ಪರಿಸರ ಸಂರಕ್ಷಣೆ ಕುರಿತು ಪ್ರಬಂಧ | Parisara Samrakshane Essay in Kannada

Parisara Samrakshane Essay in kannada – ಪರಿಸರವು ನಮ್ಮ ನಿಮ್ಮೆಲರ ಆಸ್ತಿ. ನಾವು ವಾಸಿಸುವ ಸ್ಥಳ ಎಂದರು ತಪ್ಪಾಗಲಾರದು. ವಾಸ್ತವವಾಗಿ, ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಪರಿಸರ ಎನ್ನುತ್ತಾರೆ. ಇದು ಪ್ರಾಣಿ-ಪಕ್ಷಿ, ಮನುಷ್ಯರು, ವಸ್ತುಗಳು, ಗಿಡ ಮರಗಳು ಮತ್ತು ಇತ್ಯಾದಿಗಳನ್ನೂ ಒಳಗೊಂಡಿದೆ

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ, Parisara Samrakshane Essay in kannada, parisara samrakshane prabandha in kannada, Environmental protection essay in kannada, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರಬಂಧ, ಪರಿಸರ ಸಂರಕ್ಷಣೆ ಪ್ರಬಂಧ pdf

Parisara Samrakshane Essay in Kannada

ಮಾನವರು, ಪ್ರಾಣಿಗಳು ಮತ್ತು ಗ್ರಹದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪರಿಸರ ಸಂರಕ್ಷಣೆ ನಿರ್ಣಾಯಕವಾಗಿದೆ. ಪರಿಸರವನ್ನು ರಕ್ಷಿಸಲು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳು ಮಾಲಿನ್ಯವನ್ನು ಕಡಿಮೆ ಮಾಡುವುದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, ತ್ಯಾಜ್ಯ ಮತ್ತು ಮರುಬಳಕೆಯನ್ನು ಕಡಿಮೆ ಮಾಡುವುದು, ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವುದು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವುದು.

ಪಿಠೀಕೆ

ಮನುಷ್ಯ ಪರಿಸರದೊಂದಿಗೆ ಪರಿಸರವನ್ನವಲಂಬಿಸಿ ಅದರ ನೆರಳಿನಲ್ಲಿಯೇ ತನ್ನ ಬಾಳನ್ನು ಸವಿಸಬೇಕಾದ ಅನಿವಾರ್ಯತೆಯನ್ನು ಹೊಂದಿದ್ದಾನೆ .ಮಾನವನು ಪರಿಸರದ ಮಧ್ಯದಲ್ಲಿ ಬದುಕಿ ಬಾಳಬೇಕು. ಏನೆಲ್ಲವನ್ನು ಆತ ಪರಿಸರದಲ್ಲಿಯೇ ಸ್ವಾಭಾವಿಕವಾಗಿ ಕಲಿಯಬೇಕು. ನಿಸರ್ಗವು ಒಂದು ತೆರೆದಿಟ್ಟ ಪುಸ್ತಕವಿದ್ದಂತೆ . ಪರಿಸರದಲ್ಲಿ ಸಸ್ಯಗಳು, ಗಾಳ ,ನೀರು ,ಪ್ರಾಣಿಗಳು, ಮನುಷಯರು ಮತ್ತು ಇತರ ಜೀವಿಗಳು ಅಸ್ತಿತ್ವದಲ್ಲಿವೆ . ಜೀವಂತ ಜೀವಿಗಳು ಪರಿಸರದೊಂದಿಗೆ ಬಲವಾಗಿ ಸಂಪರ್ಕ ಹೊಂದಿವೆ, ಇದನ್ನು ಪರಿಸರ ವಿಜ್ಞಾನ ಎಂದು ಕರೆಯುತ್ತಾರೆ.

