗವು ಆದೇಶವಾಗಿ ಬರುತ್ತವೆ, ಇದ್ದಕ್ಕೆ ಶ್ಟುತ್ವ ಸಂಧಿ ಎಂದು ಕರೆಯುತ್ತಾರೆ.

ಉದಾ: ಯಶಸ್ +ಚಂದ್ರಿಕೆ =ಯಶಶ್ಚ೦ದ್ರಿಕೆ
ಬೃಹತ್ +ಜ್ಯೋತಿ =ಬೃಹಜ್ಯೋತಿ
ಸತ್ +ಚಿತ್ರ=ಸಚ್ಚಿತ್ರ
ಮನಸ್ +ಶಾಂತಿ =ಮನಶಾಂತಿ

2. ಜಶ್ತ್ವ ಸಂಧಿ – ಪೂರ್ವ ಶಬ್ದದ ಕೊನೆಯಲ್ಲಿರುವ ಕ,ಚ,ಟ ,ತ, ಪ , ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶವಿ ಬರುತ್ತವೆ, ಇದಕ್ಕೆ ಜಶ್ತ್ವ ಸಂಧಿ ಎಂದು ಕರೆಯುತ್ತೇವೆ.

ಉದಾ: ಚಿತ +ಆನಂದ = ಚಿದಾನಂದ
ವಾಕ+ದೇವಿ=ವಾಗ್ದೇವಿ

3. ಅನುನಾಸಿಕ ಸಂಧಿ – ವರ್ಗದ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ ಅವುಗಳಿಗೆ ಅಂದರೆ ಕ,ಚ,ಟ ,ತ ,ಪ ವ್ಯಂಜನಗಳಿಗೆ ಕ್ರಮವಾಗಿ ಙ ,ಞ ,ಣ ,ನ ,ಮ, ವ್ಯಂಜನಗಳು ಆದೇಶವಾಗಿ ಬರುತ್ತವೆ .ಇದಕ್ಕೆ ಅನುನಾಸಿಕ ಸಂಧಿ ಎಂಧು ಕರೆಯುತ್ತೇವೆ.

ಉದಾ: ಷಟ್ +ಮುಖ =ಷಣ್ಮುಖ
ವಾಕ್ +ಮಯ =ವಾಙ್ಮಯ
ಸತ್+ಮಾನ =ಸನ್ಮಾನ
ತನ್ +ಮಾಯಾ=ತನ್ಮಯ

4. ವಿಸರ್ಗ ಸಂಧಿ– ಈ ಸಂಧಿ ಪೂರ್ವಪದಾಂತ ರೇಫದ (ರ>ಸ, ಸ>ರ ) ಮುಂದೆ ಕ ,ಖ , ಪ,ಫ,ಕ್ಷ , ಕಾರಗಳು ಬಂದರೆ ರೆಫಕ್ಕೆ ವಿಸರ್ಗದ ಆದೇಶವಾಗುವುದು, ಇದಕ್ಕೆ ವಿಸರ್ಗ ಸಂಧಿ ಎಂದು ಕರೆಯುವರು.

ಉದಾ: ಅಂತರ್+ಕರಣ =ಅಂತಃಕರಣ
ಪುನರ್+ಪರೀಕ್ಷೆ =ಪುನಃಪರಿಕ್ಷೇ
ತಪಸ್+ ಫಲ=ತಪಃಫಲ

5. ಷ್ಟುತ್ವ ಸಂಧಿ – ಸಕಾರ ತವರ್ಗಗಳಿಗೆ ಷಕಾರ ಟವರ್ಗಗಳು ಪರವಾದರೆ ಸಕಾರಕ್ಕೆ ಷಕಾರವೂ , ತವರ್ಗಕ್ಕೆ ಟವರ್ಗಗವೂ ಆದೇಶವಾಗಿ ಬರುವುದು, ಇದಕ್ಕೆ ಷ್ಟುತ್ವ ಸಂಧಿ ಎಂದು ಕರೆಯುವರು.

ಉದಾ: ಧನುಸ್ +ಟಂಕಾರ =ಧನುಷ್ಟ೦ಕಾರ
ಉತ್+ಡಯನ= ಉಡ್ಡಯನ

6. ಛತ್ವ ಸಂಧಿ – ಪೂರ್ವಪದಾಂತ ವರ್ಗಿಯ ವ್ಯಂಜನಗಳ ಮುಂದೆ ಸ್ವರ ಯಾ,ರ,ಲ,ವ,ಶ , ಕಾರ ಬಂದರೆ ಛ ಕಾರವು ಆದೇಶವಾಗಿ ಬರುವುದು, ಇದಕ್ಕೆ ಛತ್ವ ಸಂಧಿ ಎಂದು ಕರೆಯುವರು.

ಉದಾ: ವಿದ್ಯುತ್ +ಶಕ್ತಿ =ವಿದ್ಯುಚ್ಛಕ್ತಿ

ನಿಮಗೆ ಕೆಳಗಿನವು ಕೂಡ ತಿಳಿದಿರಲಿ – ಓದಿ

Leave a Comment

error: Content is protected !!