ವಿಷಯ ವಿಶ್ಲೇಷಣೆ

Parisara Samrakshane Essay in Kannada – “ಪರಿಸರ ಅಂದ್ರೆ ಹಸಿರು, ಹಸಿರೇ ನಮ್ಮ ಉಸಿರು” ಎಂಬ ನಾಣ್ನುಡಿ ಇದೆ. ಸ್ವಚ್ಛತೆ ಕಾಪಾಡಿಕೊಂಡು ಬದುಕಬೇಕು, ಹೀಗಾದಾಗ ಮಾತ್ರ ನಾವು ಪರಿಸರದಿಂದ ಒಳ್ಳೆಯ ಮಳೆ, ಬೆಳೆ ಪಡೆಯಲು ಸಾಧ್ಯ .”ನಾವು ಯಾವ ಬೀಜ ಬಿತ್ತುತ್ತೇವೆಯೋ ಅದೇ ಫಲ ಪಡೆಯುತ್ತೇವೆ” ಎಂಬ ಮಾತಿದೆ, ಇದರರ್ಥ ನಾವು ಗಿಡ ಮರ ಬೆಳೆಸಿ, ದುರಾಸೆ ಬಿಟ್ಟು ಪರಿಸರದ ಜೊತೆಗೆ ಬಾಂಧವ್ಯ ಹೊಂದಬೇಕು .ಭೂಮಂಡಲದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ಪರಿಸರ ಎನ್ನುವ ಪದವು ಆಂಗ್ಲ ಭಾಷಯ Environment ಎಂಬ ಪದದ ಅನುವಾದವಾಗಿದ್ದು Environment ಎಂಬ ಪದವು ಫ್ರೆ೦ಚ್ ಭಾಷಯ Environ(ಏನ್ ವಿರಾನ್ ) ಎಂಬ ಪದದಿಂದ ಬಂದಿದ್ದಾಗಿದೆ .

ಫಿಟಿಂಗ್ – “ಒಂದು ಜೀವಿಯ ಸುತ್ತಲಿನ ಪರಿಸ್ಥಿತಿ ಗಳ ಒಟ್ಟು ಸ್ವರೂಪವೇ ಪರಿಸರವಾಗಿದೆ “

ಮಾಂಕ್ ಹೌಸ್ – “ಒಂದು ಜೀವಿ, ಒಂದು ಸಮುದಾಯ ಅಥವಾ ಒಂದು ವಸ್ತು ಅಸ್ತಿತ್ವದಲ್ಲಿರುವ ಸುತ್ತಲಿನ ಬಾಹ್ಯ ಪರಿಸ್ಥಿತಿಗಳ ಒಟ್ಟು ಮೊತ್ತವೇ ಪರಿಸರ “.

ಸಾಹೂ – “ವಾಯು ,ಜಲ,ಅರಣ್ಯ,ವನ್ಯಜೀವಿಗಳು,ಮಾನವ ಸಮಾಜ ಇತ್ಯಾದಿಗಳೆಲ್ಲವನ್ನು ಒಳಗೊಂಡಿರುವ ಸಮಗ್ರ ಕ್ರಿಯಾತ್ಮಕ ವ್ಯವಸ್ಥೆಯೇ ಪರಿಸರ”

ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶಗಳು

  • ಪರಿಸರವನ್ನು ರಕ್ಷಣೆ ಮತ್ತು ಸುಧಾರಣೆ ಮಾಡುವುದು, ಉದಾ: ನೆಲ, ಜಲ, ವಾಯುವಿನ ರಕ್ಷಣೆ
  • ಮಾನವ ಮತ್ತು ಪರಿಸರದ ನಡುವೆ ಸಮರಸದಿಂದ ಕೂಡಿದ ಸಂಭಂದ ಕಲ್ಪಿಸುವುದು.
  • ಸಮಸ್ತ ಜೀವಿ ಸಂಕುಲ ಮತ್ತು ಆಸ್ತಿ-ಪಾಸ್ತಿಯನ್ನು ಪರಿಸರ ಮಾಲಿನ್ಯದಿಂದಾಗುವ ಗಂಡಾಂತರದಿಂದ ರಕ್ಷಣೆ ಮಾಡುವುದು .
  • ಪರಿಸರ ಸಂರಕ್ಷಣಾ ಕಾಯ್ದೆ-1986
  • ಭಾರತದ ಸಂವಿಧಾನದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಸಾಕಷ್ಟು ಹೇಳಲಾಗಿದೆ. ಸ್ವೀಡನ್ನಿನ ಸ್ಟಾಕ್ ಹೋ೦ ಎಂಬಲ್ಲಿ ವಿಶ್ವ ಸಂಸ್ಥೆಯು ೧೯೭೨ ರಲ್ಲಿ ಮಾನವ ಪರಿಸರವನ್ನು ಕುರಿತಂತೆ ಅಂತರಾಷ್ಟ್ರೀಯ ಸಮ್ಮೇಳನ ಏರ್ಪಡಿಸಿತ್ತು.
  • ಈ ಕಾರಣದಿಂದ ಭಾರತದಲ್ಲಿಯೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕೆಲವು ಕಾನೂನುಗಳು ರೂಪಿಸಲ್ಪಟ್ಟಿದ್ದವು.ಆದರೆ ಅವುಗಳು ಕೆಲವೇ ಪ್ರಕಾರದ ಮಾಲಿನ್ಯಗಳಿಗೆ ಸಂಭದಿಸಿದವುಗಳಾಗಿದ್ದವು. ಆದ್ದರಿಂದ ಒಟ್ಟಾರೆ ಪರಿಸರದ ರಕ್ಷಣೆಗೆ ಸಂಬಂಧಿಸಿದಂತೆ ಪರಿಪೂರ್ಣವಾದ ಮತ್ತು ಸರ್ವವ್ಯಾಪ್ತಿಯಾದ ಕಾನೂನು ಭಾರತದಲ್ಲಿ ಇರಲಿಲ್ಲ.
Parisara Samrakshane Essay in Kannada
Parisara Samrakshane Essay in Kannada

ಹೀಗಾಗಿ ಭಾರತದಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೊರಟಿತ್ತು. ಈ ವಿಷಯವನ್ನು ಮನಗಂಡ ಭಾರತ ಸರ್ಕಾರ ರಾಜೀವಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ(೧೯೮೬) ಪರಿಸರ ಸಂರಕ್ಷಣಾ ಕಾಯ್ದೆಯನ್ನು ರೂಪಿಸಿತು. ಇದಕ್ಕೆ ರಾಷ್ರ್ಟಪತಿಗಳು ಮೇ -೨೩-೧೯೮೬ರಂದು ಅನುಮೋದನೆ ನೀಡಿದರು. ಇದು ನವೆಂಬರ್ ೧೯೮೬ರಂದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲ್ಪಟ್ಟಿತು.

ನಿಮಗೆ ಕೆಳಗಿನವು ಕೂಡ ತಿಳಿದಿರಲಿ – ಓದಿ
ಕೈ ಕೆಸರಾದರೆ ಬಾಯಿ ಮೊಸರು ಗಾದೆ
Kannada Sandhigalu – ಕನ್ನಡ ಸಂಧಿಗಳು ಮತ್ತು ವಿವರಣೆ
RSS – ರಾಷ್ಟೀಯ ಸ್ವಯಂಸೇವಕ ಸಂಘ ಬಗ್ಗೆ

ಪರಿಸರ ಸಂರಕ್ಷಣೆ ಕಾಯ್ದೆ

ಈ ಮೊದಲು ರೂಪಿಸಲ್ಪಟ್ಟ ಶಾಸನಗಳಿಗಿಂತ ಈ ಶಾಸನ ಹೆಚ್ಚು ಉತ್ಕೃಷ್ಟವಾಗಿದೆ

ಪರಿಸರ ಸಂರಕ್ಷಣೆ, ನಿಯಂತ್ರಣ ಹಾಗೂ ಪರಿಸರ ಮಾಲಿನ್ಯ ಉಪಶಮನಗೊಳಿಸಿ ರಾಷ್ಟ್ರವ್ಯಾಪ್ತಿ ಯೋಜನೆ ಮತ್ತು ಕಾರ್ಯವಿಧಾನಗಳನ್ನೂ ರೂಪಿಸುವುದು.

ವಿವಿಧ ಹಂತಗಳಲ್ಲಿ ಪರಿಸರ ಗುಣಮಟ್ಟವನ್ನು ಎತ್ತರಿಸುವುದು.
ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋದಿಸಿದಂತೆ ಸಂಶೋಧನೆ ಕೈಗೊಳ್ಳುವುದು ಹಾಗು ಪ್ರಾಯೋಜಿಸುವುದು .

ಪರಿಸರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸುವುದು.
ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟಂತಹ ಕ್ಷೇತ್ರಗಳಿಗೆ ಭೇಟಿಕೊಡುವುದು ಮತ್ತು ತನಿಖೆ ಮಾಡುವುದು.

ಉಲ್ಲಂಘಿಸಿದ್ದಕ್ಕಾಗಿ ದಂಡ -5 ವರ್ಷಗಳಿಗೆ ಮಿರಿಂದಂತೆ ಕಾರಾಗೃಹವಾಸ ಶಿಕ್ಷೆಯನ್ನು ವಿಧಿಸಬಹುದು & 5000 ರೂಪಾಯಿ ದಂಡ

ಭಾರತದಲ್ಲಿ ಪರಿಸರ ಸಂರಕ್ಷಣೆ ಕುರಿತಾದ ಚಳುವಳಿಗಳು

  • ಚಿಪ್ಕೋ ಚಳುವಳಿ -1973
  • ಅಪ್ಪಿಕೋ ಚಳುವಳಿ -1982
  • ನರ್ಮದಾ ಬಚಾವೋ ಆಂದೋಲನ-1985
  • ಪಶ್ಚಿಮ ಘಟ್ಟಗಳ ಸಂರಕ್ಷಣಾ ಆಂದೋಲನ

ಪರಿಸರ ಸಂರಕ್ಷಣೆ ಕ್ರಮಗಳು ಮತ್ತು ಸಂರಕ್ಷಣೆಯಲ್ಲಿ ಮಾನವನ ಪಾತ್ರ.

1) ಓಜೋನ್ ಸೋರುವುಕೆಯಿಂದ ಹೆಚ್ಚಾಗುತ್ತಿರುವ ತೀಕ್ಷ್ಣವಾಗುತ್ತಿರುವ ಭೂಗ್ರಹದ ಶಾಖದಿಂದ, ಮತ್ತು ವೈಮಾನಿಕ ಅಂತರ ಗಡಿಯ ವಾಯುಮಾಲಿನ್ಯದಿಂದ ಪೃಥ್ವಿಯನ್ನು ಕಾಯ್ದುಕೊಳ್ಳುವುದು.


2)ಭೂ ಸಂಪನ್ಮೂಲಗಳಾದ ಅರಣ್ಯ, ಮಣ್ಣು,ಜಲ,ಖನಿಜ,ಇವುಗಳ ಭದ್ರತೆಯನ್ನು ಸಂರಕ್ಷಿಸುವುದು.


3)ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು.


4)ಸರೋವರಗಳನ್ನು ಸಮುದ್ರಗಳನ್ನು ಮತ್ತು ಕಡಲು ತೀರಗಳನ್ನು ರಕ್ಷಿಸುವುದಲ್ಲದೆ,ಆ ಸಂಪನ್ಮೂಲಗಳ ಬೆಳವಣಿಗೆ ಮತ್ತು ಶ್ರಾಸ್ತ್ರೀಯವಾದ ಬಳಕೆಯನ್ನು ಮಾಡುವುದು.


5)ಜೈವಿಕ ತಂತ್ರಜ್ಯಾನವನ್ನು, ಅಪಾಯಕಾರಕ ತ್ಯಾಜ್ಯಗಳನ್ನು (ವಿಷಪೂರಿತ ರಾಸಾಯನಿಕಗಳು ಸೇರಿದಂತೆ ) ಪರಿಸರ ತತ್ವಗಳ ಚೌಕಟ್ಟಿಗೆ ಹೊಂದಿಸಿ ಬಳಸುವುದು.


6)ವಿಷಪೂರಿತ ವಸ್ತುಗಳ ಮತ್ತು ತ್ಯಾಜ್ಯಗಳ ಅನಧಿಕೃತ ಮಾರಾಟವನ್ನು ತಡೆಗಟ್ಟುವುದು


7)ಮಾನವನ ಸ್ವಾಸ್ಥವನ್ನು ಮತ್ತು ಅವನ ಆರೋಗ್ಯದ, ಜೀವನದ ಗುಣಾತ್ಮಕ ಮೌಲ್ಯಗಳನ್ನು ನಿರ್ಮೂಲನೆ ಮಾಡಿ, ಪರಿಸರದ ಅವನತಿಯನ್ನು ತಡೆಗಟ್ಟಿ ಬಡವರ ಕಾರ್ಯಕ್ಷೇತ್ರದ ವಾತಾವರಣವನ್ನು ಸ್ವಚ್ಛಗೊಳಿಸಿ, ಅವರ ಜೀವನದ ಮೌಲ್ಯಗಳನ್ನು ಹೆಚ್ಚಿಸುವುದು.


8) ಬಡತನವನ್ನು ನಿರ್ಮೂಲನೆ ಮಾಡಿ, ಪರಿಸರದ ಅವನತಿಯನ್ನು ತಡೆಗಟ್ಟಿ ಬಡವರ ಕಾರ್ಯಕ್ಷೇತ್ರದ ವಾತಾವರಣವನ್ನು ಸ್ವಚ್ಛಗೊಳಿಸಿ ,ಅವರ ಜೀವನ ಮೌಲ್ಯವನ್ನು ಹೆಚ್ಚಿಸುವುದು


9) ಪರಿಸರಕ್ಕೆ ಹಾನಿಯಾಗದ ಅಗ್ಗ ದರದ ಶಕ್ತಿ ಮೂಲಗಳ ಅನ್ವೇಷಣೆ .

ಉಪಸಂಹಾರParisara samrakshane essay in Kannada

ಇಂದು ಭಾರತದಲ್ಲಿ 200 ಕ್ಕಿಂತ ಅಧಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಂತಹ ಕಾನೂನುಗಳಿವೆ. ಆ ಕಾನೂನುಗಳು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಪರಿಸರ ಮಾಲಿನ್ಯಕ್ಕೆ ಸಂಬಂಧ ಪಟ್ಟಂತಹವುಗಳಾಗಿವೆ.ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನುಆರೋಗ್ಯವಾಗಿಡಲು ಪ್ರಯತ್ನಿಸಬೇಕು.

ಈ ಪರಿಸರದ ವಿಷಯದಲ್ಲಿ ಕನ್ನಡದ ಸಾಲುಮರದ ತಿಮ್ಮಕ್ಕನವರು ಮಾದರಿಯಾಗಿದ್ದಾರೆ. ಪರಿಸರ ಸಂರಕ್ಷಣೆಯೇ ಜೀವಿಗಳ ರಕ್ಷಣೆ. ಪರಿಸರ ನಾಶ ವಿಶ್ವನಾಶದ ಮೂಲವಾಗಿದೆ. ಅದಕ್ಕಾಗಿ ನಮ್ಮ ಪರಿಸರವನ್ನು ಸಂರಕ್ಷಿಸಿದರೆ ನಮ್ಮನ್ನು ನಾವೇ ರಕ್ಷಿಸಿಕೊಂಡಂತೆ.ಪ್ರಾಥಮಿಕವಾಗಿ ಕೃಷಿ ವಲಯದಲ್ಲಿ ರಾಸಾಯನಿಕಗಳ ಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸಿ. ಇದನ್ನು ತಪ್ಪಿಸಲು ಸಾಧ್ಯವಾಗದಿದ್ದರೆ,ಯಾವುದೇ ರಾಸಾಯನಿಕವು ಪರಿಸರವನ್ನು ತಲುಪುವುದಿಲ್ಲ ಮತ್ತು ಬಳಕೆಯ ನಂತರ ತಟಸ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳಿ

ವಿಶ್ವ ಪರಿಸರ ದಿನವು ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 5 ರಂದು ಪರಿಸರ ಸುರಕ್ಷತಾ ಕಾರ್ಯಕ್ರಮವಾಗಿದೆ. ನಮ್ಮ ಪರಿಸರವನ್ನು ನಾಶಪಡಿಸುವ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಜನರು ಮತ್ತು ಅನೇಕ ಸಂಸ್ಥೆಗಳು ದಿನವನ್ನು ಆಚರಿಸುತ್ತವೆ. ಈ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವು ಪ್ರಪಂಚದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.

ಪರಿಸರ ಸಂರಕ್ಷಣೆ ಮಾಡಿ ಹಾಗು ನಿಮಗೆ ನಮ್ಮ Parisara samrakshane essay in Kannada, ಪರಿಸರ ಸಂರಕ್ಷಣೆಯ ಅವಶ್ಯಕತೆ ಕುರಿತು ಒಂದು ಪ್ರಬಂಧವನ್ನು ಬರೆಯಿರಿ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರು ಅಥವಾ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

FAQ :

ನಾವು ಪರಿಸರವನ್ನು ಏಕೆ ಸಂರಕ್ಷಿಸಬೇಕು?

“ಪರಿಸರ ಅಂದ್ರೆ ಹಸಿರು, ಹಸಿರೇ ನಮ್ಮ ಉಸಿರು” ಎಂಬ ನಾಣ್ನುಡಿ ಇದೆ. ಸ್ವಚ್ಛತೆ ಕಾಪಾಡಿಕೊಂಡು ಬದುಕಬೇಕು, ಹೀಗಾದಾಗ ಮಾತ್ರ ನಾವು ಪರಿಸರದಿಂದ ಒಳ್ಳೆಯ ಮಳೆ, ಬೆಳೆ ಪಡೆಯಲು ಸಾಧ್ಯ .”ನಾವು ಯಾವ ಬೀಜ ಬಿತ್ತುತ್ತೇವೆಯೋ ಅದೇ ಫಲ ಪಡೆಯುತ್ತೇವೆ” ಎಂಬ ಮಾತಿದೆ, ಇದರರ್ಥ ನಾವು ಗಿಡ ಮರ ಬೆಳೆಸಿ, ದುರಾಸೆ ಬಿಟ್ಟು ಪರಿಸರದ ಜೊತೆಗೆ ಬಾಂಧವ್ಯ ಹೊಂದಬೇಕು .ಭೂಮಂಡಲದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ

ಪರಿಸರ ಸಂರಕ್ಷಣಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ವಿಶ್ವ ಪರಿಸರ ದಿನವು ಪ್ರಪಂಚದಾದ್ಯಂತ ಪ್ರತಿ ವರ್ಷ ಜೂನ್ 5 ರಂದು ಪರಿಸರ ಸುರಕ್ಷತಾ ಕಾರ್ಯಕ್ರಮವಾಗಿದೆ

Leave a Comment

error: Content is protected !!